Friday, 3rd February 2023

ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರಿಸಲು ಆಗ್ರಹಿಸಿ 340 ಕಿಮೀ ಪಾದಯಾತ್ರೆ

ತುಮಕೂರು: ಈಗಾಗಲೇ ಎಸ್ ಟಿ ಪಟ್ಟಿಯಲ್ಲಿದ್ದರೂ ಸಹ ಮೀಸಲಾತಿಯಿಂದ ವಂಚಿತವಾಗಿರುವ ರಾಜ್ಯ ಕುರುಬ ಸಮುದಾಯ ವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಲು 340 ಕಿಲೋಮೀಟರ್ ನ 24 ದಿನಗಳ ಈ ಪಾದಯಾತ್ರೆ ಶ್ರೀಕ್ಷೇತ್ರ ಕಾಗಿನೆಲೆಯಿಂದ ಕಳ್ಳಂಬೆಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ವರೆಗೆ ಬಂದು ತಲುಪಿದ್ದು 15 ನೇ ದಿನ ಪಾದಯಾತ್ರೆ ಪೂರೈಸಿದೆ.

ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಶಾಖಾಮಠದ ಹಾಗೂ ಪಾದಯಾತ್ರೆ ಯ ನೇತೃತ್ವವಹಿಸಿರುವ ಪರಮಪೂಜ್ಯ ಈಶ್ವರಾನಂದಪುರಿ ಮಹಾಸ್ವಾಮಿಗಳು ಮಾತನಾಡುತ್ತಾ ಸುಮಾರು 5 ತಿಂಗಳಿಂದ ಎಸ್.ಟಿ ಮೀಸಲಾತಿಗೆ ಕುರುಬರು ಒಳಪಡಿಸುವಂತೆ ಒತ್ತಾಯಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಎಷ್ಟು ಮನವಿ ಸಲ್ಲಿಸಿ ದರು.

ಯಾವುದೇ ಉತ್ತರವನ್ನು ಸರ್ಕಾರದಿಂದ ನೀಡದಿದ್ದಕ್ಕಾಗಿ ಶ್ರೀ ಕಾಗಿನೆಲೆ ಮಠವು ಶ್ರೀ ಕ್ಷೇತ್ರ ಕಾಗಿನೆಲೆ ಇಂದ ಬೆಂಗಳೂರಿನ ವರೆಗೂ ಹಕ್ಕೊತ್ತಾಯದ ಪಾದಯಾತ್ರೆಯನ್ನು ಎಲ್ಲ ಪರಮಪೂಜ್ಯರುಗಳ ಹಾಲುಮತ ಕುಲಗುರುಗಳ ಕರ್ನಾಟಕ ಪ್ರದೇಶ ಕುರುಬರ ಸಂಘದ ಹಾಗೂ ಎಲ್ಲಾ ಕುರುಬ ಸಮಾಜದ ಸಂಘಟನೆಗಳ ವತಿಯಿಂದ ಈ ಪಾದಯಾತ್ರೆ ಸಂಘಟಿಸಿದ್ದು ಯಾವುದೇ ಕಾರಣ ಕ್ಕಾಗಿಯೂ ಈ ಹೋರಾಟ ನಿಲ್ಲದು ಎಂದು ಅವರು ತಿಳಿಸಿದರು.

ಈ ದೇಶದಲ್ಲಿ ನಮ್ಮ ಜನಾಂಗ ಬುಡಕಟ್ಟು ಲಕ್ಷಣವಿರುವ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಸಮುದಾಯ ವಾಗಿದೆ. ಕಾಡುಮೇಡುಗಳಲ್ಲಿ ಇಂದಿಗೂ ವಾಸಿಸುವ ನಮ್ಮ ಕುರುಬ ಜನಾಂಗದವರು ಅತಿ ಹಿಂದುಳಿದ ಜನಾಂಗವಾಗಿದೆ ಎಂದು ಹೊಸದುರ್ಗ ಶಾಖಾಮಠದ ಈಶ್ವರನಂದಾ ಪುರಿ ಮಹಾ ಸ್ವಾಮಿಗಳು ತಿಳಿಸಿದರು. 1950 ರ ಇಸವಿಯಲ್ಲಿ ನಮ್ಮ ಕುಬರ ಎಸ್.ಟಿ. ಪಟ್ಟಿಯಲ್ಲಿ ಇತ್ತು. ಆದರೆ 1958 ರಲ್ಲಿ ನಾನು ಜಾಗೃತಿ ಯಾಗದಿದ್ದಾಗ ಈ ಎಸ್.ಟಿ .ಪಟ್ಟಿ ಇಂದ ತೆಗೆದು ಹಾಕಿದರು. ಆಗ ನಮ್ಮ ಜನಾಂಗ ಸದೃಢವಾಗಿಲ್ಲ ಎಸ್ಟಿ ಪಟ್ಟಿಯನ್ನು ಸೇರಲು ಸಾಧ್ಯವಾಗಿಲ್ಲ ಆದರೆ ಇಂದು ನಮ್ಮ ಹಾಗು ನಿಮ್ಮೆಲ್ಲರ ಹೋರಾಟದಿಂದ ಮಾತ್ರ ಸಾಧ್ಯ ಎಂದು ಅವರು ಸಮುದಾಯಕ್ಕೆ ಕರೆ ನೀಡಿದರು.

ಶ್ರೀ ನಿರಂಜನಂದಪುರಿ ಮಹಾಸ್ವಾಮೀಜಿಗಳು ಮಾತನಾಡುತ್ತಾ ಈ ಎಸ್.ಟಿ ಕುಬರ ಪಾದಯಾತ್ರೆ ಮುಂದಿನ ಪೀಳಿಗೆಯ ಭವಿಷ್ಯ ಕ್ಕಾಗಿ ನಾವು ಇಂದು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಿರಾ ನಗರದಿಂದ ಕಳ್ಳಂಬೆಳ್ಳ ಬಂದು ತಲುಪಿದ ಕುರುಬರ ಜಾಗೃತಿ ಪಾದಯಾತ್ರೆ ಯಲ್ಲಿ ಹಮ್ಮಿಕೊಂಡಿದ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಫೆಬ್ರವರಿ 7 ರಂದು ನೆಡೆಯುವ ಕುರುಬರ ಎಸ್ಟಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿ ಇದ್ದಾರೆ ಈ ಸಾರಿ ನಾವು ಯಾವುದೇ ಕಾರಣಕ್ಕೂ ಮೀಸಲಾತಿ ಇಂದ ವಂಚಿತರಾಗುವುದು ಬೇಡ ಅಲ್ಲಿ ನಾವು ಮೊಳಗಿಸುವ ಶಬ್ದ ದೆಹಲಿಗೆ ಹೋಗಿ ಮೊಳಗಬೇಕು ಹಾಗೂ ನಾವು ಒಡೆಯುವ ಡೊಳ್ಳಿನ ಶಬ್ದ ದೆಹಲಿಯಲ್ಲಿರುವ ಜನಪ್ರತಿನಿಧಿಗಳ ಕಿವಿಗೆ ಮುಟ್ಟಬೇಕು.

ಈಗೆ ಆಗಬೇಕೆಂದರೆ ನಮ್ಮ ಕುರುಬ ಸಮುದಾಯದ ಜನಪ್ರತಿನಿಧಿಗಳು ಹೆಂಗಸರು ಮಕ್ಕಳು ಹಿರಿಯ ನಾಯಕರುಗಳು ಸಮಾ ರೋಪದಲ್ಲಿ ಭಾಗವಹಿಸುವ ಪ್ರಾಮುಖ್ಯತೆ ಬಹಳ ಮುಖ್ಯವಾದದ್ದು ಎಂದು ಜಗದ್ಗುರುಗಳು ಶ್ರೀ ನಿರಂಜನಂದಪುರಿ ಮಹಾ ಸ್ವಾಮೀಜಿಗಳು ಕಳ್ಳಂಬೆಳ್ಳ ದಲ್ಲಿ ಪಾದಯಾತ್ರೆಯನ್ನು ಉದ್ದೇಶಿ ಮಾತನಾಡಿದರು.

ನಮಗೆ ಈ ಸಾರಿ ನೂರಕ್ಕೆ ನೂರು ಎಸ್ ಟಿ ಮೀಸಲಾತಿ ಸಿಗುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ಪಾದಯಾತ್ರೆಯನ್ನು ರಾಜಧಾನಿಯ ವರೆಗೆ ಬಹಳ ಶಿಸ್ತಿನಿಂದ ಈ ಎಸ್.ಟಿ. ಕುರುಬರ ಜಾಗೃತಿ ಪಾದಯಾತ್ರೆಯನ್ನು ಮಾಡಿದರೆ ಮಾತ್ರ ನಮಗೆ ಈ ಕುರುಬ ಎಸ್ಟಿ ಮೀಸಲಾತಿ ಲಭಿಸುತ್ತದೆ ಎಂದು ಅವರು ಅವರು ತಿಳಿಸಿದರು.

ಈ ಸಭೆಯಲ್ಲಿ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಡಾ ಎಂ ಆರ್ ಹುಲಿನಾಯ್ಕರ್, ಜಿಲ್ಲಾ ಜಾತ್ಯತೀತ ಜನತಾ ದಳದ ಅಧ್ಯಕ್ಷರಾದ ಆರ್ ಸಿ ಆಂಜನಪ್ಪ ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ ಮಂಜು ನಾಥ್, ಮಧುಗಿರಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಕೊಂಡವಾಡಿ ತಿಮ್ಮಯ್ಯ ಕುರುಬರ ಜಾಗೃತಿ ಪಾದಯಾತ್ರೆಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಪಾವಗಡ ಮಧುಗಿರಿ ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳು ಹಾಗೂ ಜಿಲ್ಲಾ ಹಾಗೂ ತಾಲೂಕು ಕುರುಬ ಸಂಘದ ಅಧ್ಯಕ್ಷರುಗಳು ಗೌರಿಬಿದನೂರಿನ ಸಮಾಜದ ಮುಖಂಡರಾದ ಕೆಂಪರಾಜು ಕರ್ನಾಟಕ ಪ್ರದೇಶ ಕುರುಬರ ಸಂಘದ ತುಮಕೂರು ಜಿಲ್ಲೆ ನಿರ್ದೇಶಕರಾದ ಟಿ ಇ ರಘುರಾಮ್ ಶ್ರೀಮತಿ ಭಾಗ್ಯಮ್ಮ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸುಸಂದರ್ಭದಲ್ಲಿ ಹಾಲುಮತದ ಕುಲಗುರುಗಳಾದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಹಗ್ಗ ತೀರ್ಥ, ಶ್ರೀ ರೇವಣ್ಣ ಸಿದ್ದೇಶ್ವರ ಮಹಾಮಠ ಸರುರು ಅಗ ತೀರ್ಥ, ಪ.ಪೂ.ಶ್ರೀ ಸೋಮಲಿಂಗೇಶ್ವರ ಮಹಾಸ್ವಾಮಿಗಳು ಮಕಣಾಪುರ, ಶ್ರೀ ರಾಮಪ್ಪ ನವರು ಮೈಲಾರಲಿಂಗೇಶ್ವರ ಕಾಣಿಕಗೊರವಯ್ಯನವರ ಮೈಲಾರ, ಶ್ರೀ ಮತ್ತೆಶ್ವರ ಸ್ವಾಮೀಜಿಗಳು ಶ್ರೀ ರೇವಣ್ಣ ಸಿದ್ದೇಶ್ವರಮಠಸ್ವಾಮೀಜಿಗಳು ಬೆಂಗಳೂರು, ಶ್ರೀ ಅದೇನಾ ಮಾದಯ್ಯ ಸ್ವಾಮಿಗಳು ಗುರುವಿನಮಠ ಅಮೋಘ ರೇವಣ್ಣ ರೇವಣ್ಣ ಸಿದ್ದೇಶ್ವರ ಮಠದ ಸ್ವಾಮೀಜಿಗಳು ತುರುವಿಹಾಳ, ಶ್ರೀ ಶರಭಯ್ಯ ಸ್ವಾಮೀಜಿಗಳು ಶ್ರೀ ರೇವಣ್ಣದೇಶ್ವರ ಮಠ ಮನಗೂಳಿ , ಶ್ರೀ ಸಂಗಯ್ಯ ಗುರುವಿನನವರ್ ಗೋನಾಳ ಮಠ ಹೊಸರಿತ್ತಿ , ಶ್ರೀ ರೇವಯ್ಯ ಒಡೆಯರ್ ಬೆಂಗಳೂರು, ಶ್ರೀ ಮಾಳಿಂಗರಾಯ ಮಹಾಸ್ವಾಮೀಜಿ ಹುಲಜಂತಿ, ಶ್ರೀ ಓಂಕಾರ ಒಡೆಯರ್ ಹೊಸದುರ್ಗ, ಗುರುಗಳು ಉಪಸ್ಥಿತರಿದ್ದರು.

error: Content is protected !!