Tuesday, 17th May 2022

ಭಾರತದ ವಿರುದ್ದದ ಜಯ ಇಸ್ಲಾಂಗೆ ಗೆಲುವಾಗಿದೆ: ಶೇಖ್ ರಶೀದ್

ಇಸ್ಲಾಮಾಬಾದ್ : ಭಾರತದ ವಿರುದ್ಧ ರಾಷ್ಟ್ರದ ಗೆಲುವನ್ನು ‘ಇಸ್ಲಾಂಗೆ ಗೆಲುವು’ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶೇಖ್ ರಶೀದ್ ಅವರು ಪಂದ್ಯದ ಸಮಯದಲ್ಲಿ ಭಾರತದಲ್ಲಿನ ಮುಸ್ಲಿಮರು ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಮರು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ‘ಪಾಕಿಸ್ತಾನಕ್ಕೆ ಇಂದಿನ ಭಾರತ-ಪಾಕಿಸ್ತಾನ ಪಂದ್ಯವೇ ಅಂತಿಮವಾಗಿತ್ತು’ ಎಂದು ಸಚಿವ ಶೇಖ್ ರಶೀದ್ ಹೇಳಿದರು.

ಪಾಕಿಸ್ತಾನದ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಅವರ ಅದ್ಭುತ ಪ್ರದರ್ಶನದ ನಂತರ ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ. ಪಾಕಿಸ್ತಾನ ಪಂದ್ಯವನ್ನು 10 ವಿಕೆಟ್ ಗಳಿಂದ ಗೆದ್ದ ಕೂಡಲೇ ರಶೀದ್ ಈ ಹೇಳಿಕೆ ನೀಡಿದರು.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು.