Friday, 12th August 2022

ಇಬ್ಬರು ಸಿದ್ದುಗಳಿಂದಲೇ ಕಾಂಗ್ರೆಸ್‌ ನಾಶವಾಗಲಿದೆ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಪಂಜಾಬ್‌ ನ ಸಿಧು ಹಾಗೂ ಕರ್ನಾಟಕದ ಸಿದ್ದು ಅವರಿಂದ ಕೊನೆಯಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶನಿವಾರ ಮಾತನಾಡಿ, ಪ್ರಧಾನಿ ಮೋದಿ ಹೇಳುವಂತೆ ಕಾಂಗ್ರೆಸ್ ಮುಕ್ತ ದೇಶವಾಗುತ್ತಿದೆ. ರಾಜ್ಯದಲ್ಲಿ ಸಹ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ಜಗಳದಿಂದ ಕಾಂಗ್ರೆಸ್ ನಾಶವಾಗುತ್ತದೆ ಎಂದರು.

ಸಂಪುಟ ವಿಸ್ತರಣೆ ಅಂದರೆ ಹಲವಾರು ಬದಲಾವಣೆ ಸಹಜ. ಹಳಬರು ತೆಗೆದು ಹೊಸಬರಿಗೆ ಅವಕಾಶ ನೀಡಬಹುದು. ಆದರೆ ನನ್ನದು ಸ್ಪಷ್ಟ ನಿರ್ಧಾರ. ನಾನು ಹಿಂದೆ ಹೇಳಿದಂತೆ ಸಚಿವ ಸಂಪುಟ ಸೇರುವುದಿಲ್ಲ. ಪದೇ ಪದೇ ವಿಷಯ ಕೇಳಬೇಡಿ ಎಂದು ಹೇಳಿದರು.

ಯಡಿಯೂರಪ್ಪ ನವರನ್ನು ಯಾವತ್ತು ಕಡೆಗಣಿಸಿಲ್ಲ. ಅವರು ಮಾಡಿದ ಪಕ್ಷ ಸಂಘಟನೆ ಮತ್ತು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಎಂದರು.