Tuesday, 17th May 2022

ಕರೋನಾದಿಂದ ಸತ್ತ ಗಂಡನ ಅಂತ್ಯಕ್ರಿಯೆ ಮುಗಿದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಪತ್ನಿ.!

ಮಂಡ್ಯ: ಕರೋನಾದಿಂದ ಮೃತಪಟ್ಟ ಪತಿಯ ಅಂತ್ಯಕ್ರಿಯೆ ಮುಗಿದ ಬೆನ್ನಲ್ಲೇ ಪತ್ನಿಯೂ ಸಹ ಆತ್ಮಹತ್ಯೆಗೆ ಶರಣಾದ ಕರುಣಾ ಜನಕ ಘಟನೆ ನಾಗಮಂಗಲದಲ್ಲಿಂದು ನಡೆದಿದೆ.

ಕಿರಣ್ ಮತ್ತು ಪೂಜಾ ಎಂಬ ದಂಪತಿಗಳೇ ಕರೋನಾ ಕ್ರೌರ್ಯಕ್ಕೆ ಬಲಿಯಾದವರಾಗಿದ್ದಾರೆ. ಮೂಲತಃ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಯ ನಿವಾಸಿಯಾದ ಕಿರಣ್,ಪೂಜಾ ಅವರನ್ನು ಕಳೆದ 11 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮದುವೆ ಬಳಿಕ ಬೆಂಗಳೂರಿನ ಬೊಮ್ಮೇನಹಳ್ಳಿಯಲ್ಲಿ ವಾಸವಾಗಿದ್ದರು.

ಕಳೆದೊಂದು ವಾರದ ಹಿಂದೆ ಕಿರಣ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು,ಪರೀಕ್ಷೆಯ ವೇಳೆ ಕರೋನ ಪಾಸಿಟಿವ್ ಎಂದು ದೃಢಪಟ್ಟಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ಕಿರಣ್ ಮೃತ ಪಟ್ಟಿದ್ದು, ಮೃತ ದೇಹವನ್ನು ಸ್ವಗ್ರಾಮ ನಾಗಮಂಗಲ ತಾಲ್ಲೂಕಿನ ಬಿಮಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಗೆ ತರಲಾಗಿತ್ತು.

ಅಂತ್ಯೆಕ್ರಿಯೆ ಮುಗಿಸಿ ಮನೆಗೆ ಬಂದ ಪೂಜಾ,ಗಂಡನ ಅಗಲಿಕೆಯನ್ನು ತಾಳಲಾರದೆ ಮನೆಯ ಬೆಡ್ ರೂಮ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಮಗ ಮತ್ತು ಸೊಸೆ ಇಬ್ಬರನ್ನೂ ಒಂದೇ ದಿನ ಕಳೆದು ಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲೇ ಕರೋನಾ ಕ್ರೌರ್ಯದಿಂದ ಇಹಲೋಕ ತ್ಯೆಜಿಸಿದ ನವ ಜೋಡಿಗಳ ಈ ಸಾವಿಗೆ ಇಡೀ ಬೊಮ್ಮನಹಳ್ಳಿಗ್ರಾಮ ಮಮ್ಮಲ ಮರುಗುತ್ತಿದೆ.