Friday, 2nd December 2022

ಶೋಕಿಸಬೇಕಿದ್ದ ದಿನವನ್ನೂ ಶೋಕಿ ದಿನವಾಗಿಸಿದ ಅಲಿಬಾಬಾ!

ರೋಹಿತ್ ಚಕ್ರತೀರ್ಥ

ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು ಗೆಲ್ಲಲು ಯಾವ ಉದ್ಯಮಿಗಳಿಗೂ ಸಾಧ್ಯವಾಗುತ್ತಿಲ್ಲ.

ಇದನ್ನು ಹುಚ್ಚು ಎನ್ನಬೇಕೋ ಹಿಸ್ಟೀರಿಯಾ ಎನ್ನಬೇಕೋ ತಿಳಿಯುತ್ತಿಿಲ್ಲ! ಅಂದು ಗಡಿಯಾರದ ಮುಳ್ಳು ಹನ್ನೆೆರೆಡು ತೋರಿಸಿ ಕೇವಲ 85 ಸೆಕೆಂಡುಗಳಾಗಿದ್ದವಷ್ಟೇ. ಪಕ್ಕದಲ್ಲಿ ತೆರೆದಿಟ್ಟಿಿದ್ದ ದೊಡ್ಡ ಎಲೆಕ್ಟ್ರಾಾನಿಕ್ ಬೋರ್ಡಿನಲ್ಲಿ ಅಕ್ಷರಗಳು ತಟಪಟ ಹಾರುತ್ತ, ಜಿಗಿದು ಜಿಗಿದು ಓಡುತ್ತ 1,000,000,000 ಡಾಲರ್ ಎಂದು ತೋರಿಸಿದವು. ನಂತರದ ಒಂದು ಗಂಟೆಯಲ್ಲಿ ಬೋರ್ಡ್‌ನಲ್ಲಿದ್ದ ಸಂಖ್ಯೆೆಗೆ ಇನ್ನೂ ಒಂದು ಸೊನ್ನೆೆ ಸೇರಿಕೊಂಡಿತು. ಅಂದರೆ ಅದೀಗ 10 ಬಿಲಿಯನ್ ಡಾಲರ್ ಆಯಿತು. ಒಟ್ಟು ಇಪ್ಪತ್ತನಾಲ್ಕು ಗಂಟೆಗಳು ಕಳೆದು ಗಡಿಯಾರದ ಮುಳ್ಳು ಮತ್ತೆೆ 12ಕ್ಕೆೆ ಬರುವಷ್ಟರಲ್ಲಿ ಬೋರ್ಡ್ ತೋರಿಸುತ್ತಿಿದ್ದದ್ದು 30.8 ಬಿಲಿಯನ್ ಡಾಲರುಗಳನ್ನು.

ಅಷ್ಟೆೆಂದರೆ ಭಾರತೀಯ ರುಪಾಯಿಗಳ ಲೆಕ್ಕದಲ್ಲಿ ಎಷ್ಟಾಾಗುತ್ತದೆ ಎಂದು ಕೇಳುವವರು ದೊಡ್ಡ ಪೇಪರು, ಪೆನ್ನು, ಜೊತೆಗೊಂದು ಕ್ಯಾಾಲ್ಕುಲೇಟರು ಹಿಡಿದುಕೊಂಡು ಗಣಿಸಲು ತೊಡಗಬೇಕು. 1 ಡಾಲರ್ ಎಂದರೆ 72 ರುಪಾಯಿ. ಈ 72ರ ಮುಂದೆ 9 ಸೊನ್ನೆೆ ಹಾಕಿದರೆ ಅದು 1 ಬಿಲಿಯನ್ ಡಾಲರುಗಳಿಗೆ ಸಮ. ಆ ಸಂಖ್ಯೆೆಗೆ ಮತ್ತೆೆ 31ರಿಂದ ಗುಣಿಸಿದರೆ ಬರುವ ಸಂಖ್ಯೆೆ ಎಷ್ಟೋೋ ಅಷ್ಟು ರುಪಾಯಿಗಳ ಬ್ಯುಸಿನೆಸ್ಸನ್ನು ನವೆಂಬರ್ 11ರಂದು ಚೀನಾದಲ್ಲಿ ಕೇವಲ ಒಂದು ಸಂಸ್ಥೆೆ ನಡೆಸಿತು! ಇನ್ನೂ ಒಂದು ಹೊಲಿಕೆ ಕೊಡಬೇಕೆಂದರೆ, ಆ ಸಂಸ್ಥೆೆ ಅಂದು ನಡೆಸಿದ ಒಟ್ಟು ವಹಿವಾಟಿನ ಮೊತ್ತವು ನಮ್ಮ ದೇಶದ ಒಟ್ಟು 130 ಕೋಟಿ ಮಂದಿಯಲ್ಲಿ ಪ್ರತಿಯೊಬ್ಬರೂ 1750 ರುಪಾಯಿಗಳ ಸರಕು ಕೊಂಡರೆ ಎಷ್ಟೋೋ ಅಷ್ಟು! ಅಂಥ ದೊಡ್ಡ ವ್ಯಾಾಪಾರ ನಡೆಸಿದ ಸಂಸ್ಥೆೆಯ ಹೆಸರು ಅಲಿಬಾಬ.

ಅಲಿಬಾಬ, ಚೀನಾದ ಅತಿ ದೊಡ್ಡ ಆನ್‌ಲೈನ್ ಮಳಿಗೆ. ನಮ್ಮಲ್ಲಿ ಫ್ಲಿಿಪ್‌ಕಾರ್ಟ್, ಅಮೆಜಾನ್ ಇಲ್ಲವೆ ಹಾಗೆ. ಇಂದು ನಮ್ಮಲ್ಲಿ ಮೊಬೈಲು, ಟಿವಿ, ಬಟ್ಟೆೆಬರೆ, ಫ್ಯಾಾಷನ್ ವಸ್ತುಗಳು, ಚಪ್ಪಲಿ, ಪೀಠೋಪಕರಣ ಹೀಗೆ ಯಾವುದೇ ವಸ್ತು ಬೇಕಾದರೂ ಆನ್‌ಲೈನ್ ಮಳಿಗೆಗಳಿಗೆ ಎಡತಾಕುತ್ತೇವೆ ತಾನೆ? ಅಲ್ಲಿ ನೂರೆಂಟು ವಸ್ತುವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ನೋಡಬಹುದು; ಎರಡು ವಸ್ತುಗಳನ್ನು ಅವುಗಳ ಗುಣಮಟ್ಟ – ಬೆಲೆ ಇತ್ಯಾಾದಿಯನ್ನು ಎದುರಿಟ್ಟುಕೊಂಡು ಹೋಲಿಸಬಹುದು; ಎಲ್ಲಕ್ಕಿಿಂತ ಮುಖ್ಯವಾಗಿ ಮನೆಯಲ್ಲಿ ಕುಳಿತಲ್ಲೇ ಆ ಎಲ್ಲ ಶಾಪಿಂಗ್ ನಡೆಸಿ ದುಡ್ಡನ್ನೂ ಪಾವತಿಸಿ ಸರಕನ್ನು ಮನೆಬಾಗಿಲಿಗೇ ತರಿಸಿಕೊಳ್ಳಬಹುದು ಎಂಬುದು ಆನ್‌ಲೈನ್ ಮಳಿಗೆಗಳು ಒದಗಿಸಿಕೊಡುವ ಅನುಕೂಲ.

ಚೀನಾದಲ್ಲಿ ವ್ಯಾಾಪಕವಾಗಿ ಬಳಕೆಯಲ್ಲಿರುವ ಅಲಿಬಾಬ ಮಳಿಗೆಯಲ್ಲಿ ಮೊಬೈಲು, ಮೇಜು-ಕುರ್ಚಿ ಮಾತ್ರವಲ್ಲ ದೊಡ್ಡ ಕಾರುಗಳನ್ನು ಕೂಡ ಖರೀದಿಸಬಹುದು! ನವದಂಪತಿಗೆ ಹನಿಮೂನ್‌ಗೆ ಹೋಗಲು ವಿಮಾನಯಾನದ ಟಿಕೆಟ್ ಕೊಳ್ಳುವ ಅಥವಾ ಇಡೀ ಹನಿಮೂನ್ ಪ್ಯಾಾಕೇಜ್ ಅನ್ನೇ ಬುಕ್ ಮಾಡುವ ಅವಕಾಶ ಕೂಡ ಅಲಿಬಾಬದಲ್ಲಿದೆ! ಅಲಿಬಾಬ, ಒಂದರ್ಥದಲ್ಲಿ ಇಡೀ ಚೀನಾವನ್ನು ಆಕ್ರಮಿಸಿಕೊಂಡಿದೆ. ಚೀನಾದ ಇಷ್ಟಾಾನಿಷ್ಟಗಳನ್ನು ಇಂದು ಅಲಿಬಾಬವೇ ನಿರ್ಧರಿಸುತ್ತದೆ. ಈ ಸಂಸ್ಥೆೆಯ ಮುಖ್ಯಸ್ಥ ಜ್ಯಾಾಕ್ ಮಾ, ಚೀನಾದ ಅತ್ಯಂತ ಸಿರಿವಂತ ಉದ್ಯಮಿ. ನಮ್ಮ ದೇಶದ ಮುಕೇಶ್ ಅಂಬಾನಿಯ ಹೆಗಲಿಗೆ ಹೆಗಲುಜ್ಜಿಿ ನಿಲ್ಲುವಂಥ ಧನಿಕ ಈ ಜ್ಯಾಾಕ್.

ಒಂದೇ ಒಂದು ವ್ಯತ್ಯಾಾಸವೆಂದರೆ, ಮುಕೇಶ್ ಅವರದ್ದು ಪಿತ್ರಾಾರ್ಜಿತ ಆಸ್ತಿಿ, ಪಿತ್ರಾಾರ್ಜಿತ ಬ್ಯುಸಿನೆಸ್ಸು. ಆದರೆ ಮಾ-ನದ್ದು ಸಂಪೂರ್ಣ ಸ್ವಯಾರ್ಜಿತ ಸಾಮ್ರಾಾಜ್ಯ! ಕೇವಲ ಎರಡು ದಶಕಗಳ ಹಿಂದೆ ತಿಂಗಳಿಗೆ ಐದಾರು ಸಾವಿರ ರುಪಾಯಿಯಷ್ಟು ದುಡಿಯುತ್ತಿಿದ್ದ ಓರ್ವ ಸಾಮಾನ್ಯ ಇಂಗ್ಲಿಿಷ್ ಟೀಚರ್, ಇಂದು ಇಡೀ ದೇಶವೇ ಮೂಗಿನ ಮೇಲೆ ಬೆರಳಿಡುವಂಥ ಮಹೋದ್ಯಮವನ್ನು ಕಟ್ಟಿಿರುವುದು ಯಾವ ಹಾಲಿವುಡ್ ಸಿನೆಮಾಗೂ ಸ್ಫೂರ್ತಿಯಾಗುವಂಥ ಕತೆ. ಅದನ್ನು ಇನ್ನೊೊಮ್ಮೆೆ ನೋಡೋಣ ಬಿಡಿ!

ಈಗ ನಾವು ಗಮನ ಕೇಂದ್ರೀಕರಿಸುತ್ತಿಿರುವುದು ಇತ್ತೀಚೆಗೆ ನಡೆದುಹೋದ ‘ಸಿಂಗಲ್‌ಸ್‌ ಡೇ’ ಉತ್ಸವದ ಬಗ್ಗೆೆ. ಈ ಲೇಖನದ ಪ್ರಾಾರಂಭದಲ್ಲಿ, ಕೇವಲ ಒಂದು ದಿನದಲ್ಲಿ 30.8 ಬಿಲಿಯನ್ ಡಾಲರುಗಳ ವ್ಯವಹಾರ ನಡೆಸಿದ ಕತೆ ಹೇಳಿದೆನಲ್ಲ? ಅದು ನಡೆದದ್ದು 2018ರ ಸಿಂಗಲ್‌ಸ್‌ ಡೇಯಂದು. ಈ ವರ್ಷ, ಸಿಂಗಲ್‌ಸ್‌ ಡೇ ಉತ್ಸವ ಮುಕ್ತಾಾಯಗೊಳ್ಳಲು ಇನ್ನೂ ಐದಾರು ತಾಸು ಇದೆ ಎನ್ನುವಾಗಲೇ 31 ಬಿಲಿಯನ್ ಡಾಲರುಗಳ ವ್ಯವಹಾರ ಮುಗಿದಿದೆ. ಈ ವರ್ಷ ಹೊಸದೊಂದು ದಾಖಲೆ ಬರೆಯಲು ಚೀನಾ ಸಜ್ಜಾಾಗಿದೆ. ಬಿಡಿ,

ಸಿಂಗಲ್‌ಸ್‌ ಡೇ ಎಂದರೇನು? ಯಾವ ದಿನ ಅದು? ನೋಡೋಣ. ಸಿಂಗಲ್‌ಸ್‌ ಡೇ-ಗೊಂದು ಹಿನ್ನೆೆಲೆ ಇದೆ. ಚೀನಾ ಕಳೆದ 25 ವರ್ಷಗಳಿಂದ ಪ್ರತಿ ವರ್ಷದ ನವೆಂಬರ್ 11ರಂದು ಒಂಟಿಗಳ ದಿನವನ್ನು ಆಚರಿಸಿಕೊಂಡು ಬಂದಿದೆ. 1970ರ ದಶಕದಲ್ಲಿ ಚೀನಾದಲ್ಲಿ ಸರಕಾರ ಬಲವಂತವಾಗಿ ಹೇರಿದ ‘ಏಕ ಶಿಶು ಯೋಜನೆ’ಯ ಪರಿಣಾಮವಾಗಿ ಇಂದು ಅಲ್ಲಿ ಎಲ್ಲಿ ನೋಡಿದರಲ್ಲಿ ಯುವಕರದ್ದೇ ಜಾತ್ರೆೆ! ದೇಶದಲ್ಲಿ 3 ಕೋಟಿಗೂ ಹೆಚ್ಚು ಯುವಕರಿಗೆ ಸಂಗಾತಿಗಳ ಕೊರತೆ. ಮನೆಗೊಂದೇ ಶಿಶುವಿರಲಿ ಎಂದು ಸರಕಾರ ಕಟ್ಟುನಿಟ್ಟಿಿನ ನಿಯಮ ಮಾಡಿದ್ದರ ಫಲವಾಗಿ ಹಲವಾರು ಕುಟುಂಬಗಳು ಗಂಡು ಮಕ್ಕಳನ್ನಷ್ಟೇ ಬಯಸಿದವು (ಚೀನಾದಲ್ಲಿ ಪ್ರಾಾಚೀನ ಕಾಲದಿಂದಲೂ ಜನಸಾಮಾನ್ಯರಿಗೆ ಗಂಡುಮಕ್ಕಳ ಬಯಕೆ ಹೆಚ್ಚು). ಇದು ವ್ಯಾಾಪಕವಾದ ಹೆಣ್ಣುಭ್ರೂಣಹತ್ಯೆೆಗೆ ಕಾರಣವಾಯಿತು.

ಹೆಣ್ಣು ಮಕ್ಕಳನ್ನು ಹೆತ್ತ ಎಷ್ಟೋೋ ಮಂದಿ ಮಕ್ಕಳನ್ನು ಬೀದಿಯಲ್ಲಿ ಬಿಟ್ಟರು; ಇಲ್ಲವೇ ಕದ್ದುಮುಚ್ಚಿಿ ವಿದೇಶೀಯರಿಗೆ ದತ್ತುಕೊಟ್ಟರು/ಮಾರಿದರು. ಗಂಡುಮಕ್ಕಳನ್ನಷ್ಟೇ ಉಳಿಸಿಕೊಂಡರು. ಇದು ಚೀನಾದಲ್ಲಿ ಮೂವತ್ತು ವರ್ಷಗಳ ಅವಧಿಯಲ್ಲಿ ಹೆಣ್ಣು ಗಂಡುಗಳ ಅನುಪಾತದಲ್ಲಿ ದೊಡ್ಡ ವ್ಯತ್ಯಾಾಸ ಬೆಳೆಯಲು ಕಾರಣವಾಯಿತು. ‘ಒಂದೇ ಶಿಶು’ ಎಂಬ ಸರಕಾರದ ಯೋಜನೆ ಎಂಥಾ ದೊಡ್ಡ ಸಮಸ್ಯೆೆಗಳನ್ನು ತಂದೊಡ್ಡಲಿದೆ ಎಂಬುದರ ಸಣ್ಣ ಸೂಚನೆ 1990ರ ಹೊತ್ತಿಿಗಾಗಲೇ ಕಾಣಿಸಿಕೊಳ್ಳತೊಡಗಿತ್ತು. ಕಾಲೇಜುಗಳಲ್ಲಿ, ವಿಶ್ವವಿದ್ಯಾಾಲಯಗಳಲ್ಲಿ ಲಿಂಗಾನುಪಾತದಲ್ಲಿ ದೊಡ್ಡ ಕಂದಕವೇ ಸೃಷ್ಟಿಿಯಾಗಿತ್ತು. ಈ ಸಮಸ್ಯೆೆಯ ಗಂಭೀರತೆಯನ್ನು ಸರಕಾರಕ್ಕೆೆ ವಿವರಿಸುವುದಕ್ಕಾಾಗಿ ನಾನ್‌ಜಿಂಗ್ ವಿವಿಯ ವಿದ್ಯಾಾರ್ಥಿಗಳು 1993ರ ನವೆಂಬರ್ 11ರಂದು ಒಂಟಿಗಳ ದಿನ ಆಚರಿಸಿದರು.

ನಾವು ಹೀಗೆ ವಿವಾಹವಾಗದೆ ಒಂಟಿ ಉಳಿದರೆ ವೃದ್ಧಾಾಪ್ಯದಲ್ಲಿ ನಮಗೆ ಊರುಗೋಲುಗಳಷ್ಟೇ ಆಸರೆ ಎಂಬುದನ್ನು ಸಾಂಕೇತಿಕವಾಗಿ ಹೇಳಲು ಅವರು ನವೆಂಬರ್ 11ರಂದು ಆರಿಸಿಕೊಂಡಿದ್ದರು. ಆ ದಿನವನ್ನು ಅಂಕೆಯಲ್ಲಿ ಬರೆದಾಗ ನಾಲ್ಕು ಕೋಲುಗಳು ನೆಲಕ್ಕೆೆ ಊರಿದಂತೆ ಕಾಣಿಸುವುದರಿಂದ ಅದನ್ನು ‘ಊರುಗೋಲಿನ ದಿನ’ ಎಂದೂ ಕರೆಯುವ ಪದ್ಧತಿ ಶುರುವಾಯಿತು.

93ರಲ್ಲಿ ಸಣ್ಣಮಟ್ಟದಲ್ಲಿ, ವಿವಿಯ ಕ್ಯಾಾಂಪಸ್ ಒಳಗಷ್ಟೇ ಆಚರಣೆಯಾದ ಒಂಟಿಗಳ ದಿನಕ್ಕೆೆ ವರ್ಷ ಹೋದಂತೆ ಜನಪ್ರಿಿಯತೆ ಸಿಕ್ಕತೊಡಗಿತು. 97-98ರ ಹೊತ್ತಿಿಗೆ ಅದನ್ನು ಚೀನಾದ ಹಲವು ಭಾಗಗಳಲ್ಲಿ ಸ್ವಲ್ಪ ಅಬ್ಬರದಿಂದಲೇ ಆಚರಿಸತೊಡಗಿದರು. ಸರಕಾರದ ನೀತಿಯನ್ನು ಗೇಲಿ ಮಾಡುವ ಉದ್ದೇಶದಿಂದ ಪ್ರಾಾರಂಭವಾದ ಒಂದು ಹಬ್ಬ ವರ್ಷಗಳು ಕಳೆವಷ್ಟರಲ್ಲಿ ಒಂದು ಜನಪ್ರಿಿಯ ಉತ್ಸವವೇ ಆಗಿಬಿಟ್ಟಿಿತು! ಆ ದಿನದಂದು ಕಾಲೇಜುಗಳಲ್ಲಿ, ಸಂಘಸಂಸ್ಥೆೆಗಳಲ್ಲಿ ಒಂಟಿ ಯುವಕರು, ಯುವತಿಯರು ಉಳಿದೆಲ್ಲರ ಜೊತೆ ಕಲೆತು ಆಡಿ ಹಾಡಿ ಖುಷಿಯಿಂದ ಕಾಲ ಕಳೆದರು.

ಚೀನಾದಲ್ಲಿ ದಿನಕಳೆದಂತೆ ಒಂಟಿಗಳಿಂದಾಗಿ ಸಮಸ್ಯೆೆ ಬಿಗಡಾಯಿಸುತ್ತಲೇಹೋಯಿತು. ಕೇವಲ ಒಂದೊಂದು ಮಕ್ಕಳನ್ನಷ್ಟೇ ಹೆತ್ತವರು ವೃದ್ಧಾಾಪ್ಯದಲ್ಲಿ ತಮ್ಮ ಮಕ್ಕಳು ತಮ್ಮ ಬಳಿ ಇಲ್ಲದೆ ಒದ್ದಾಾಡಬೇಕಾಯಿತು. ಅವರ ಮಕ್ಕಳಿಗೆ ಮದುವೆಯಾಗದೆ ಒಂಟಿ ಉಳಿದರೆ ಅದು ಇನ್ನೂ ಒಂದು ಸಮಸ್ಯೆೆ! ಚೀನಾದಲ್ಲಿ ಮಾನಸಿಕ ಆರೋಗ್ಯ ವಿಚಾರಿಸುವ ವೈದ್ಯರಿಗೆ ಬೇಡಿಕೆ ಹೆಚ್ಚಿಿತು. ಮಾನಸಿಕ ನೆಮ್ಮದಿ ಕೇಂದ್ರಗಳ ಸಂಖ್ಯೆೆ ಅಣಬೆಯಂತೆ ಬೆಳೆಯಿತು. ವೃದ್ಧಾಾಶ್ರಮಗಳು ಹೆಚ್ಚಾಾದವು. ಹೀಗೆ ಎಲ್ಲವೂ ಮೂವತ್ತೈದು ವರ್ಷಗಳ ಹಿಂದೆ ಕಮ್ಯುನಿಸ್‌ಟ್‌ ಸರಕಾರ ತಂದಿದ್ದ ನಾವಿಬ್ಬರು ನಮಗೊಂದೇ ಯೋಜನೆಗೆ ಬೆಸುಗೆಗೊಳ್ಳುತ್ತ ನಡೆದವು.

ಚೀನಾದ ಈ ಸಿಂಗಲ್‌ಸ್‌ ಸಮಸ್ಯೆೆಯಲ್ಲಿ ಅಲಿಬಾಬ ಸಂಸ್ಥೆೆಯ ಮುಖ್ಯಸ್ಥ ಒಂದು ಸುವರ್ಣಾವಕಾಶ ಕಂಡ! ಚೀನಾದಲ್ಲಿ ‘ಗೋಲ್ಡನ್ ವೀಕ್’ ಎಂಬ ರಾಷ್ಟ್ರೀಯ ಹಬ್ಬ ನಡೆಯುವುದು ಅಕ್ಟೋೋಬರ್‌ನಲ್ಲಿ. ಕ್ರಿಿಸ್‌ಮಸ್ ಹಬ್ಬ ಹೇಗಿದ್ದರೂ ಡಿಸೆಂಬರ್ ಕೊನೆಯಲ್ಲಿ. ಈ ಎರಡು ತಿಂಗಳ ನಡುವಿನ ಅವಧಿಯಲ್ಲಿ ಬರುವ ಸಿಂಗಲ್‌ಸ್‌ ಡೇ-ಯನ್ನು ಒಂದು ದೊಡ್ಡ ಮಾರಾಟ ಉತ್ಸವವಾಗಿ ಆಚರಿಸಿದರೆ ಹೇಗೆ? – ಎಂದು ಯೋಚಿಸಿದ ಜ್ಯಾಾಕ್ ಮಾ. ನೀವು ಒಂಟಿಯೇ? ಚಿಂತೆ ಬೇಡ! ನಿಮಗೆ ನೀವೇ ಉಡುಗೊರೆ ಕೊಟ್ಟುಕೊಳ್ಳಿಿ! ಎಂಬ ಹೊಸ ಸೂತ್ರ ಹೆಣೆದ.

ಮನುಷ್ಯ ತುಂಬ ದುಃಖದಲ್ಲಿದ್ದಾಾಗ ಮತ್ತು ಹೆಚ್ಚು ಒಂಟಿಭಾವ ಕಾಡುತ್ತಿಿದ್ದಾಾಗ ಒಂದೋ ತಿನ್ನುವುದಕ್ಕೆೆ ಇಲ್ಲವೆ ತನಗೆ ಅಗತ್ಯ ಇರುವ/ಇಲ್ಲದ ವಸ್ತುವಿಶೇಷಗಳನ್ನು ಕೊಳ್ಳುವುದಕ್ಕೆೆ ಹೆಚ್ಚು ಹಣ ವ್ಯಯಿಸುತ್ತಾಾನೆ – ಎನ್ನುತ್ತದೆ ಒಂದು ಮನಃಶಾಸ್ತ್ರದ ಸಂಶೋಧನೆ. ಜ್ಯಾಾಕ್ ಮಾ ಆ ಸಂಶೋಧನೆಯನ್ನು ಬಳಸಿಕೊಂಡು ಡಾಲರುಗಳ ಬೆಳೆ ತೆಗೆವ ಕನಸು ಕಂಡ. ಆತನ ಊಹೆ ಸುಳ್ಳಾಾಗಲಿಲ್ಲ! ನಿಮಗೆ ನೀವೇ ಟ್ರೀಟ್ ಕೊಟ್ಟುಕೊಳ್ಳಿಿ ಎಂದು ಹೇಳಿದ ಮಾತು ದೊಡ್ಡ ಮಟ್ಟದ ಪರಿಣಾಮ ಬೀರಿತು. ಜನ ಕಂಪ್ಯೂೂಟರುಗಳ ಮುಂದೆ ಕೂತರು. ಅಥವಾ ಮೊಬೈಲು ಪರದೆ ಸರಿಸಿದರು. ಅಲಿಬಾಬ ಆನ್‌ಲೈನ್ ಮಳಿಗೆಯನ್ನು ಎಡತಾಕಿದರು. ಅಲ್ಲಿ ತಮಗೆ ಬೇಕಾದ/ಬೇಡದ ವಸ್ತುಗಳನ್ನೆೆಲ್ಲ ಜಾಲಾಡಿದರು. ಕೊಂಡರು, ಸಂತೃಪ್ತಿಿಪಟ್ಟರು! ಒಂಟಿಗಳ ದಿನವನ್ನು ಹೀಗೆ ಕೊಳ್ಳುಬಕಗಳಾಗಿ ಆಚರಿಸಿದರು.

ಅಲಿಬಾಬ, 2009ರಲ್ಲಿ ಒಂಟಿಗಳ ದಿನದ ವಿಶೇಷ ಮಾರಾಟ ಉತ್ಸವವನ್ನು ಪ್ರಾಾರಂಭಿಸಿತು. ಪ್ರಥಮ ವರ್ಷದಲ್ಲಿ ಅದು ಮಾರಾಟ ಮಾಡಲು ಸಾಧ್ಯವಾದದ್ದು 50 ಮಿಲಿಯನ್ ಯವಾನ್ (ಚೀನಾ ಕರೆನ್ಸಿಿ)ಗಳಷ್ಟು ಮಾತ್ರ. ಡಾಲರುಗಳ ಲೆಕ್ಕದಲ್ಲಿ ಅದು ಹೆಚ್ಚುಕಡಿಮೆ 4 ಮಿಲಿಯನ್ ಡಾಲರುಗಳ ಬಾಬ್ತು. ಆದರೆ, ಮುಂದಿನ ವರ್ಷಗಳಲ್ಲಿ ಜ್ಯಾಾಕ್ ಮಾ, ತನ್ನ ಮಾರಾಟತಂತ್ರಗಳನ್ನೆೆಲ್ಲ ಪೂರ್ಣಪ್ರಮಾಣದಲ್ಲಿ ಬಳಸಿ ಒಂಟಿಗಳ ದಿನದ ಸೇಲ್‌ಸ್‌ 400 ಮಿಲಿಯನ್ ಡಾಲರುಗಳಿಗೆ ಬೆಳೆಯುವಂತೆ ನೋಡಿಕೊಂಡ! ಎರಡೇ ವರ್ಷಗಳಲ್ಲಿ, ಮಾರಾಟದ ಒಟ್ಟು ಮೊತ್ತಕ್ಕೆೆ ಎರಡು ಸೊನ್ನೆೆಗಳು ಜಮೆಯಾದವು! 2016ರ ಹೊತ್ತಿಿಗೆ ಒಟ್ಟು ಮಾರಾಟ ಮೌಲ್ಯ 17.8 ಬಿಲಿಯನ್ ಡಾಲರುಗಳಷ್ಟಾಾಯಿತು! ಅದರಲ್ಲೂ 5 ಬಿಲಿಯನ್ ಡಾಲರುಗಳಷ್ಟು ಮೌಲ್ಯದ ಸರಕನ್ನು ಜ್ಯಾಾಕ್, ಉತ್ಸವಾಚರಣೆ ಪ್ರಾಾರಂಭವಾದ ಕೇವಲ ಮೊದಲ ತಾಸಿನಲ್ಲೇ ಮಾರಿಬಿಟ್ಟಿಿದ್ದ! ಅದರ ಮರುವರ್ಷಕ್ಕಾಾಗುವಾಗ ಮೌಲ್ಯ ಇನ್ನಷ್ಟು ಹೆಚ್ಚಿಿತು.

ದಿಬ್ಬವಿದ್ದದ್ದು ಗುಡ್ಡ, ಗುಡ್ಡವಿದ್ದದ್ದು ಪರ್ವತ ಎಂಬಂತೆ ಬೆಳೆಯುತ್ತ ಹೋಯಿತು. 2017ರಲ್ಲಿ ಅಲಿಬಾಬ ಮಳಿಗೆಯಲ್ಲಿ ಇದ್ದ ಬ್ರ್ಯಾಾಂಡ್‌ಗಳ ಸಂಖ್ಯೆೆಯೇ 1,40,000ದಷ್ಟು ಎಂದರೆ ನಂಬುತ್ತೀರಾ? ದೇಶೀ ಕಂಪೆನಿಗಳು ಮಾತ್ರವಲ್ಲ; ಚೀನಾದ ಹೊರಗಿಂದ ಬರೋಬ್ಬರಿ 60,000 ಬ್ರ್ಯಾಾಂಡ್‌ಗಳು ಅಲಿಬಾಬ ಕಟ್ಟೆೆಯಲ್ಲಿ ತಂತಮ್ಮ ಸರಕುಗಳ ಮಾರಾಟಕ್ಕೆೆ ಕೂತಿದ್ದವು! 2017ರಲ್ಲಿ ಅಲಿಬಾಬ ಎಷ್ಟು ವಹಿವಾಟು ಮಾಡಿತ್ತೋೋ ಅದನ್ನು 2018ರಲ್ಲಿ, ಮಧ್ಯಾಾಹ್ನದ ಹೊತ್ತಿಿಗೆಲ್ಲ ಮಾಡಿಯಾಗಿತ್ತು! ಒಟ್ಟು ವಹಿವಾಟಿನ ಮೌಲ್ಯ ಲೆಕ್ಕ ಹಾಕಿದರೆ ಹಿಂದಿನ ವರ್ಷಕ್ಕಿಿಂತ ಆ ವರ್ಷ ಅಲಿಬಾಬ 27%ನಷ್ಟು ಹೆಚ್ಚು ವ್ಯಾಾಪಾರ ಮಾಡಿತ್ತು. ಅಮೆರಿಕದ ಆನ್‌ಲೈನ್ ಮಳಿಗೆಗಳು ನಡೆಸುವ ಬ್ಲ್ಯಾಾಕ್ ಫ್ರೈಡೇ, ಸೈಬರ್ ಮಂಡೇ, ಥ್ಯಾಾಂಕ್‌ಸ್‌ ಗಿವಿಂಗ್ ಡೇ ಮುಂತಾದ ವಿಶೇಷ ದಿನಗಳ ಮಾರಾಟಗಳನ್ನೆೆಲ್ಲ ಒಟ್ಟುಗೂಡಿದರೂ ಅವು ಅಲಿಬಾಬದ ಒಂಟಿಗಳ ದಿನದ ವಹಿವಾಟನ್ನು ಸರಿಗಟ್ಟಲಾರವು!
ಬಹುಶಃ ಮುಂದಿನ ವರ್ಷಗಳಲ್ಲಿ ಇದೊಂದು ಜಾಗತಿಕ ಉತ್ಸವವೇ ಆಗಬಹುದು! ಚೀನಾದಲ್ಲಿ ಬಹುತೇಕ ಎಲ್ಲ ಮಂದಿಯೂ ಇದೊಂದು ದಿನದಂದೇ ದೊಡ್ಡ ದೊಡ್ಡ ಐಟಮ್‌ಗಳನ್ನು ಕೊಳ್ಳುವುದಕ್ಕೆೆಂದು ಕಾಯುತ್ತಾಾರೆ; ಭಾರತೀಯರು ದೀಪಾವಳಿಯ ಸೇಲ್‌ಸ್‌‌ಗೆ ಕಾದುಕೂತಂತೆ!

ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿಿದೆ. ಅಲಿಬಾಬದ ಎದುರಲ್ಲಿ ನಿಂತು ಗೆಲ್ಲಲು ಯಾವ ಉದ್ಯಮಿಗಳಿಗೂ ಸಾಧ್ಯವಾಗುತ್ತಿಿಲ್ಲ. ಒಂಟಿಗಳ ದಿನದ ಉತ್ಸವಕ್ಕೆೆ ಪೂರ್ವಭಾವಿಯಾಗಿ ಅಲಿಬಾಬ ಸಂಸ್ಥೆೆ ನವೆಂಬರ್ 10ರಂದು ಆಯೋಜಿಸುವ ಕಾರ್ಯಕ್ರಮಗಳು ಹಾಲಿವುಡ್‌ನ ಆಸ್ಕರ್ ಪ್ರಶಸ್ತಿಿಗಳ ಸಂಜೆಯನ್ನೂ ಮೀರಿಸುವಂತಿರುತ್ತವೆ. ಜ್ಯಾಾಕ್ ಮಾ, ಜಗತ್ತಿಿನ ಅತಿ ಪ್ರಸಿದ್ಧ ಸಿನೆಮಾ ತಾರೆಯರನ್ನು, ಕ್ರೀಡಾಪಟುಗಳನ್ನು, ಮಾಡೆಲ್‌ಗಳನ್ನು, ರಾಜಕಾರಣಿಗಳನ್ನು ಈ ವೇದಿಕೆಗೆ ಕರೆತರುತ್ತಾಾನೆ.

ಆ ರಾತ್ರಿಿ ಇಡೀ ದೇಶ – ಮತ್ತು ಅದರ 130 ಕೋಟಿ ಮಂದಿ ಹುಚ್ಚೆೆದ್ದು ಕುಣಿಯುತ್ತಾಾರೆ! ಮಾರಾಟ ಉತ್ಸವ ಪ್ರಾಾರಂಭವಾಯಿತೆಂದು ಸೂಚಿಸಲು ಹನ್ನೆೆರಡು ಗಂಟೆ ಬಾರಿಸಿದೊಡನೆ ಎಲ್ಲ ಚೀನೀಯರು ಎದ್ದೆೆನೋ ಬಿದ್ದೆೆನೋ ಎಂಬಂತೆ ಅಲಿಬಾಬ ಆನ್‌ಲೈನ್ ಮಳಿಗೆಯಲ್ಲಿ ಕಂಡಕಂಡ ವಸ್ತುಗಳನ್ನು ಆರ್ಡರ್ ಮಾಡುತ್ತಾಾರೆ! ಅಲಿಬಾಬ ಈ ವರ್ಷ ತನ್ನ ಗ್ರಾಾಹಕರ ಮನೆಬಾಗಿಲಿಗೆ ತಲುಪಿಸಿದ ಪೆಟ್ಟಿಿಗೆಗಳ ಸಂಖ್ಯೆೆ 800 ದಶಲಕ್ಷಕ್ಕೂ ಹೆಚ್ಚು! ಅದಲ್ಲದೆ ಈ ವರ್ಷ, ಈ ಒಂಟಿಗಳ ದಿನದ 11ನೇ ವರ್ಷಾಚರಣೆ. 11/11ರ ಉತ್ಸವಕ್ಕೆೆ ಮತ್ತೊೊಂದು 11ರ ಸೇರ್ಪಡೆ! ಈ ಸಲ ಚೀನಾದಲ್ಲಿ ಅಲಿಬಾಬ, ಆಪಲ್ 11 ಐಫೋನ್‌ಗಳ ಮುಂಗಡ ಬುಕ್ಕಿಿಂಗ್‌ನಲ್ಲೇ 14 ಮಿಲಿಯನ್ ಡಾಲರ್‌ಗಳ ವ್ಯವಹಾರ ನಡೆಸಿದೆ! ಇಂಥ ವಿಚಿತ್ರಗಳೆಲ್ಲ ಈ ಜಗತ್ತಿಿನಲ್ಲಿ ನಡೆಯಬಲ್ಲವು ಎಂದು ಕೆಲವೇ ವರ್ಷಗಳ ಹಿಂದೆ ಯಾರಾದರೂ ಹೇಳಿದ್ದರೆ ನಾವು ನಂಬುತ್ತಿಿದ್ದೆೆವೇ?

ಒಟ್ಟಿಿನಲ್ಲಿ ಜನ ಮರುಳೋ ಜಾತ್ರೆೆ ಮರುಳೋ ಎಂಬಂಥ ವಿಚಿತ್ರ ಸನ್ನಿಿವೇಶ! ಒಂಟಿಗಳ ದಿನ ಎಂಬ ನೆಪವನ್ನು ಮುಂದಿಟ್ಟುಕೊಂಡು ಒಂದು ಸರಳ ಮನೋವೈಜ್ಞಾಾನಿಕ ಫಲಿತಾಂಶವನ್ನು ಕೈಯಲಿಟ್ಟುಕೊಂಡು ಜ್ಯಾಾಕ್ ಮಾ ದುಡ್ಡಿಿನ ಗೌರೀಶಂಕರವನ್ನೇ ಎಬ್ಬಿಿಸಿನಿಲ್ಲಿಸಿರುವುದು ಅಚ್ಚರಿ ತರುತ್ತದೆ. ಹಾಗೆಯೇ, ಮನುಷ್ಯ ಎಷ್ಟು ದೊಡ್ಡ ಕೊಳ್ಳುಬಕನಾಗುತ್ತಿಿದ್ದಾಾನೆ; ಹೇಗೆ ತನಗೆ ಬೇಕಾದ/ಬೇಡದ ಸರಕುಗಳನ್ನೆೆಲ್ಲ ಮನೆತುಂಬಿಸಿಕೊಂಡು ಬದುಕನ್ನು ಗಬ್ಬೆೆಬ್ಬಿಿಸುತ್ತಿಿದ್ದಾಾನೆ; ಇವೆಲ್ಲದರಿಂದ ಹೇಗೆ ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚುತ್ತ ಹೋಗುತ್ತಿಿದೆ ಎಂಬುದನ್ನೆೆಲ್ಲ ನೆನೆದರೆ ದುಃಖವೂ ಆಗುತ್ತದೆ. ಈ ಎಲ್ಲ ಆನ್‌ಲೈನ್ ಹುಚ್ಚನ್ನು ಈ ಜಮಾನದ ಜಾಯಮಾನ ಎನ್ನೋೋಣವೆ?