Friday, 7th October 2022

17 ಅಭ್ಯರ್ಥಿಗಳಿಂದ ಒಟ್ಟು 25 ನಾಮಪತ್ರ ಸಲ್ಲಿಕೆ

ಶಿರಾ: ಇಲ್ಲಿನ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಿಕೆಗೆ ಕೊನೆಯ ದಿನವಾದ ಶುಕ್ರವಾರ ಒಟ್ಟಾರೆ ಹದಿನೈದು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ 25 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶುಕ್ರವಾರ ನಾಮಪತ್ರ ಸಲ್ಲಿಸಿದ ಪ್ರಮುಖರಲ್ಲಿ ಬಿಜೆಪಿಯ ಸಿ.ಎಂ.ರಾಜೇಶ್ ಗೌಡ ದಿನ ಆಕರ್ಷಣೆಯಾಗಿದ್ದರು. ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ್, ಸಂಸದ ಎ.ನಾರಾಯಣಸ್ವಾಮಿ, ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಜಿಲ್ಲಾಧ್ಯಕ್ಷ ಸುರೇಶ್ ಗೌಡ, ತುಮಕೂರು ಶಾಸಕ ಜ್ಯೋತಿಗಣೇಶ್, ಸ್ಥಳೀಯ ಮುಖಂಡರಾದ ಎಸ್.ಆರ್.ಗೌಡ, ಬಿ.ಕೆ.ಮಂಜು ನಾಥ್, ವಿಜಯರಾಜ್, ರಂಗಸ್ವಾಮಿ ಸೇರಿದಂತೆ ಹಲವು ಮುಖಂಡರೊAದಿಗೆ ಮೆರವಣಿಗೆಯಲ್ಲಿ ತಾಲ್ಲೂಕು ಕಛೇರಿಗೆ ತೆರಳಿದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್‌ನಿಂದ ಅಮ್ಮಾಜಮ್ಮ, ಸಿಪಿಐ ಪಕ್ಷದ ಗಿರೀಶ್, ರೈತ ಭಾರತ ಪಾರ್ಟಿಯ ತಿಮ್ಮಕ್ಕ, ರಿಪಬ್ಲಿಕ್ ಸೇನೆಯ ಪ್ರೇಮಕ್ಕ ಪಕ್ಷದ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಜಯಣ್ಣ. ವೈ. ಉರ್ಫ್ ಜಯಣ್ಣ, ಎಂ.ಎಲ್.ಎ.ಆರ್. ಕಂಬಣ್ಣ, ಸಾದಿಕ್ ಪಾಷ, ಎಂ.ಗುರುಸಿದ್ದಪ್ಪ, ಎಲ್.ಕೆ.ದೇವರಾಜು, ನಿಸಾರ್ ಅಹಮದ್, ಜಿ.ಎಸ್.ನಾಗರಾಜ, ಆಂಬ್ರೋಸ್. ಡಿ.ಮೆಲ್ಲೋ, ರಂಗಪ್ಪ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಶುಕ್ರವಾರದ ಅಂತ್ಯಕ್ಕೆ ಒಟ್ಟಾರೆ 17 ಅಭ್ಯರ್ಥಿಗಳು 25 ನಾಮಪತ್ರಗಳನ್ನು ಸಲ್ಲಿಸಿದ್ದು, ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೋಮವಾರದ ಮದ್ಯಾಹ್ನದ ವರೆಗೂ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ನಂತರ ಚುನಾವಣಾ ಕಣದಲ್ಲಿ ಉಳಿಯುವ ಅಂತಿಮ ಅಭ್ಯರ್ಥಿಗಳ ಪಟ್ಟಿ ದೊರೆಯಲಿದೆ.

ನವೆಂಬರ್ ಮೂರಕ್ಕೆ ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ನವೆಂಬರ್ 10ರಂದು ಮತ ಎಣಿಕೆ ನಡೆದು, ವಿಜೇತ ಅಭ್ಯರ್ಥಿ ಯ ಘೋಷಣೆ ಮಾಡಲಾಗುತ್ತದೆ.