Tuesday, 9th August 2022

ರಾವತ್ ನಿಧನ: ಹುಟ್ಟುಹಬ್ಬ ಆಚರಿಸಿಕೊಳ್ಳದ ಸೋನಿಯಾ

ನವದೆಹಲಿ: ತಮಿಳುನಾಡಿನ ಕೂನೂರ್​​ನಲ್ಲಿ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ಮತ್ತು ಇತರ 11 ಸೈನಿಕರು ಮೃತರಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಗುರುವಾರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಸಿಡಿಎಸ್ ಬಿಪಿನ್ ರಾವತ್ ಮತ್ತು 11 ಸೈನಿಕರು ಮೃತರಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಹೀಗಾಗಿ, ರಾಷ್ಟ್ರಾದ್ಯಂತ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ತಮ್ಮ ಜನ್ಮ ದಿನದ ಸಂಭ್ರಮ ಆಚರಣೆ ಮಾಡಬಾರದು ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಊಟಿ ಸಮೀಪ ಕೂನೂರ್​​ಬಳಿ ಗುಡ್ಡ ಪ್ರದೇಶದಲ್ಲಿ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ ಸೇನಾಧಿಕಾರಿಗಳು ವೆಲ್ಲಿಂಗ್ಟನ್​​ಗೆ ತೆರಳುತ್ತಿದ್ದ ವೇಳೆ ಸೇನಾ ಹೆಲಿಕಾಪ್ಟರ್ ಪತನವಾಗಿ ಬಿಪಿನ್ ರಾವತ್, ಪತ್ನಿ ಮಧುಲಿಕಾ ಮತ್ತು 11 ಸೈನಿಕರು ಮೃತಪಟ್ಟಿದ್ದಾರೆ.