Friday, 19th August 2022

ಕಾಂಗ್ರೆಸ್‌ ಸೋಲಿಗೆ ಸಾಮಾಜಿಕ ಜಾಲತಾಣ ದೂಷಿಸಿದ ಸೋನಿಯಾ

SOnia Gandhi and Rahul Gandhi

ನವದೆಹಲಿ: ಪಂಚರಾಜ್ಯಗಳಲ್ಲಿ ಸೋಲನ್ನು ಅನುಭವಿಸಿರುವ ಕಾಂಗ್ರೆಸ್​ ಪಕ್ಷಕ್ಕೆ ಸೋಲಿಗೆ ನಿಜವಾದ ಕಾರಣ ತಿಳಿಯಲಾಗದೆ ಹಾಗೂ ತಂತ್ರ, ಪ್ರತಿತಂತ್ರ, ಕುತಂತ್ರ ಯಾವುದೂ ಫಲಿಸದ ಹಿನ್ನೆಲೆಯಲ್ಲಿ ತೀವ್ರವಾಗಿ ಕುಸಿದುಹೋಗಿರುವ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸೋಲಿಗೆ ಈಗ ಸಾಮಾಜಿಕ ಜಾಲತಾಣವನ್ನು ದೂಷಿಸಿದರು.

ಚುನಾವಣಾ ರಾಜಕೀಯದ ಮೇಲೆ ಸಾಮಾಜಿಕ ಮಾಧ್ಯಮಗಳು ಪ್ರಭಾವ ಬೀರುವುದನ್ನು ಕೊನೆಗಾಣಿಸಬೇಕಿದೆ ಎಂದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದು. ಜಾಗತಿಕ ಸಾಮಾಜಿಕ ಮಾಧ್ಯಮ ಕಂಪನಿಗಳು ಎಲ್ಲಾ ಪಕ್ಷಗಳಿಗೆ ಸಮನಾದ ವೇದಿಕೆ ಒದಗಿಸುತ್ತಿಲ್ಲ ಎಂಬುದು ಸಾರ್ವಜನಿಕರ ಗಮನಕ್ಕೆ ಪದೇ ಪದೇ ಬಂದಿದೆ. ಆಡಳಿತಾರೂಢ ಸಂಸ್ಥೆಗಳ ಸಹಕಾರದೊಂದಿಗೆ ಫೇಸ್​ಬುಕ್​ನಂಥ ಜಾಲತಾಣಗಳು ಸಾಮಾಜಿಕ ಸೌಹಾರ್ದತೆಗೆ ಭಂಗ ಉಂಟು ಮಾಡುತ್ತಿರುವ ಈ ರೀತಿಯ ಅಬ್ಬರದ ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ನುಡಿದರು.