Tuesday, 9th August 2022

ಡ್ರಗ್ಸ್ ಸೇವನೆ: ನಟ ಶಕ್ತಿ ಕಪೂರ್ ಪುತ್ರನ ಬಂಧನ

ಬೆಂಗಳೂರು: ಭಾನುವಾರ ರಾತ್ರಿ ನಗರದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎಂ.ಜಿ.ರಸ್ತೆಯ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೋಲಿಸರು ಬಂಧಿತ ಜನರ ಮಾದರಿ ಗಳನ್ನು ಕಳುಹಿಸಿದ್ದಾರೆ. ಪಾಸಿಟಿವ್ ಬಂದ ಆರು ಜನರಲ್ಲಿ ಸಿದ್ಧಾಂತ್ ಕಪೂರ್ ಅವರ ಮಾದರಿಯೂ ಸೇರಿದೆ ಎನ್ನಲಾಗಿದೆ.

ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ 2020 ರ ವೆಬ್ ಸರಣಿ ‘ಭೌಕಾಲ್’ ನಲ್ಲಿ ಚಿಂಟು ದೇಧಾ ಪಾತ್ರ ನಿರ್ವಹಿಸಿದ ನಟರಾಗಿ ದ್ದಾರೆ. ‘ಶೂಟೌಟ್ ಅಟ್ ವಡಾಲಾ’, ‘ಅಗ್ಲಿ’, ‘ಹಸೀನಾ ಪಾರ್ಕರ್’, ‘ಚೆಹ್ರೆ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ‘ಭಾಗಂ ಭಾಗ್’, ‘ಚುಪ್ ಚುಪ್ ಕೆ’, ‘ಭೂಲ್ ಭುಲೈಯಾ’, ಮತ್ತು ‘ಧೋಲ್’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದ ತನಿಖೆಯ ಸಮಯದಲ್ಲಿ ಎನ್ಸಿಬಿ ಬಹಿರಂಗಪಡಿಸಿದ ವಾಟ್ಸಾಪ್ ಚಾಟ್ಗಳ ಆಧಾರದ ಮೇಲೆ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಪ್ರಶ್ನಿಸಲಾಯಿತು.