Monday, 3rd October 2022

ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆ ಕಾರ್ಯಾಗಾರ

ತುಮಕೂರು: ಕ್ಷುಲ್ಲಕ ವಿಷಯಗಳಿಗಾಗಿ ಸಮಾಜದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚುತ್ತಿರುವುದರಿಂದ ಆ ಜನಸಮುದಾಯ ದೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಮೂಲಕ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಬೇಕು ಮತ್ತು ತಡೆಯಬೇಕು. ಈ ನಿಟ್ಟಿನಲ್ಲಿ ಮನೋವೈದ್ಯರ ಪಾತ್ರ ಜನಸಮುದಾಯಕ್ಕೆ ಅಗತ್ಯವಾಗಿದೆ ಎಂದುಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿ ದರು.

ವಿಶ್ವಆತ್ಮಹತ್ಯೆತಡೆ ದಿನದ ಅಂಗವಾಗಿ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಏರ್ಪಡಿಸ ಲಾಗಿದ್ದ ಆತ್ಮಹತ್ಯೆ ನಿಯಂತ್ರಣ ತಡೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಆಧುನಿಕವಾಗಿ ಏರುಗತಿಯಲ್ಲಿರುವ ಆತ್ಮಹತ್ಯೆಗಳನ್ನು ತಡೆಗಟ್ಟಿ ಅಮೂಲ್ಯ ಜೀವನವನ್ನು ಉಳಿಸಬೇಕಾಗಿರುವುದು ಮನೋವೈದ್ಯ ಸಮುದಾ ಯದ ಆದ್ಯ ಕರ್ತವ್ಯವಾಗಿದೆ ಎಂದರು.

ಬೆ೦ಗಳೂರಿನ ಆಗ್ಮೆ೦ಟಾ ಆರೋಗ್ಯ ಸ೦ಸ್ಥೆಯ ಮನೋವೈದ್ಯ ಡಾ.ಮೋಹನ್ ಸುನಿಲ್‌ ಕುಮಾರ್ ಮಾತನಾಡಿ, ವಿಶ್ವದಲ್ಲಿ ವರ್ಷಕ್ಕೆ 8 ಲಕ್ಷ ಜನರು ಆತ್ಮಹತ್ಯೆಗೆ ಶರಣರಾದರೆ ಭಾರತದಲ್ಲಿ 1.5 ಜನರು ಆತ್ಮಹತ್ಯೆಗೀಡಾಗುತ್ತಿದ್ದಾರೆ. ಹಣಕಾಸು, ಕೌಟುಂಬಿಕ ಸಮಸ್ಯೆ ಸೇರಿದಂತೆ ಸುಮಾರು15ರಿಂದ 29 ವರ್ಷದ ಒಳಗಿನವರೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು

ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಪ್ರೊ.ಸತ್ಯನಾರಾಯಣ ಮಾತನಾಡಿ, ಸಾರ್ವಜನಿಕ ರಲ್ಲಿ, ಮನೋರೋಗಿಗಳಲ್ಲಿ, ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಲ್ಲಾ ರೀತಿಯ ಒತ್ತಡಗಳು ನಿರ್ವಹಣೆ ಮಾಡಿ ನಿರ್ಣಯಗಳನ್ನು ಸೂಕ್ತವಾದ ಸಮಯದಲ್ಲಿ ತೆಗೆದುಕೊಳ್ಳುವ ಬಗ್ಗೆ ಹಲವು ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆ೦ಗಳೂರಿನ ಆಗ್ಮೆಂಟಾ ಆರೋಗ್ಯ ಸಂಸ್ಥೆಯ ಮನೋವೈದ್ಯ ಡಾ.ಶರ್ಮಿತಾಕೃಷ್ಣಮೂರ್ತಿ, ಡಾ.ಸಾಹೇ ಉಪಕುಲಪತಿ ಡಾ.ಬಾಲಕೃಷ್ಣ ಪಿ ಶೆಟ್ಟಿ, ರಿಜಿಸ್ಟಾçರ್‌ಡಾ.ಎಂ.ಝಡ್.ಕುರಿಯನ್, ಉಪಪ್ರಾ೦ಶುಪಾಲರಾದ ಡಾ. ಪ್ರಭಾಕರ್, ಡಾ. ಮಂಜುನಾಥ್, ಡೆಂಟಲ್‌ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್‌ ಕುಡುವ, ಡಾ. ಅಕ್ಷತಾ, ಆಸ್ಪತ್ರೆಯ ಅಧೀಕ್ಷಕರಾದ ಡಾ.ವೆಂಕಟೇಶ್‌ ಸೇರಿದAತೆ ಹಲವರು ಹಾಜರಿದ್ದರು. ತರಬೇತಿ ಕಾರ್ಯಾಗಾರದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿAಗ್‌ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.