Sunday, 3rd July 2022

ಚಿಮ್ಮಾಇದ್ಲಾಯಿ ಗ್ರಾಪಂ: ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧ ಆಯ್ಕೆ

ಚಿಂಚೋಳಿ: ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧ ಆಯ್ಕೆಯಾಗಿ ದ್ದಾರೆ.

ಪಂಚಾಯತಿಯಲ್ಲಿ ಒಟ್ಟು12 ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಸವಿತಾ ಶಿವ ಯೋಗಿ ರಸ್ತಂಪೂರ್, ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಬಕ್ಕಪ್ಪ ಚಿಂಚೋಳಿ ಕರ್ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆ ಯಾದ ಹಿನ್ನಲೆ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ತಹಸಿಲ್ದಾರ್ ಅಂಜುಮ್ ತಬಸ್ಸುಮ್ ರವರು ತಿಳಿಸಿದ್ದಾರೆ.

ಸ್ಥಳೀಯ ಶಾಸಕ ಡಾ. ಅವಿನಾಶ ಜಾಧವ್ ಅವರು ಗ್ರಾಮ ಪಂಚಾಯಿತಿಗೆ ಆಗಮಿಸಿ, ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾ ಧ್ಯಕ್ಷರನ್ನು ಸನ್ಮಾನಿಸಿ ಶುಭಕೋರಿದರು.

ಈ ಸಂಧರ್ಭದಲ್ಲಿ ತಾಲೂಕ ಬಿಜೆಪಿ ವಕ್ತಾರ ಶ್ರೀಮಂತ ಕಟ್ಟಿಮನಿ, ಪ್ರೆಮಸಿಂಗ್ ಜಾಧವ್, ಕೆ. ಎಂ.ಬಾರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ್, ಶಿವಯೋಗಿ ರುಸ್ತಂಪೂರ್, ರವಿ ಹೊಸಭಾವಿ, ಶಾಮರಾವ್ ಕೊರವಿ ರಾಜು ಪವಾರ ಇದ್ದರು.