Friday, 29th November 2024

Bramhagantu Serial: ಸೌಂದರ್ಯಾ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾದ ದೀಪಾ

BrahmaGantu Serial

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ (Bramhagantu) ಧಾರಾವಾಹಿ ಈಗ ಹೆಣ್ಣು ಮಕ್ಕಳ ನೆಚ್ಚಿನ ಧಾರಾವಾಹಿಯಾಗಿದೆ. ಕಥೆ ಈಗ ಸಂಪೂರ್ಣ ತಿರುವು ಪಡೆದುಕೊಂಡಿದ್ದು, ಕಥೆಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಇಷ್ಟು ದಿನ ಎಲ್ಲರೂ ಹೇಳೋದನ್ನ ಕೇಳಿಸ್ಕೊಂಡು, ಅವರು ಹೇಳಿದಂತೆ ಮಾಡುತ್ತಿದ್ದ ದೀಪಾ ತಿರುಗಿ ಬಿದ್ದಿದ್ದಾಳೆ. ಮುಖ್ಯವಾಗಿ ಸೌಂದರ್ಯಾಳಿಗೆ ಸವಾಲು ಎಸೆದಿದ್ದಾಳೆ.

ಇಷ್ಟು ದಿನ ಎಷ್ಟೇ ಅವಮಾನವಾದರೂ, ನೋವಾದರೂ ಕೊಂಚವೂ ಬೇಸರ ಮಾಡಿಕೊಳ್ಳದೆ, ಗಂಡ ಆದವನು ನೀನು ಹೆಂಡತಿಯೇ ಅಲ್ಲ ಎಂದರೂ ಎಲ್ಲವನ್ನು ಸಹಿಸಿಕೊಂಡು ಬದುಕುತ್ತಿದ್ದಳು ದೀಪಾ. ಅತ್ತ ಸೊಸೆಯೆಂದು ಮೀಡಿಯಾ ಎದುರು ಮನೆ ತುಂಬಿಸಿಕೊಂಡ ಸೌಂದರ್ಯಾ, ಎಲ್ಲರೂ ಹೋದ ಮೇಲೆ ಕೆಲಸದವರ ಜೊತೆಗೆ ಸೇರಿಸಿದಳು. ಆದರೀಗ ದೀಪಾ ಬದಲಾಗಿದ್ದಾಳೆ, ಎದ್ದು ನಿಂತಿದ್ದಾಳೆ.

ಸೌಂದರ್ಯಾಗೆ ಸವಾಲು ಹಾಕಿ ದೀಪಾ ಮನೆಯಲ್ಲಿ ಸೊಸೆಯೆಂಬ ಹಕ್ಕನ್ನ ಚಲಾಯಿಸಿದ್ದಾಳೆ. ಚಿರು ರೂಮಿನಲ್ಲಿಯೇ ಉಳಿದುಕೊಂಡಿದ್ದಾಳೆ. ಮನೆಯ ಕೆಲಸದವಳಾಗಿ ಇಲ್ಲ, ಬದಲಾಗಿ ಸೊಸೆಯಾಗಿ ಗತ್ತಿನಿಂದ ಓಡಾಡುತ್ತಿದ್ದಾಳೆ. ಸೊಸೆಯೆಂಬ ಗೌರವದಿಂದ ನಡೆದುಕೊಳ್ಳುತ್ತಿದ್ದಾಳೆ. ಇದು ಚಿರುಗೆ ಇಷ್ಟವಾಗದೆ ಇದ್ದರು ಏನು ಮಾತನಾಡಲು ಆಗದೆ ಸೈಲೆಂಟ್ ಆಗಿ ಬಿಟ್ಟಿದ್ದಾನೆ. ಇದಕ್ಕೆ ಮಾವನ ಸಪೋರ್ಟ್ ಕೂಡ ಸಿಕ್ಕಿದೆ.

ದೀಪಾ ಮಾವನ ಬಳಿ ಬಂದು, ಮಾವ ನಿಮ್ಮ ಹತ್ರ ಮಾತನಾಡಬೇಕಾಗಿತ್ತು ಎಂದು ಹೇಳಿದ್ದಾಳೆ. ನಾನು ಈ ಮನೆಗೆ ಸೊಸೆಯಾಗಿ ಬಂತು ತುಂಬಾ ದಿನ ಆಗಿದ್ರೂ ಅಧಿಕೃತವಾಗಿ ಮನೆಯ ಕರ್ತವ್ಯಗಳನ್ನೆಲ್ಲ ನಿಭಾಯಿಸಲು ಆಗಲಿಲ್ಲ. ಆದ್ರೆ ಇನ್ಮುಂದೆ ಫುಲ್ ನನ್ನದೆ ಜವಾಬ್ದಾರಿ ಎಂದಿದ್ದಾಳೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಮಾವ ಈ ಮನೆಯಲ್ಲಿ ನೀನು ಏನೇ ಒಳ್ಳೆ ಕೆಲಸ ಮಾಡಿದ್ರೂ ಅದಕ್ಕೆ ನನ್ನ ಬೆಂಬಲ ಇದ್ದೇ ಇರುತ್ತೆ ಎಂದಿದ್ದಾರೆ.

ದೀಪಾ ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ದೇವರ ಪೂಜೆಗೆ ಅಣಿಯಾಗಿದ್ದಾಳೆ. ದೇವರ ಕೋಣೆಯಲ್ಲಿ ಕೂತು ಪೂಜೆ ಶುರು ಮಾಡಿದ್ದಾಳೆ. ಮಂತ್ರದ ಜೊತೆಗೆ ಪೂಜೆ ಮಾಡುತ್ತಿರುವುದು ಮನೆಯಲ್ಲಿ ಹಲವರಿಗೆ ಖುಷಿ ಕೊಟ್ಟಿದೆ. ಅದರಲ್ಲೂ ಗಂಡಸರೆಲ್ಲ ದೀಪಾ ಧರ್ಮದ ಮಾರ್ಗದಲ್ಲಿಯೇ ಹೋಗುತ್ತಿದ್ದಾಳೆ ಒಳ್ಳೆಯದಾಗಲಿ ಎಂದಿದ್ದಾರೆ. ಆದರೆ, ಇದರಿಂದ ಸೌಂದರ್ಯಾಗೆ ಮಾತ್ರ ಹೊಟ್ಟೆ ಉರಿಯುತ್ತಿದೆ.

Seetha Rama Serial: ರಾಮ್ ಎಲ್ಲವನ್ನೂ ಇನೋಸೆಂಟ್ ಆಗಿ ನಂಬ್ತಿದ್ದಾನೆ: ಸೀತಾಗೆ ಶುರುವಾಯಿತು ಮತ್ತೊಂದು ಭಯ