Thursday, 3rd December 2020

ಕುಣಿಯಲು ಬರದವರು ನೆಲ ಡೊಂಕು ಎನ್ನಬಾರದು: ಸಿದ್ದು ಟಾಂಗ್‌

ಹುಬ್ಬಳ್ಳಿ: ಕುಣಿಯಲು ಬರದವರು ನೆಲ ಡೊಂಕು ಎನ್ನಬಾರದು ಎಂದು ಕುಮಾರಸ್ವಾಮಿ ಸರ್ಕಾರ ಬೀಳಲಿಕ್ಕೆ ಸಿದ್ದರಾಮಯ್ಯ ಕಾರಣ ಎನ್ನುವ ವಿಚಾರ ಕ್ಕೆ ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿ ದ್ದಾರೆ.

ಚುನಾವಣೆ ಬಂದಾಗ ಈ ವಿಚಾರ ಹೇಳುವ ಉದ್ದೇಶವೇನು? ಯಡಿಯೂರಪ್ಪ ಸರ್ಕಾರ ಬಂದ ಮೇಲೆ 1.30ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ನಾನು ಐದು ವರ್ಷ ಸಿಎಂ ಇದ್ದಾಗ ಯಾವೊಬ್ಬ ಶಾಸಕನೂ ನನ್ನ ವಿರುದ್ಧವಾಗಿರ್ಲಿಲ್ಲ, ಈಗ ಯಾಕೆ ಹೀಗಾಗುತ್ತಿದೆ ? ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರನ್ನು ಸರಿ ಯಾಗಿ ನೋಡಿಕೊಳ್ಳಲಿಲ್ಲ. ಅವರ ಕ್ಷೇತ್ರಕ್ಕೆ ಸರಿಯಾಗಿ ಅನು ದಾನ ಬಿಡುಗಡೆ ಮಾಡಿದ್ರೆ, ಅವರೇಕೆ ಸರ್ಕಾರ ಬೀಳಿಸುತ್ತಿದ್ದರು ಎಂದು ಪ್ರಶ್ನಿಸಿದರು.

ಹೆಚ”ಡಿಕೆ ಇಷ್ಟು ದಿನ ಏನು ಮಾಡುತ್ತಿದ್ದರು? ಇವಾಗ್ಯಾಕೆ‌ ಆರೋಪ ಮಾಡುತ್ತಿದ್ದಾರೆ ? ಕುಣಿಯಲಾರದವನು ನೆಲ ಡೊಂಕು ಅಂದ್ರಂತೆ ಅಂತ ನಿನ್ನೆನೆ ಹೇಳಿದ್ದೇನೆ. ಸರ್ಕಾರ ಬಿದ್ದು ಎಷ್ಟು ದಿನ ಆಯ್ತು? ನಾನು ಕಿರುಕುಳ ಕೊಟ್ಟಿದ್ರೆ ಇವರು ಯಾಕೆ ಸುಮ್ಮ ನಿದ್ದರು ಎಂದು ಪ್ರಶ್ನೆಗಳ ಸುರಿಮಳೆಗೈದರು.

ಬಿಜೆಪಿ ನಾಯಕರು ಆರೋಪ ಮಾಡಿದ್ದರೆ,  ಅದಕ್ಕೆ ಸಾಕ್ಷಿ ನೀಡಲಿ. ಡಿಸಿಎಂ ಅಶ್ವಥ್ ನಾರಾಯಣ್ ಕಿರುಕುಳದ ಬಗ್ಗೆ ಆಡಿಯೋ ಹೇಳಿಕೆ ವಿಚಾರ ಇದ್ರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಮತ್ತೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎನ್ನುವ ಜಮೀರ್ ಹೇಳಿಕೆ ವಿಚಾರಕ್ಕೆ ಜಮೀರ್ ಒಬ್ಬನೇ ತೀರ್ಮಾನ ಮಾಡೋಕ್ಕಾಗಲ್ಲ. ನಮ್ಮ ಶಾಸಕರು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ.  ನೆರೆ ಪ್ರವಾಹ ಪಿಡಿತರಿಗೆ ಹೋದ ವರ್ಷದ ಪರಿಹಾರವೇ ಸಿಕ್ಕಿಲ್ಲ. ಇವಾಗಲಾದರೂ, ಸರ್ಕಾರ ಜನರ ನೋವಿಗೆ ಸ್ಪಂದಿಸಬೇಕು. ಅಕ್ಟೋಬರ್ 24,25 ರಂದು ನೆರೆಪಿಡಿತ ಪ್ರದೇಶಕ್ಕೆ ಪ್ರವಾಸ ಮಾಡುತ್ತೇನೆ. ನಾನು ಸಿಎಂ ಬಿಎಸ್ ವೈ ರೀತಿ ವೈಮಾನಿಕ ಸಮೀಕ್ಷೆ ಮಾಡಲ್ಲ. ಕಾರಲ್ಲಿ ಹೋಗಿ ಜನರ ಸಮಸ್ಯೆಯನ್ನು ಆಲಿಸುತ್ತೇನೆ. ವೈಮಾನಿಕ ಸಮೀಕ್ಷೆ ಮಾಡಿದ್ರೆ ಏನ್ ಗೊತ್ತಾಗುತ್ತೆ? ಅಧಿಕಾರಿಗಳ ಹತ್ತಿರ ಕೇಳಿದ್ರೆ ಏನು ಮಾಹಿತಿ ಸಿಗುತ್ತೆ‌?

ಜನರ ಹತ್ತಿರ ಹೋಗಿ ಸಮಸ್ಯೆ ಆಲಿಸಬೇಕು. ಬೆಳಗಾವಿ, ಕಲಬುರಗಿ ಹಾಗೂ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದು ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದರು

Leave a Reply

Your email address will not be published. Required fields are marked *