Tuesday, 9th August 2022

ಶಿವಸೇನೆಯ ರಾಜಕೀಯ ಬಿಕ್ಕಟ್ಟಿನಿಂದ ಬಿಜೆಪಿಗೆ ಲಾಭ !

ಪ್ರಸ್ತುತ

ರಾಜದೀಪ ಸರದೇಸಾಯಿ

ಈಗ ಠಾಕ್ರೆಗಳ ಮುಂದೆ ಆಯ್ಕೆಗಳಿಲ್ಲ. ಒಂದೊಮ್ಮೆ ಮರಳಿ ಬಿಜೆಪಿ ಜತೆ ಹೊಂದಾಣಿಕೆಗೆ ಬಂದರೆ ಮಾನ ಹೋಗುತ್ತದೆ, ಆಘಾಡಿ ಜತೆಗೆ ಮುಂದುವರೆದರೆ ಹಿಂದುತ್ವದ ಪ್ರತಿಪಾದನೆಗೆ ಹಿನ್ನಡೆಯಾದಂತಾಗುತ್ತದೆ. ಇದೆರಡೂ ಇಲ್ಲದೇ ಏಕಾಂಗಿ ಯಾದರೆ ಇನ್ನೂ ಕಷ್ಟ. ಗೆಲ್ಲುವುದು ಸಾಧ್ಯವಾಗದೇನೋ? ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸದ್ಯದ ಬರಲಿದೆ.

2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಒಕ್ಕೂಟ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ಪತ್ರ ಕರ್ತರು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಯಾರು ಬೇಕಾದರೂ ಮುಖ್ಯಮಂತ್ರಿ ಯಾಗಲಿ, ಆದರೆ ರಿಮೋಟ್ ಕಂಟ್ರೋಲ್ ನನ್ನ ಕೈಯ್ಯಲ್ಲಿರುತ್ತದೆ ಎಂದಿದ್ದರು ರಜತ ಸಿಂಹಾಸನದ ಮೇಲೆ ಪವಡಿಸಿ ವೈಟ್ ವೈನ್ ಗುಟುಕರಿಸುತ್ತಿದ್ದ ಶಿವಸೇನೆ ನಾಯಕ ಬಾಳಾಸಾಹೇಬ್ ಠಾಕ್ರೆ.

ಅದಾಗಿ ಎರಡು ದಶಕಗಳ ಅವಧಿ ಕಳೆಯುವ ಮುನ್ನವೇ ಸೇನೆಯ ಅಧಿಕಾರದಲ್ಲಿದ್ದ ಸರಕಾರ ಪತನವಾಯಿತು. ಅಧಿಕಾರದ ಎಲ್ಲ ಫರ್ಮಾನುಗಳು ಮಾತೋಶ್ರೀಯಿಂದಲೇ ಹೊರಬೀಳುತ್ತಿದ್ದ ಒಂದು ಕಾಲವಿತ್ತು. ಆದರೆ ಇದೀಗ ಮಹಾರಾಷ್ಟ್ರದ ಅಸ್ಮಿತೆಯ ಅಂಗ ವಾಗಿ 1960ರ ದಶಕದಲ್ಲಿ ಹುಟ್ಟಿಕೊಂಡ ಪಕ್ಷವೊಂದು ಈಗ ಅಸ್ತಿತ್ವಕ್ಕಾಗಿ ಹೋರಾಡು ತ್ತಿದೆ.

ಶಿವಸೇನೆಯ ಸಮಸ್ಯೆಯೆಂದರೆ ಅದು ವ್ಯಕ್ತಿ ಕೇಂದ್ರಿತವಾಗಿ, ಕುಟುಂಬಕೇಂದ್ರಿತವಾಗಿ ರೂಪುಗೊಂಡ ಪ್ರಾದೇಶಿಕ ಪಕ್ಷ. ಪಕ್ಷದ ಸ್ಥಾಪಕ ಇಲ್ಲವೆಂದಾದಾಗ ಅವರ ಉತ್ತರಾಧಿಕಾರಿಗಳು ಆ ಸ್ಥಾನವನ್ನು ತುಂಬಲಾರರು. ನವೀನ್ ಪಟ್ನಾಯಿಕ್ ಅವರ ಬಿಜು ಜನತಾದಳ ಕೂಡ ಕುಟುಂಬ ರಾಜಕಾರಣದ ಭಾಗವಾಗಿ ರಾಜಕೀಯ ಹಸ್ತಾಂತರಕ್ಕೊಳ ಪಟ್ಟಿದ್ದರೂ, ಈಗಲೂ ಅದು ಸಂಕಷ್ಟ ದಲ್ಲಿದೆ. ನವೀನ್ ಬಾಬು ನಂತರ ಮುಂದೆ ಯಾರು ಎಂಬ ಪ್ರಶ್ನೆ ಅಲ್ಲೂ ಜೀವಂತವಾಗಿದೆ. ತಮಿಳುನಾಡಿನಲ್ಲಿ ಕರುಣಾನಿಧಿ ಯವರ ಮರಣಾನಂತರದಲ್ಲಿ ಡಿ.ಎಂ.ಕೆ. ಮಾತ್ರ ತನ್ನ ಅಸ್ತಿತ್ವ ಉಳಿಸಿ ಮುಂದುವರೆಯುವುದು ಸಾಧ್ಯವಾಗಿದೆ.

ಶಿವಸೇನೆಗೂ ಸಹ ಶಾಖೆಗಳ ಬಲವಿದೆ, ವಿಶೇಷವಾಗಿ ಮುಂಬೈನಲ್ಲಿ ಅದರ ವ್ಯವಸ್ಥಿತ ಜಾಲವಿದೆ. ಆದರೆ ಅದೆಲ್ಲಕ್ಕೂ ನಾಯಕ ರಾಗಿದ್ದವರು ಬಾಳಾ ಠಾಕ್ರೆ. ವ್ಯಂಗ್ಯಚಿತ್ರಕಾರರಾಗಿದ್ದವರು ರಾಜಕಾರಣಿಯಾಗಿ ರೂಪಾಂತರಗೊಂಡು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದರು. ಒಮ್ಮೆಯೂ ಚುನಾವಣೆ ಎದುರಿಸದ ಈ ನೇತಾರ ತನ್ನ ಸಂಘಟನೆಯ ಪ್ರಶ್ನಾತೀತ ನಾಯಕನಾಗಿ
ವಿಜೃಂಭಿಸಿದ್ದರು. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ‘ಮಾಫಿಯಾ’ ತರಹದ ಸಂಘಟನೆಯನ್ನು ಹುಟ್ಟು ಹಾಕಿ ಬೆದರಿಕೆಗಳನ್ನೇ ಅಸ್ತವಾಗಿಸಿಕೊಂಡು ರಾಜಕೀಯದಲ್ಲಿ ಅಸ್ತಿತ್ವ ಕಂಡುಕೊಅಡವರು ಬಾಳ ಠಾಕ್ರೆ.

ಠಾಕ್ರೆ ಅವರ ನೇತೃತ್ವದಲ್ಲಿ ಶಿವಸೈನಿಕರು ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಸಾಕ್ಷಾತ್ ಬೀದಿಕಾಳಗ ನಡೆಸಿದರು. ದಕ್ಷಿಣ ಬಾರತೀಯ ರಿಂದ ಮೊದಲ್ಗೊಂಡು ಟ್ರೇಡ್ ಯೂನಿಯನ್ ಕಾರ್ಯಕರ್ತರ ತನಕ, ಮುಸ್ಲಿಮರಿಂದ ಮೊದಲ್ಗೊಂಡು, ಹೊರರಾಜ್ಯದಿಂದ ಬಂದು ಮುಂಬೈನಲ್ಲಿ ನೆಲೆ ಕಂಡುಕೊಂಡವರ ತನಕ ಎಲ್ಲರನ್ನೂ ಹೆದರಿಸಿ ಬೆದರಿಸಿ ಮುನ್ನೆಲೆಗೆ ಬಂದರು. ಈಗ ನೂತನವಾಗಿ
ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂಧೆಯವರ ಹಿನ್ನೆಲೆ ಏನು ಕಡಿಮೆಯಿಲ್ಲ.

ತನ್ನ ಗುರು ಆನಂದ್ ದಿಘೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೃತಪಟ್ಟ ಆಸ್ಪತ್ರೆಗೇ ಬೆಂಕಿ ಹಚ್ಚಿದ್ದ ಪ್ರವೃತ್ತಿ ಅವರು. ಮಿದುಮಾತಿನ ಉದ್ಧವ್ ಮತ್ತು ಮಿಷನರಿ ಸ್ಕೂಲು ಗಳಲ್ಲಿ ಓದಿದ್ದ ಅವರ ಮಗ ಆದಿತ್ಯ ಸೇನೆಯ ಆಡಳಿತದ ಆಧುನಿಕ ಚಹರೆಯಾಗಿ ಗೋಚರ ವಾಗುತ್ತ ಮುನ್ನೆಲೆಗೆ ಬಂದರು. ಆದರೆ, ಶಿವಸೇನೆಯ ಮುಖ್ಯಸ್ಥರನ್ನು ಹುಲಿ ಎಂದು ಪರಿಗಣಿಸುತ್ತಿದ್ದ ಜನರ ಭಾವನೆ ರಾತ್ರೋ ರಾತ್ರಿ ಬದಲಾಗುವುದು ಸಾಧ್ಯವಿರಲಿಲ್ಲ. ಮಹಾರಾಷ್ಟ್ರದ ರಾಜಕೀಯದಲ್ಲಿ ಏನೇನೋ ನಡೆಯಿತು; ಹನುಮಾನ್ ಚಾಲೀಸಾ ಓದಿದ್ದಕ್ಕೆ ಕೇಸು ದಾಖಲಿಸಿದ ಪ್ರಕರಣ, ಪಕ್ಷದೊಳಗಿನ ಭಿನ್ನಮತಕ್ಕೆ ಬೆಂಕಿಹಚ್ಚಿತ್ತು.

ಕುಟುಂಬ ದವರೇ ಆದ ರಾಜ್ ಠಾಕ್ರೆ ಕೂಡ ಉದ್ಧವ್, ಆದಿತ್ಯರ ವಿರುದ್ಧ ಬೆಂಕಿಯು ಗುಳುತ್ತಲೇ ಬಂದರು. ಆದಿತ್ಯ ಠಾಕ್ರೆಯ
ವರ ಪರಿಸರ ಸಂಬಂಧಿತ ಬದ್ಧತೆ ಶ್ಲಾಘನೀಯ ವಾದರೂ, ಅದರಿಂದ ಶಿವಸೇನೆಯ ಅಸ್ಮಿತೆಗೆ ಏನೂ ಪ್ರಯೋಜನವಾಗಲಿಲ್ಲ.
ಆದರೆ ಶಿವಸೇನೆಯೊಳಗಿನ ರಾಜಕೀಯ ಬಿಕ್ಕಟ್ಟು ಪೀಳಿಗೆಯಿಂದ ಪೀಳಿಗೆಗೆ ಬದಲಾದ ಧೋರಣೆಗಳಿಂದ ಮಾತ್ರ ಬಾಧಿತವಾ
ಗಲಿಲ್ಲ. ಶಿವಸೇನೆಯ ಸ್ಥಾನವನ್ನು ತಾನು ತುಂಬಬೇಕೆಂಬ ಬಿಜೆಪಿಯ ಮಹತ್ವಾಕಾಂಕ್ಷೆ ಕೂಡ ಪಕ್ಷ ಇಬ್ಭಾಗವಾಗುವುದಕ್ಕೆ ಕಾರಣವಾಯಿತು.

1988ರಲ್ಲಿ ಮೊದಲ ಬಾರಿಗೆ ಶಿವಸೇನೆ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಾಗ ಎಲ್ಲವೂ ಸರಿಯಾಗಿತ್ತು. ರಾಜ್ಯದಲ್ಲಿ ಸೇನೆಗೆ ಪ್ರಾಮುಖ್ಯತೆ ಇರಬೇಕು ರಾಷ್ಟಮಟ್ಟದಲ್ಲಿ ಬಿಜೆಪಿ ಅದರ ಲಾಭ ಪಡೆಯಬೇಕು ಎಂಬ ಸ್ಪಷ್ಟ ಒಪ್ಪಂದ ವಾಗಿತ್ತು. ಹೊಂದಾಣಿಕೆಗೆ ಮುನ್ನ ಎರಡೂ ಪಾರ್ಟಿಗಳಿಗೆ ರಾಜ್ಯದಲ್ಲಿ ಒಂದಂಕಿಯ ಸೀಟುಗಳಷ್ಟೇ ದಕ್ಕುತ್ತಿದ್ದವು. ಅವರಿಬ್ಬರೂ ಒಟ್ಟಾದ ನಂತರದಲ್ಲಿ ಮೊದಲ ಬಾರಿಗೆ 1995ರಲ್ಲಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವುದು ಸಾಧ್ಯವಾಯ್ತು.

2012ರಲ್ಲಿ ಬಾಳಾ ಠಾಕ್ರೆ ಮರಣಿಸಿದ ನಂತರದಲ್ಲಿ ಎರಡೂ ಪಕ್ಷಗಳ ಹೊಂದಾಣಿಕೆಯಲ್ಲಿ ಕೊಂಚ ಬಿರುಕು ಹುಟ್ಟಿತು. ನರೇಂದ್ರ ಮೋದಿ ಮುನ್ನೆಲೆಗೆ ಬಂದ ನಂತರದಲ್ಲಿ ೨೦೧೪ರಲ್ಲಿ ಎಲ್ಲವೂ ಮೋದಿಮಯವಾಯಿತು ಮತ್ತು ಬಿಜೆಪಿ ಏಕಾಂಗಿಯಾಗಿ ಲೋಕ ಸಭೆಗೆ ಸ್ಪರ್ಧಿಸಿ ಸೀಟುಗಳನ್ನು ಗಿಟ್ಟಿಸುವಷ್ಟರ ಮಟ್ಟಿಗೆ ಬೆಳೆಯಿತು. ಅಮಿತ್ ಶಾ ಮಾಡಿದ ಪ್ರಯೋಗಳಿಂದಲೂ ಇವೆಲ್ಲ ಸಾಧ್ಯ ವಾಯಿತು. ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚುಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಿ ದೇವೇಂದ್ರ ಫಡ್ನವೀಸರು ಮುಖ್ಯಮಂತ್ರಿ ಯಾಗಿ ಹೊರ ಹೊಮ್ಮಿದರು.

ಚುನಾವಣಾ ನಂತರದಲ್ಲಿ ಶಿವಸೇನೆ ಗಾಯ ಗೊಂಡ ಹುಲಿಯಂತಾಗಿ ಬಿಟ್ಟಿತ್ತು. 2019ರಲ್ಲಿ ಶಿವಸೇನೆ ಮಾಡಿದ ವಿಶ್ವಾಸಘಾತಕ ಕೆಲಸದಿಂದಾಗಿ ಬಿಜೆಪಿಯೊಂದಿಗಿನ ಹೊಂದಾಣಿಕೆ ಮುರಿದು ಶಿವಸೇನೆ ಮಹಾರಾಷ್ಟ್ರ ವಿಕಾಸ ಆಘಾಡಿಯನ್ನು ರಚಿಸಿ
ಎನ್.ಸಿ.ಪಿ ಮತ್ತು ಕಾಂಗ್ರೆಸ್ ಜತೆ ಅಧಿಕಾರಕ್ಕಾಗಿ ಕೈಜೋಡಿಸಿತು. 2014ರಲ್ಲಿ ಆದ ಹಿನ್ನಡೆಗೆ ಇದೊಂದು ರೀತಿಯ ಪ್ರತೀಕಾರ ಎಂಬಂತಿತ್ತು. ಈಗ 2022ರಲ್ಲಿ ನಡೆದಿರುವ ಮೇಲಾಟ 2019ರಲ್ಲಿ ನಡೆದ ಘಾತಕಕ್ಕೆ ಪ್ರತೀಕಾರ ಎಂಬ ಅತಿದೆ. ಶಿಂಧೆ ಈಗ ಮುಖ್ಯಮಂತ್ರಿಯಾಗಿರಬಹುದು ಆದರೆ ಸೂತ್ರ ಬಿಜೆಪಿ ಕೈಯ್ಯಲ್ಲಿದೆ.

ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ ಎಂಬ ಆರೋಪವೂ ಬಿಜೆಪಿಯ ಮೇಲಿದೆ. ಉದ್ಧವ್ ಜತೆಗಿರುವವರಿಗೆ ತನಿಖಾಸಂಸ್ಥೆಗಳಿಂದ ಕಿರುಕುಳವಾಗುತ್ತಿದೆ ಎಂಬ ಆರೋಪವೂ ಸುಳ್ಳಲ್ಲ. ಈಗ ಠಾಕ್ರೆಗಳ ಮುಂದೆ ಆಯ್ಕೆ ಗಳಿಲ್ಲ. ಒಂದೊಮ್ಮೆ ಮರಳಿ ಬಿಜೆಪಿ ಜತೆ ಹೊಂದಾಣಿಕೆಗೆ ಬಂದರೆ ಮಾನ ಹೋಗುತ್ತದೆ, ಆಘಾಡಿ ಜತೆಗೆ ಮುಂದುವರೆದರೆ
ಹಿಂದುತ್ವದ ಪ್ರತಿಪಾದನೆಗೆ ಹಿನ್ನಡೆಯಾದಂತಾಗುತ್ತದೆ.

ಇದೆರಡೂ ಇಲ್ಲದೇ ಏಕಾಂಗಿಯಾದರೆ ಇನ್ನೂ ಕಷ್ಟ. ಗೆಲ್ಲುವುದು ಸಾಧ್ಯವಾಗದೇನೋ? ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸದ್ಯದ ಬರಲಿದೆ. ದೇಶದ ಅತಿ ಶ್ರೀಮಂತ ನಗರಪಾಲಿಕೆಯನ್ನು ತನ್ನದಾಗಿಸಿ ಕೊಳ್ಳಬೇಕೆಂಬುದು ಶಿವಸೇನೆಯ
ಮುಂದಿರುವ ಬಹು ದೊಡ್ಡ ಸವಾಲು. ಕೌಟುಂಬಿಕವಾಗಿ ಬಂದ ಪರಂಪರೆಯ ಜತೆಗೆ ಪಕ್ಷವನ್ನೂ ಉಳಿಸಿಕೊಳ್ಳಬೇಕಾದ ಅನಿವಾರ್ಯ ತಗೆ ಈಗ ಠಾಕ್ರೆಗಳ ಮುಂದಿದೆ.

1990ರ ದಶಕದಲ್ಲಿ ಸೇನೆ ಮತ್ತು ಬಿಜೆಪಿ ನಡುವಣ ಸೀಟು ಹಂಚಿಕೆ ವಿಚಾರವನ್ನು ನೇರವಾಗಿ ಬಾಳಾಠಾಕ್ರೆ ಮತ್ತು ಪ್ರಮೋದ್ ಮಹಾಜನ್ ಅವರು ಮಾತೋಶ್ರೀ ಯಲ್ಲಿ ಕುಳಿತು ಇತ್ಯರ್ಥಪಡಿಸಿದ್ದರು. ಒಮ್ಮೆ ಠಾಕ್ರೆ ಸಿಟ್ಟಾಗಿದ್ದಾಗ ಅವರನ್ನು ಸಮಾಧಾ ನಿಸಲು ಮಹಾಜನ್ ಗಂಟೆಗಟ್ಟಲೆ ಮಾತೋಶ್ರೀಯಲ್ಲಿರುತ್ತಿದ್ದರು. ಅವರನ್ನು ಹೇಗೆ ಸಮಾಧಾನಿಸಿದಿರಿ ಎಂದು ಮಹಾಜನ್ ಅವರನ್ನು ಕೇಳಿದಾಗ, ಅವರಿಗೆ ಇಷ್ಟವಾದ ಕ್ಯೂಬನ್ ಸಿಗಾರ್ ಬಾಕ್ಸನ್ನು ಕೊಟ್ಟೆ ಎಂದವರು ಹೇಳಿದ್ದರು. ಆದರೆ ಈಗ ಕಾಲ ಬದಲಾಗಿದೆ.