Tuesday, 27th September 2022

ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ಆಲ್‌ರೌಂಡರ್‌ ಶಿವಂ ದುಬೆ

ನವದೆಹಲಿ : ಟೀಂ ಇಂಡಿಯಾ ಮತ್ತು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ನ ಯುವ ಆಲ್‌ರೌಂಡರ್‌ ಶಿವಂ ದುಬೆ ಬಹುಕಾಲದ ಗೆಳತಿ ಅಂಜುಮ್‌ ಖಾನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.

ಶಿವಂ ದುಬೆ ತಮ್ಮ ವಿವಾಹದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಧೀಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಾಹದ  ಕೆಲ ಫೋಟೋಗಳನ್ನು ಶೇರ್ ಮಾಡಿರುವ ಶಿವಂ ದುಬೆ, ‘ಪ್ರೀತಿಗಿಂತ ಹೆಚ್ಚಾಗಿರುವ ಪ್ರೀತಿಯಿಂದ ನಾವು ಪ್ರೀತಿಸುತ್ತಿದ್ದೇವೆ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾ ರೆ. ಜತೆಗೆ, ‘ನಮ್ಮ ಜೀವನ ಶಾಶ್ವತವಾಗಿ ಪ್ರಾರಂಭವಾಗಿರುವ ಸ್ಥಳವಿದು’ ಎಂದು ಹೇಳಿದ್ದಾರೆ.

ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಯುವ ಜೋಡಿಗೆ ಕೆಲ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಶುಭ ಕೋರಿದ್ದಾರೆ.