Friday, 18th June 2021

ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಕನಸು ನನಸಾಗಲಿ ಶ್ರೀಗಳ ಆರ್ಶಿವಾದ

ಎಲೆರಾಂಪುರ ಶ್ರೀಮಠ ಸ್ವಾಮೀಯ ೩೯ನೇ ಜನ್ಮ ದಿನಾಚರಣೆ ಸಮಾರಂಭ

ಕೊರಟಗೆರೆ: ೨೦೧೪ರ ವಿಧಾನಸಭೆ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಸೋಲಿನಿಂದ ಕಲ್ಪತರು ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. ೨೦೨೩ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದಲೇ ಜಯಗಳಿಸಿ ಕರುನಾಡಿನ ಮುಖ್ಯಮಂತ್ರಿ ಯ ಕನಸು ನನಸಾಗಲಿ ಎಂದು ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಆರ್ಶಿವಾದ ಮಾಡಿದರು.

ಕಲ್ಪತರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ಎಲೆರಾಂಪುರ ಶ್ರೀನರಸಿಂಹಗಿರಿ ಕ್ಷೇತ್ರದಲ್ಲಿ ಭಕ್ತರಿಂದ ಗುರುವಾರ ಏರ್ಪಡಿಸಲಾಗಿದ್ದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿಯ ೩೯ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಡಾ.ಜಿ.ಪರಮೇಶ್ವರ ರಾಜ್ಯದ ಡಿಸಿಎಂ ಆಗಿದ್ದ ವೇಳೆ ಕೊರಟಗೆರೆ ಕ್ಷೇತ್ರದ ಗ್ರಾಮೀಣ ರಸ್ತೆ ಮತ್ತು ಎತ್ತಿನಹೊಳೆ ಯೋಜನೆಗೆ ಬಿಡುಗಡೆ ಆಗಿದ್ದ ೨೫೦ಕೋಟಿಗೂ ಅಧಿಕ ಅನುಧಾನ ದ್ವೇಷದ ರಾಜಕಾರಣ ಮಾಡಿ ಸರಕಾರ ಹಿಂದಕ್ಕೆ ಪಡೆದಿದೆ. ತುಮಕೂರು ಜಿಲ್ಲೆಯ ಮಾದರಿ ಶಾಸಕರಾಗಿ ಕೊರಟಗೆರೆ ಕ್ಷೇತ್ರದ ಬಡಜನರ ಆರೋಗ್ಯ ಸೇವೆ ಮಾಡುತ್ತೀರುವ ಕೆಲಸ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿ ಎಲೆರಾಂಪುರ ಶ್ರೀಮಠದಿಂದ ಪ್ರತಿನಿತ್ಯ ಧಾರ್ಮಿಕ ಮತ್ತು ಸಾಮಾಜಿಕ ಕೆಲಸ ನಡೆಯುತ್ತೀವೆ. ಮಾನವೀಯ ಮೌಲ್ಯವನ್ನು ಸಾರುತ್ತೀರುವ ಶ್ರೀಕ್ಷೇತ್ರವು ಕೊರಟಗೆರೆಯ ಪುಣ್ಯಕ್ಷೇತ್ರ ಆಗಿದೆ. ಬಡಜನರಿಗೆ ಸಹಾಯಹಸ್ತ ಮತ್ತು ನಿರಾಶ್ರಿತರಿಗೆ ನೆರವು ನೀಡುತ್ತೀರುವ ಎಲೆರಾಂಪುರ ಶ್ರೀಕ್ಷೇತ್ರದ ಡಾ.ಹನುಮಂತನಾಥ ಸ್ವಾಮೀಜಿಯ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಎಲೆರಾಂಪುರ ಶ್ರೀಮಠ ಬಡಮಕ್ಕಳು, ಅನಾಥ ಮಕ್ಕಳ ಪಾಲಿನ ದೇವಾಲಯ ಆಗಿದೆ. ಶ್ರೀಗಳು ಆಶ್ರಯ ಮತ್ತು ಅನ್ನಧಾನ ಮಾಡಿ ಧಾರ್ಮಿಕ ಸೇವೆಯನ್ನು ಸಾರುತ್ತೀದೆ. ಶ್ರೀಗಳ ಸೇವೆಯ ಜೊತೆ ನಾವೇಲ್ಲರೂ ಸದಾ ಇರುತ್ತೇವೆ. ಶ್ರೀಗಳು ಮಠದ ಜೊತೆ ರೈತನಾಗಿ ಕಾಯಕದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ತಹಶೀಲ್ದಾರ್ ಗೋವಿಂದರಾಜು, ಕೋಳಾಲ ಮಹಾಲಕ್ಷ್ಮೀ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಕಾರ್ಯದರ್ಶಿ ದಿನೇಶ್, ಜಿಪಂ ಸದಸ್ಯ ಶಿವರಾಮಯ್ಯ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಮಾಜಿ ಸದಸ್ಯ ರವಿಕುಮಾರ್, ತೀತಾ ಗ್ರಾಪಂ ಸದಸ್ಯ ರವಿವರ್ಮ ಸೇರಿದಂತೆ ಇತರರು ಇದ್ದರು.

ಎಲೆರಾಂಪುರ ಶ್ರೀಗಳ ಹುಟ್ಟುಹಬ್ಬ ಆಚರಣೆ..
ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಹುಟ್ಟುಹಬ್ಬದ ಪ್ರಯುಕ್ತ ಲಕ್ಷ್ಮೀನರಸಿಂಹಸ್ವಾಮಿಗೆ ಹೋಮ ಹವನ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ. ಶ್ರೀಮಠದ ಆವರಣದಲ್ಲಿ ರಕ್ತಧಾನ ಶಿಭಿರ, ಕೊರಟಗೆರೆಯ ಪೊಟೋ ಗ್ರಾಫರ್‌ಗಳಿಗೆ ಆಹಾರದ ಕಿಟ್ ವಿತರಣೆ, ಕೋವಿಡ್ ಕೇರ್‌ಸೆಂಟರ್ ಮತ್ತು ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷದ ಕಿಟ್, ಕೋಳಾಲ ಪೊಲೀಸ್ ಸಿಬ್ಬಂದಿಗಳಿಗೆ ಪೇಸ್ ಶೀಲ್ಡ್ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮ ಭಕ್ತಾಧಿಗಳ ಸಮ್ಮುಖದಲ್ಲಿ ನಡೆದಿವೆ.

***

ಎಲೆರಾಂಪುರ ಶ್ರೀಮಠದಿಂದ ನಿರಾಶ್ರಿತ ಮತ್ತು ಬಡವರಿಗೆ ಆದರ್ಶ ವಿವಾಹದ ಹೆಸರಿನಲ್ಲಿ ಮಠದ ವಾರ್ಷಿಕೋತ್ಸವದ ವೇಳೆ ಸಾಮೂಹಿಕ ವಿವಾಹ. ಅಶಕ್ತ ಮತ್ತು ಅನಾಥ ಮಕ್ಕಳಿಗಾಗಿ ವಿದ್ಯಾರ್ಥಿ ಮತ್ತು ವಸತಿ ನಿಲಯ, ಸದ್ವಿದ್ಯಾ ಸಂಸ್ಕೃತ ಪಾಠಶಾಲೆಯ ಮೂಲಕ ಜ್ಞಾನಯಜ್ಞ. ಪರಿಸರ ಉಳಿವಿಗಾಗಿ ೧೦ಸಾವಿರಕ್ಕೂ ಅಧಿಕ ಗಿಡಗಳ ಪೋಷಣೆಗೆ ಆದ್ಯತೆ ನೀಡಲಾಗಿದೆ.
ಡಾ.ಹನುಮಂತನಾಥ ಸ್ವಾಮೀಜಿ. ಪೀಠಾಧ್ಯಕ್ಷ. ಶ್ರೀಮಠ ಎಲೆರಾಂಪುರ.

Leave a Reply

Your email address will not be published. Required fields are marked *