Friday, 7th May 2021

ಲಾಕ್ ಡೌನ್ ಹೆಸರಲ್ಲಿ ನಡೆಯುತ್ತಿದೆ ಗುಟ್ಕಾ ಪ್ರೀಯರಿಗೆ  ದುಬಾರಿ ಪೆಟ್ಟು

ಪಾವಗಡ: ಪಕ್ಕದ ಆಂಧ್ರಪ್ರದೇಶದ ವಾಸಿಗಳು ವ್ಯಾಪಾರ ವಹಿವಾಟುಗಳು, ವಸ್ತುಗಳನ್ನು ಖರೀದಿಗಾಗಿ ಬರುವುದು ವಾಡಿಕೆ. ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಲಾಕ್ ಡೌನ್ ವ್ಯವಸ್ಥೆಯನ್ನು ಕೆಲ ವ್ಯಾಪಾರಿ ಗಳು ದುರ್ಬಳಕೆ ಮಾಡಿಕೊಂಡು ಮೂರ್ನಾಲ್ಕು ಪಟ್ಟು ದುಬಾರಿ ವೆಚ್ಚದ ಗುಟ್ಕಾ ವಸ್ತುಗಳು ಮಾರಾಟ ಮಾಡುತ್ತಿ ರುವ ಪ್ರಕರಣಗಳು ಮೊದಲ ದಿನವೇ ಬೆಳಕಿಗೆ ಬಂದಿವೆ.
ಲಾಕ್ಡೌನ್ ವೇಳೆಯಲ್ಲಿ ಸಾಮಾನ್ಯ ಜನರ ಟೈಮ್ ಪಾಸ್  ಮಾಡಲು ಕೆಲವೊಂದು ಅಭ್ಯಾಸಗಳು ಮಾಡಿಕೊಂಡಿರುತ್ತಾರೆ. ಅದರಲ್ಲಿ ಗುಟ್ಕಾ ಸಿಗರೇಟು ಮದ್ಯ ಇಂತಹ ಚಟಗಳು ಸಾಮಾನ್ಯ ಜನ ಗಳಲ್ಲಿ ಕಾಣಬಹುದಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ವ್ಯಾಪರಿಗಳು ಪಟ್ಟಣದ ಹೋಲ್ ಸೇಲ್ ಅಂಗಡಿಗಳ ಲ್ಲಿ ಬಂದು ಗುಟ್ಕಾ.ಇನ್ನೂ ಇತರೆ ವಸ್ತುಗಳ ಬೆಲೆಯನ್ನು ಜನರಿಂದ ಪಿಕುತ್ತಿದ್ದರೆ.ಲಾಕ್ ಡೌನ್ ಹೆಸರಲ್ಲಿ ಇಂತಹ ದಂದೆಗಳು ಹೆಚ್ಚಾಗಿ ನಡೆಯುವುದು ಸರ್ವೆ ಸಾಮಾನ್ಯ.
ಇದನ್ನೇ ಕೆಲವು ವ್ಯಾಪಾರಿಗಳು ಉಪಯೋಗ ಮಾಡಿಕೊಂಡು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.ಇದರ ಬಗ್ಗ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರ್ ಕ್ರಮ ಕೈಗೊಳ್ಳಲು ಮುಂದಾ ಗಬೇಕಾಗಿದೆ ಎಂದು ಗುಟ್ಕಾ ಪ್ರಿಯರು .ಮಾದ್ಯಮಗಳ ಮುಂದೆ ಆಳಲು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಲ್ಲಾ ವ್ಯಾಪಾರಸ್ಥರ ಅಂಗಡಿ ಮುಂದೆ ದಿನಸಿ ವಸ್ತುಗಳ ಬೆಲೆಯ ನಾಮ ಫಲಕ ಹಾಕಬೇಕು ಯಾವುದೇ ಕಾರಣಕ್ಕೂ ಜನರಿಂದ ದುಬಾರಿ ಹಣವನ್ನು ಪಡೆದಂತಹ ಅಂಗಡಿ ಮಾಲಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ ವಾಗಿದೆ.

Leave a Reply

Your email address will not be published. Required fields are marked *