Thursday, 16th September 2021

ಸಿಂಧನೂರು ಶಾಸಕ ನಾಡಗೌಡ ಬಿಜೆಪಿ ಶಾಸಕನೋ, ಜೆಡಿಎಸ್ ಶಾಸಕನೋ ತಿಳಿಸಲಿ

ಸಿಂಧನೂರು: ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತದೆ ಬಿಜೆಪಿ ಪಕ್ಷದಲ್ಲಿ ಒಂದು ಕಾಲು, ಜೆಡಿಎಸ್ ಪಕ್ಷದಲ್ಲಿ ಮತ್ತೊಂದು ಕಾಲು ಇಟ್ಟಿದ್ದಾರೆ. ಅವರು ಯಾವ ಪಕ್ಷದ ಶಾಸಕರು ಎಂಬುದು ಸ್ಪಷ್ಟಪಡಿಸಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದೆ ಇದರ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ಪ್ರಶ್ನೆ ಮಾಡುತ್ತಿಲ್ಲ. ಹಾಗಾಗಿ, ಅವರು ಯಾವ ಪಕ್ಷದ ಶಾಸಕರಾಗಿದ್ದಾರೆ ಎಂಬುದು ಮೊದಲು ತಿಳಿಸಬೇಕು ರೈತರ ಹೆಸರು ಹೇಳಿಕೊಂಡು ಶಾಸಕರಾದ ನಂತರ ಯಾವುದೇ ಅಭಿವೃದ್ಧಿ ಕಾಮಗಾರಿಗಳು ತಾಲೂಕಿನಲ್ಲಿ ಮಾಡುತ್ತಿಲ್ಲ ಈ ಬಾರಿ ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಕೂಡಲೇ ಐಸಿಸಿ ಸಭೆ ಕರೆದು ರೈತರೊಂದಿಗೆ ಹೆಚ್ಚಿಸುವ ಕೆಲಸ ಮಾಡಬೇಕು.

ಇದೆಲ್ಲ ಬಿಟ್ಟು ಸ್ತ್ರೀ ಶಕ್ತಿ ಒಕ್ಕೂಟದ ಮಹಿಳೆಯರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಕೆಲವರಿಂದ ಮಾಡಿಸಿ ಅವರ ಮೇಲೆ ಶಾಸಕರು ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರ್ಕಾರ ರೈತರಿಗೆ ತಾರತಮ್ಯ ಮಾಡಿರುವುದನ್ನು ವಿರೋಧಿಸಿ ನ. 19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಜೆಡಿಎಸ್ ಪಕ್ಷ ಹೊರತು ಪಡಿಸಿ ಎಲ್ಲಾ ಪಕ್ಷದ ಮುಖಂಡರು ವಿವಿಧ ಸಂಘಟನೆಗಳು ಭಾಗವಹಿಸಿ ರೈತರ ಪರ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದರು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಜಿಪಂ ಸದಸ್ಯ ಬಸವರಾಜ ಹಿರೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಜಾಫರ್ ಸಾಬ್ ಜಾಗಿರ್ದಾರ್, ಎಚ್ ಎನ್ ಬಡಿಗೇರ್ ,ಆರ್. ಸಿ ಪಾಟೀಲ್ ,ಛತ್ರಪ್ಪ ಇತರರು ಇದ್ದರು

Leave a Reply

Your email address will not be published. Required fields are marked *