Monday, 30th January 2023

ತೃತೀಯ ಲಿಂಗ ಮೀಸಲಾತಿ: ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಆಯ್ಕೆ

ಮಾನವಿ : ತಾಲೂಕಿನ ನೀರಮಾನವಿ ಗ್ರಾಮದ ಅಶ್ವಥಾಮ ( ಪೂಜಾ ) ತಂದೆ ಮಾರೆಪ್ಪ ಇವರು ತೃತೀಯ ಲಿಂಗ ಮೀಸಲಾತಿ ಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿ ಕೊಂಡು ರಾಜ್ಯ ಶಿಕ್ಷಣ ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮ ಕಾತಿ ಪರೀಕ್ಷೆಯಲ್ಲಿ ಅಧಿಕೃತ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು ಸಮಾಜ ವಿಜ್ಞಾನ ವಿಷಯದ ಶಿಕ್ಷಕನಾಗಿ ಆಯ್ಕೆಯಾಗಿದ್ದು ನೀರಮಾನವಿ ಗ್ರಾಮದ ಜನರು ಸಂತೋಷವನ್ನು ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಗ್ರಾಮದಲ್ಲಿ ಜನಿಸಿದ ಇವರು 1 ರಿಂದ 10 ನೇ ತರಗತಿಯವರೆಗೆ ನೀರಮಾನವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಇವರು ನಂತರ ಮಾನವಿ ಪಟ್ಟಣದಲ್ಲಿ ಪದವಿ ಪೂರ್ವ, ಪದವಿಯನ್ನು ಪೂರ್ಣಗೊಳಿಸಿದ ಇವರು ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿ ಇ ಎಡ್ ಪೂರ್ಣಗೊಳಿಸಿ ಇಂದು ತೃತೀಯ ಲಿಂಗಿಯ ಮೀಸಲಾತಿಯಲ್ಲಿ ರಾಜ್ಯದ ಮೂರು ಜನರಲ್ಲಿ ಇವರೊಬ್ಬರಾಗಿ ಆಯ್ಕೆಯಾಗಿ ತಮ್ಮ ಜೀವನದ ಗುರಿಯನ್ನು ತಲುಪಿ ಎಲ್ಲರಲ್ಲೂ ಅಚ್ಚರಿಯುಟ್ಟು ಮಾಡಿದ್ದಾರೆ.

error: Content is protected !!