Monday, 5th December 2022

ಪಿಕಾರ್ಡ ಬ್ಯಾಂಕ್ ಹ್ಯಾಟ್ರಿಕ್ ಅಧ್ಯಕ್ಷರಾಗಿ ಪಿ.ಎಲ್.ಪೋಮ್ಯನಾಯ್ಕ ಅವಿರೋಧ ಆಯ್ಕೆ

ಹರಪನಹಳ್ಳಿ: ಸ್ಥಳೀಯ ಪಿಕಾರ್ಡ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಪಿ.ಎಲ್.ಪೋಮ್ಯ ನಾಯ್ಕರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪವನಕುಮಾರ ಘೋಷಣೆ ಮಾಡಿದರು.

ಪಟ್ಟಣದ ತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಗುರುವಾರ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಪಿ.ಎಲ್.ಪೋಮ್ಯ ನಾಯ್ಕ ಅವರು ಮಾತ್ರ ನಾಮ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಮಾಡಲಾಯಿತು. ನಂತರ ಕಾಂಗ್ರೆಸ್ ಪಕ್ಷದ ಮುಖಂಡರು, ನಿರ್ದೇಶಕರು, ಆಗಮಿಸಿ ಅಭಿನಂದನೆ ಸಲ್ಲಿಸಿದರು.

ಈ ಹಿಂದೆ ನೂತನ ಅಧ್ಯಕ್ಷ ಪಿ.ಎಲ್. ಪೋಮ್ಯಾನಾಯ್ಕ ರವರು ಶಿವಮೊಗ್ಗ ಜಿಲ್ಲೆಯ ಹಾಲು ಒಕ್ಕೂಟದ ನಿರ್ದೇಶಕರಾಗಿ, ಮತ್ತು ರಾಜ್ಯ ಕಾರ್ಮಿಕ ಇಲಾಖೆಯ ನಿರ್ದೇಶಕರಾಗಿ ದ್ದರು.

ಪಿಕಾರ್ಡ ಬ್ಯಾಂಕ್‌ನ ನೂತನ ಅಧ್ಯಕ್ಷ ಪಿ.ಎಲ್.ಪೋಮ್ಯನಾಯ್ಕ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲು ಸಾದ್ಯವಾಗಿದ್ದು, ಇದೇ ರೀತಿಯ ಒಗ್ಗಟ್ಟು ಮುಂದುವರೆಯಲಿ ಎಂದ ಅವರು ನಾನು ಈಗಾಗಲೇ ನಾಲ್ಕು ಬಾರಿ ನಿರ್ದೇಶಕನಾಗಿ, ಮೂರು ಬಾರಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ರೈತರ ಮೇಲೆ ಯಾವುದೇ ಹೊರೆಯಾಗದಂತೆ ಸಾಲ ನೀಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಹರಪನಹಳ್ಳಿ ತಾಲೂಕಿನ ಬ್ಯಾಂಕ್ ವಸೂಲಾತಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು, ನಮ್ಮ ತಾಲೂಕಿನ ರೈತರು ಸಹ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡುತ್ತಾ ಬಂದಿರುವುದು ಸಹ ಪ್ರಾಮಾಣಿಕತೆ, ಎಲ್ಲರ ಸಹಕಾರದಿಂದ ಮತ್ತಷ್ಟು ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಹೇಳಿದರು.

ಜಿಪಂ ಮಾಜಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಕಾಂಗ್ರೆಸ್ ಮುಖಂಡ ಹೆಚ್.ಕೆ.ಹಾಲೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ್ ಉಪಾದ್ಯಕ್ಷ ಟಿ.ಜಗದೀಶ, ಪುರಸಭೆ ಸದಸ್ಯ ಜೋಗಿನ್ನರ ಭರತೇಶ್, ಪಿಕಾರ್ಡ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಸಿದ್ದೇಶ್, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪ್ರೇಮಕುಮಾರ, ಪಿ.ಬಿ.ಗೌಡ್ರು, ಆರ್.ಶಿವಕುಮಾರ ಗೌಡ, ಸಾಬಳ್ಳಿ ಜಂಬಣ್ಣ, ಎಚ್.ದೇವರಾಜ, ಅಲರಸಿಕೇರಿ ಪರಶುರಾಮ, ಕೆ.ಭರಮನಗೌಡ, ಕುಂಚೂರು ಬಸವರಾಜಪ್ಪ, ಶಾಂತಕುಮಾರರೆಡ್ಡಿ, ಹಾಗೂ ಬ್ಯಾಂಕ್ ಸಿಬ್ಬಂಧಿ ಸೇರಿದಂತೆ ಇತರರು ಇದ್ದರು.