Tuesday, 29th September 2020

ಎರಡನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಡಲು ಫಿಟ್

ಮ್ಯಾಾಂಚೆಸ್ಟರ್: ಮೊದಲ ಪಂದ್ಯದಿಂದ ಹೊರಗುಳಿದ ಬಳಿಕ ಸ್ಟೀವ್ ಸ್ಮಿತ್ ಎರಡನೇ ಪಂದ್ಯಕ್ಕು ಲಭ್ಯರಾಗುವುದು ಅನುಮಾನವೆಂದೇ ಹೇಳಲಾಗಿತ್ತು. ಆದರೆ ಶನಿವಾರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಸ್ಟೀವ್ ಸ್ಮಿತ್ ಆಡಲು ಫಿಟ್ ಆಗಿದ್ದಾ ರೆಂಬ ವರದಿ ಬಂದಿದೆ. ಹೀಗಾಗಿ ಆಸ್ಟ್ರೇಲಿಯಾಗೆ ದೊಡ್ಡ ಬಲ ದೊರೆತಂತಾಗಿದೆ.

ಆಸ್ಟ್ರೇಲಿಯಾದ ಬ್ಯಾಟಿಂಗ್ ಮಾಂತ್ರಿಕ ಸ್ಟೀವ್ ಸ್ಮಿತ್ ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದರು. ಹೀಗಾಗಿ ಮೊದಲ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದು ವೈದ್ಯಕೀಯ ಪರೀಕ್ಷೆಯಲ್ಲೂ ಸ್ಮಿತ್ ಫಿಟ್ ಇರುವುದು ಸಾಬೀತಾಗಿದೆ. ಹೀಗಾಗಿ 2ನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಶುಕ್ರವಾರದ ಮೊದಲ ಏಕದಿನ ಪಂದ್ಯಕ್ಕೆ ಮುನ್ನ ನಡೆದ ಅಭ್ಯಾಸದ ವೇಳೆ ಕೋಚಿಂಗ್ ಸಿಬ್ಬಂದಿ ಸದಸ್ಯರ ಎಸೆತ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದ ಸ್ಮಿತ್ ತಲೆಗೆ ಬಡಿದಿತ್ತು. ಹೀಗಾಗಿ ಅಂತಿಮ ಹಂತದಲ್ಲಿ ಹಿಂದಕ್ಕೆ ಸರಿದಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 19 ರನ್‌ಗಳಿಂದ ಗೆದ್ದುಕೊಂಡಿದ್ದು 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

ಸ್ಟೀವ್ ಸ್ಮಿತ್ ಕಳೆದ ಬಾರಿ ಲಾರ್ಡ್ಸ್‌ನಲ್ಲಿ ನಡೆದ ಆಶಸ್ ಟೆಸ್ಟ್ ಪಂದ್ಯದಲ್ಲೂ ತಲೆಗೆ ಏಟು ತಿಂದಿದ್ದರು. ಪಂದ್ಯದ ವೇಲೆ ವೇಗಿ ಜೋಫ್ರಾ ಆರ್ಚರ್ ಎಸೆತ ನೇರವಾಗಿ ಸ್ವಿತ್ ತಲೆಗೆ ಬಡಿದ ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಕಣಕ್ಕಿಳಿದಿರಲಿಲ್ಲ. ಬಳಿಕ ಮುಂದಿನ ಪಂದ್ಯದಿಂದಲೂ ಸ್ಮಿತ್ ಹೊರಗುಳಿದಿದ್ದರು.

Leave a Reply

Your email address will not be published. Required fields are marked *