Friday, 24th September 2021

ಮಾಯಾವಿ ಜಾಡು ಹಿಡಿದ ಶಿವಾಜಿ

ರಣಗಿರಿ ರಹಸ್ಯ ಭೇದಿಸಿದ ರಮೇಶ್

ಕಳೆದ ವರ್ಷ ತೆರೆಗೆ ಬಂದ ಶಿವಾಜಿ ಸುರತ್ಕಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹೊಸ ಗೆಟಪ್‌ನಲ್ಲಿ ಪ್ರತ್ಯಕ್ಷವಾದ ರಮೇಶ್ ಅರವಿಂದ್ ಅವರಿಗೆ ಪ್ರೇಕ್ಷಕರು ಬಹುಪರಾಕ್ ಎಂದರು. ರಣಗಿರಿಯನ್ನು ಹೊಕ್ಕ ಶಿವಾಜಿ, ಅಲ್ಲಿನ ರಹಸ್ಯವನ್ನು ಭೇದಿಸಲು ಮುಂದಾದರು. ತನಗೆ ಒಪ್ಪಿಸಿದ ಕಾರ್ಯವನ್ನು ನಲ್ವತ್ತೆಂಟು ಗಂಟೆಗಳಲ್ಲಿ ಪೂರ್ಣಗೊಳಿಸಲು ಪ್ಲಾನ್ ರೂಪಿಸಿದರು. ತನಿಖೆಯ ಹಾದಿಯಲ್ಲಿ ತನಗೆದುರಾದ ಎಲ್ಲಾ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ, ಕೊನೆಗೂ ಕೊಲೆಯ ಪ್ರಕರಣವನ್ನು ಪತ್ತೆ ಹಚ್ಚಿದರು. ರಣಗಿರಿ ರಹಸ್ಯವನ್ನು ಭೇದಿಸಿದರು. ಅಲ್ಲಿಂದ ಭಾರವಾದ ಮನಸ್ಸಿನಿಂದಲೇ ಹೊರ ನಡೆದರು. ಈ ಚಿತ್ರ ಕಣ್ತುಂಬಿಕೊಂಡ ಸಿನಿಪ್ರಿಯರು, ಚಿತ್ರದ ಮುಂದುವರಿದ ಭಾಗ ಖಂಡಿತಾ ಬರಬ ಹುದು ಎಂದುಕೊಂಡರು, ಅಂತೆಯೇ ಶಿವಾಜಿ ಸುರತ್ಕಲ್ ೨ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.

ಮಿಸ್ಟರಿಯಸ್ ಆ- ಮಾಯಾವಿ ಎಂಬ ಅಡಿಬರಹದಲ್ಲಿ, ಶಿವಾಜಿ ಸುರತ್ಕಲ್ ೨ ಮೂಡಿಬರಲಿದೆ. ಜತೆಗೆ ಈ ಬಾರಿ ಶಿವಾಜಿ ಇನ್ನೂ ವಿಭಿನ್ನ ಗೆಟಪ್‌ನಲ್ಲಿ ಕಂಗೊಳಿಸ ಲಿದ್ದಾರೆ. ಚಿತ್ರದ ಕಥೆಯೂ ಅಷ್ಟೇ ರೋಚಕವಾಗಿರಲಿದೆ. ರಮೇಶ್ ಅರವಿಂದ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ -ಸ್ಟ್‌ಲುಕ್ ಬಿಡುಗಡೆ ಮಾಡಲಾಗಿದೆ. ಗಡ್ಡ ಬಿಟ್ಟು, ಗನ್ ಹಿಡಿದ ರಮೇಶ್ ಅರವಿಂದ್, ಮತ್ತೊಮ್ಮೆ ಶಿವಾಜಿಯ ಅವತಾರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಮಾಯಾವಿಯ ಕಥೆ

ಮೊದಲ ಭಾಗದಲ್ಲಿ ರಣಗಿರಿಯ ನಿಗೂಢ ರಹಸ್ಯವನ್ನು ಭೇಽಸಿದ್ದ ಶಿವಾಜಿ, ಈ ಬಾರಿ ಮಾಯಾವಿಯ ಜಾಡು ಹಿಡಿದು ಹೊರಡಲಿದ್ದಾರೆ. ಹಾಗಾದರೆ ಆ ಮಾಯಾವಿ ಯಾರು, ಆತನ ಹುಡುಕಾಟಕ್ಕೆ ಕಾರಣವೇನು, ಎಂಬುದೇ ಚಿತ್ರದ ಸಸ್ಪೆನ್ಸ್. ಇಲ್ಲಿಯೂ ಮರ್ಡರ್ ಮಿಸ್ಟ್ರಿಯ ಕಥೆಯಿದೆ. ಮೊದಲ ಭಾಗಕ್ಕಿಂತ, ಎರಡನೇ ಭಾಗ ಮತ್ತಷ್ಟು ರೋಚಕತೆಯಿಂದ ಸಾಗಲಿದೆ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. ಕಥೆ ಮಾತ್ರವಲ್ಲ ಶಿವಾಜಿಯ ಗೆಟಪ್ ಕೂಡ ಇಲ್ಲಿ ವಿಭಿನ್ನ ವಾಗಿರಲಿದೆ. ಮೂರ ಕಾಲಘಟ್ಟದಲ್ಲಿ ಚಿತ್ರದ ಕಥೆ ಸಾಗಲಿದೆ.

ರೋಚಕತೆಯ ತಿರುವು

ಈ ಹಿಂದೆ ರಣಗಿರಿಯನ್ನು ಹೊಕ್ಕ ಶಿವಾಜಿ, ಒಂದೇ ಸ್ಥಳದಲ್ಲಿ ಕೊಲೆಗಾರನ ಜಾಡು ಹಿಡಿದು ಸಾಗಿದ್ದರು. ಬಲು ಬುದ್ದಿವಂತಿಕೆಯಿಂದ ತನಿಖೆ ನಡೆಸಿದರು. ನಡುವೆ ಹಾದಿ ತಪ್ಪಿದರು, ಬಳಿಕ ಬುದ್ದಿವಂತಿಕೆಯಿಂದ ಕೊಲೆಗೆ ಕಾರಣವನ್ನು ಪತ್ತೆ ಹಚ್ಚಿದರು. ಆದರೆ ಈ ಬಾರಿ ಮಾಯಾವಿಯ ಬೆನ್ನತ್ತುವುದು ಅಷ್ಟು ಸುಲಭವಲ್ಲ. ಅಷ್ಟಕ್ಕೂ ಮಾಯಾವಿ ಒಂದೇ ಕಡೆ ಇರುವವನೂ ಅಲ್ಲ. ಪ್ರತಿ ಕ್ಷಣಕ್ಕೂ ಸ್ಥಳ ಬದಲಾಯಿಸುವ ಚಾಣಾಕ್ಷ ಆತ. ಆತನನ್ನು ಹಿಂಬಾಲಿಸುವ ತನಿಖಾಧಿಕಾರಿಯೂ ಅದಕ್ಕಿಂತ ಚಾಣಾಕ್ಷನಾಗಿರಲೇಬೇಕು. ಮಾಯಾವಿಯನ್ನು ಹಿಡಿಯಲು ಸಾಕಷ್ಟು ಸಮಯವೇಬೇಕು. ಹಾಗಾಗಿ ಈ ಚಿತ್ರ ಪ್ರತಿಕ್ಷಣಕ್ಕೂ ರೋಚಕ ತಿರುವು ಪಡೆದು ಕೊಳ್ಳಲಿದೆಯಂತೆ.

ಸ್ಟಾರ್ ನಟರ ದಂಡು

ಶಿವಾಜಿ ಸುರತ್ಕಲ್ ಮುಂದುವರಿದ ಭಾಗದಲ್ಲಿ ರಮೇಶ್ ಅರವಿಂದ್ ಅವರ ಜತೆಗೆ ರಾಽಕಾ ನಾರಾಯಣ್ ನಟಿಸುತ್ತಿದ್ದಾರೆ. ಉಳಿದಂತೆ ರಘು ರಾಮನಕೊಪ್ಪ, ವಿದ್ಯಾಮೂರ್ತಿ ಪಾತ್ರ ನಿರ್ವಹಿಸಲಿದ್ದಾರೆ. ಇವರ ಜತೆಗೆ ಸ್ಟಾರ್ ನಟರ ದಂಡೇ ಈ ಚಿತ್ರದ ತಾರಾಬಳಗದಲ್ಲಿ ಇದೆಯಂತೆ.

***

ಶಿವಾಜಿ ಸುರತ್ಕಲ್ ಚಿತ್ರೀಕರಣದ ಸಮಯದಲ್ಲಿಯೇ ಮಾಯಾವಿಯ ಕಥೆ ಹೊಳೆಯಿತು. ಲಾಕ್‌ಡೌನ್ ಅವಽಯಲ್ಲಿ ಸಾಕಷ್ಟು ಸಮಯ ಸಿಕ್ಕಿದ್ದರಿಂದ ಕಥೆಯಲ್ಲಿ ಮತ್ತಷ್ಟು ರೋಚಕತೆ ತುಂಬಲು ಸಾಧ್ಯವಾಯಿತು. ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದೇವೆ. ಶಿವಾಜಿಯನ್ನು ಮತ್ತಷು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲು ಕನ್ನಡದಲ್ಲಿ ಚಿತ್ರ ನಿರ್ಮಾಣವಾಗಲಿದೆ. ಬಳಿಕ ಬೇರೆ ಭಾಷೆಗಳಲ್ಲಿ ಚಿತ್ರ ತೆರೆಗೆ ತರುವ ಬಗ್ಗೆ ಪ್ಲಾನ್ ಮಾಡುತ್ತೇವೆ.

-ಆಕಾಶ್ ಶ್ರೀವತ್ಸ ನಿರ್ದೇಶಕ

Leave a Reply

Your email address will not be published. Required fields are marked *