Friday, 27th May 2022

ಸಂವೇದಿ ಸೂಚ್ಯಂಕ 104.31 ಅಂಕಗಳ ಏರಿಕೆ

ಮುಂಬೈ: ಒಮೈಕ್ರಾನ್, ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಮುಂಬೈ ಷೇರುಪೇಟೆಯಲ್ಲಿ ಬುಧವಾರ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 100ಕ್ಕೂ ಅಧಿಕ ಅಂಕಗಳಷ್ಟು ಏರಿಕೆ ಕಂಡಿದೆ.

ಷೇರುಪೇಟೆಯ ಸಂವೇದಿ ಸೂಚ್ಯಂಕ 104.31 ಅಂಕಗಳಷ್ಟು ಏರಿಕೆಯೊಂದಿಗೆ, 58,001.79 ಅಂಕಗಳಲ್ಲಿ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ ಕೂಡ 28.45 ಅಂಕ ಏರಿಕೆಯಾಗಿದ್ದು, 17,261.70 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಇಂಡಸ್ ಇಂಡ್ ಬ್ಯಾಂಕ್, ಡಾ.ರೆಡ್ಡೀಸ್ ಲ್ಯಾಬೋರೇಟರಿ, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಆಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.

ಮತ್ತೊಂದೆಡೆ ಪವರ್ ಗ್ರಿಡ್, ಎನ್ ಟಿಪಿಸಿ, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ಬ್ಯಾಂಕ್, ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿದೆ.

ಮಂಗಳವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 477.24 ಅಂಕಗಳಷ್ಟು ಏರಿಕೆಯೊಂದಿಗೆ 57,897.48 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಎನ್ ಎಸ್ ಇ ನಿಫ್ಟಿ 147.20 ಅಂಕಗಳಷ್ಟು ಏರಿಕೆಯಾಗಿದ್ದು, 17,233.45 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು.