Tuesday, 27th July 2021

ಕೋಲಾರದ ಸೀಗೇಹಳ್ಳಿ ಗೇಟ್ ಬಳಿ ಶಾಲಾ ವಾಹನ ಪಲ್ಟಿ: ವಿದ್ಯಾರ್ಥಿಗಳಿಗೆ ಗಾಯ

ಕೋಲಾರ : ಜಿಲ್ಲೆಯ ಮುಳುಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್ ಬಳಿ, ಬೆಳಿಗ್ಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಪಲ್ಟಿ ಆಗಿ, ಅದರಲ್ಲಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್ ಬಳಿ ನಂಗಲಿಯಿಂದ ಮುಳಬಾಗಿಲು ಪಟ್ಟಣದ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾ ಗಿದೆ.

ಶಾಲಾ ವಾಹನ ಪಲ್ಟಿಯಾಗಿ ಗಾಯಗೊಂಡಿರುವ 15ಕ್ಕೂ ಹೆಚ್ಚು ಮಕ್ಕಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮುಳುಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *