ಶಿವಮೊಗ್ಗ : ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹೆಲಿಕ್ಯಾಪ್ಟರ್ ಮೂಲಕ ಜಿಲ್ಲೆ ಭದ್ರಾವತಿ ಹೊರವಲಯದ ಬುಳ್ಳಾಪುರದ ಭದ್ರಾವತಿ ಹೊರವಲಯದಲ್ಲಿರುವಂತ ಆರ್ ಎ ಎಫ್-97 ಬ್ಯಾಚ್ ಘಟಕದ ಶಿಲಾನ್ಯಾಸಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದ್ದ ಅಮಿತ್ ಶಾ ಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಡಿಸಿಎಂ ಕಾರಜೋಳ, ಈಶ್ವರಪ್ಪ, ಸಂಸದ ರಾಘವೇಂದ್ರ, ಡಿಸಿಎಂ ಅಶ್ವಥ್ ನಾರಾಯಣ ಅವರು ಸಾಥ್ ನೀಡಿದ್ದರು.
ಹೀಗೆ ಆಗಮಿಸಿದ ಕೇಂದ್ರ ಗೃಹ ಸಚಿವರು, ಆರ್ಎಎಫ್ನ 97ನೇ ಬಟಾಲಿಯನ್ ಹೆಡ್ಕ್ವಾರ್ಟರ್ಸ್ಗೆ ಭೂಮಿ ಪೂಜೆ ಮಾಡುವ ಮೂಲಕ, ಶಂಕುಸ್ಥಾಪನೆ ನೆರವೇರಿಸಿದರು.