Friday, 7th May 2021

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ 4 ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ

ರಾಜ್ಯದಲ್ಲಿಯೇ ಶಾಸಕ ಗೌರಿಶಂಕರ್ ಸೇವೆ ಮಾದರಿ| ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ವರದಿ

ತುಮಕೂರು: ಗ್ರಾಮಾಂತರ ಕ್ಷೇತ್ರದ ಎಲ್ಲಾ ಹೋಬಳಿಗಳಿಗೆ ಶಾಸಕ ಗೌರಿಶಂಕರ್ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ 7 ಹೋಬಳಿಗೆ ತಲಾ ಒಂದೊಂದು ತುರ್ತವಾಹನ ಒದಗಿಸಿಕೊಟ್ಟು ಇಡೀ ರಾಜ್ಯದ ಜನಪ್ರತಿನಿಧಿ ಗಳಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯ ಬೇರೆ ಜನಪ್ರತಿನಿಧಿಗಳು ಇಂತಹ ಸೇವೆ ಮಾಡಬೇಕು. ಮತಕ್ಕಾಗಿ ಮನೆ ಬಾಗಿಲಿಗೆ ಬರುವುದಲ್ಲ. ಕಷ್ಟದಲ್ಲಿದ್ದಾಗ ಸ್ಪಂದಿಸಬೇಕು ಎಂದು ಜಿಲ್ಲೆಯ ಜನತೆ ಬೇರೆ ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ. ಶಾಸಕ ಗೌರಿಶಂಕರ್ ಅವರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

• ಆಂಬ್ಯುಲೆನ್ಸ್ಗಾಗಿ ಹೋಬಳಿವಾರು ಸಂಪರ್ಕಿಸಿ
ಹೆಬ್ಬೂರು-9449116659
ಹೊನ್ನುಡಿಕೆ-9880949557
ಗೂಳೂರು-9483445483
ಊರ್ಡಿಗೆರೆ-9620484353
ಬೆಳಗುAಬ-8147471537
ಹೆಗ್ಗರೆ-9880780923
ಬೆಳ್ಳಾವಿ-9880780950

• ಕರೋನಾದ ಭೀಕರತೆಯ ಕಾಲದಲ್ಲಿ ಜನರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವ ಕೆಲಸ ಮಾಡ ಬೇಕು. ಗ್ರಾಮಾಂತರ ವ್ಯಾಪ್ತಿಯಲ್ಲಿ ಸರಕಾರಿ ಆಂಬ್ಯುಲೆನ್ಸ್ ಕೊರತೆ ತೀವ್ರವಾಗಿರುವುದನ್ನು ಮನಗಂಡು 7 ಹೋಬಳಿಗಳಿಗೆ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಪತ್ರಿಕೆಯಲ್ಲಿ ಆಂಬ್ಯುಲೆನ್ಸ್ ಸಮಸ್ಯೆ ಬಗ್ಗೆ ವರದಿ ಮಾಡಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿರುವುದು ಶ್ಲಾಘನೀಯ.

ಗೌರಿಶಂಕರ್, ಶಾಸಕ, ತುಮಕೂರು ಗ್ರಾಮಾಂತರ.

Leave a Reply

Your email address will not be published. Required fields are marked *