Sunday, 17th October 2021

ಐಸಿಸಿ ಟಿ20 ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೆ ಕುಸಿದ ಶೆಫಾಲಿ ವರ್ಮಾ

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರು ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದರೆ, ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಶೆಫಾಲಿ ಬಳಿ 726 ರೇಟಿಂಗ್‌ ಪಾಯಿಂಟ್ಸ್ ಇದ್ದರೆ, ಮಂದಾನ 709 ಪಾಯಿಂಟ್ಸ್ ಹೊಂದಿದ್ದಾರೆ. ಆಸ್ಟ್ರೇಲಿಯಾದ ಬೇಥ್ ಮೂನಿ (754) ಅಗ್ರಸ್ಥಾನ ಕ್ಕೇರಿದ್ದಾರೆ. ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್‌ ಲ್ಯಾನಿಂಗ್‌ (4ನೇ ಸ್ಥಾನ) ಹಾಗೂ ಅಲೀಸಾ ಹೀಲಿ (ಆರನೇ ಸ್ಥಾನ) ಕೂಡ ಅಗ್ರ 10ರ ಪಟ್ಟಿಯಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕವಾಡ್‌ 12ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಒಟ್ಟು ಐದು ವಿಕೆಟ್‌ ಗಳನ್ನು ತಮ್ಮದಾಗಿಸಿಕೊಂಡಿದ್ದರು. ಆಲ್‌ರೌಂಡರ್‌ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಯಶ್ಲಿ ಗಾರ್ಡನರ್‌ 10ನೇ ಸ್ಥಾನದಲ್ಲಿ, ಜಾರ್ಜಿಯಾ ವಾರೆಹಮ್‌ 14 ಸ್ಥಾನಗಳ ಏರಿಕೆ ದಾಖಲಿಸಿದ್ದು, ಸದ್ಯ ಜೀವನಶ್ರೇಷ್ಠ 48ನೇ ಸ್ಥಾನಕ್ಕೇರಿದ್ದಾರೆ.

 

Leave a Reply

Your email address will not be published. Required fields are marked *