Friday, 7th May 2021

ಬೇಕಿದೆ ಬದಲಿ ಇಂಧನ ಮೂಲ

ಟೆಕ್ ಫ್ಯೂಚರ್‌

ವಸಂತ ಗ ಭಟ್‌

ಡಿಜಿಟಲ್ ಇಂಡಿಯಾ ಯೋಜನೆಯ ಅಡಿ, ಎಲ್ಲಾ ದಾಖಲೆಗಳ ಡಿಜಿಟಲ್ ಪ್ರತಿಯನ್ನು ರಚಿಸಲು ಡಿಜಿಲಾ ಕರ್ ಸಹಕಾರಿ. ವಿಮೆ, ವೈದ್ಯಕೀಯ ವರದಿಗಳು, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಮದುವೆ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.

ಈಗ ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನ ಐದು ಪ್ರತಿಶತ ಪವನ ಶಕ್ತಿಯ ಮೂಲಕ ಉತ್ಪಾದನೆ ಯಾದರೆ ಮೂರು ಪ್ರತಿಶತ ಸೌರ ಶಕ್ತಿಯಿಂದ ಉತ್ಪಾದನೆಯಾಗುತ್ತದೆ. ಒಂದು ಕಾಲದಲ್ಲಿ ಸೌರ ಪ್ಯಾನಲ್ ಅಥವಾ ಪವನ ಶಕ್ತಿಯ ಟರ್ಬೈನ್’ಗಳ ಮೂಲಕ ವಿದ್ಯುತ್ ಅನ್ನು ಉತ್ಪಾದಿಸುವುದು ಹೈಡ್ರೋ ಪವರ್ ಅಥವಾ ಕಲ್ಲಿದ್ದಿಲನ್ನು ಸುಡುವುದರಿಂದ ಉತ್ಪಾದನೆಯಾಗುವ ವಿದ್ಯುತ್‌ಗಿಂತ ದುಬಾರಿಯಾಗಿತ್ತು.

ಆದರೆ ಹೆಚ್ಚಿನವರಿಗೆ ಗೊತ್ತಿರದ ವಿಷಯವೆನೆಂದರೆ, ಸೌರ ಪ್ಯಾನಲ್’ ಗಳ ಬೆಲೆ 2005 ಕ್ಕೆ ಹೊಲಿಸಿದರೆ ಸುಮಾರು 100 ಪ್ರತಿಶತ ಕಡಿಮೆ ಆಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಕಡಿಮೆಯಾಗ ಲಿದೆ. ಇಂದಿಗೂ ವಿಶ್ವದ ಹೆಚ್ಚು ವಿದ್ಯುತ್ ಉತ್ಪಾದನೆಯಾಗುವುದು ಕಲ್ಲಿದ್ದಿಲನ್ನು ಸುಡುವ ಮುಖಾಂತರ. ಎಲ್ಲರಿಗೂ ತಿಳಿದಿರುವಂತೆ ಇದು ವಾತಾ ವರಣಕ್ಕೆ ಹೇರಳ ಇಂಗಾಲವನ್ನು ಬಿಡುಗಡೆ ಮಾಡು ತ್ತದೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಸೌರ ಮತ್ತು ಪವನ ಶಕ್ತಿಯ ಮೂಲಗಳನ್ನು ಬಳಸುವ ಮೂಲಕ ನಾವು ವಾತಾವರಣ ವನ್ನು ರಕ್ಷಿಸಬಹುದೇ ?

ತೊಡಕುಗಳು
ನವೀಕರಿಸಬಹುದಾದಂತ ಮೂಲದಿಂದ ವಿದ್ಯುತ್ ಉತ್ಪಾದಿಸುವುದರಿಂದ ಸಮಸ್ಯೆಗಳನ್ನು ತಾಂತ್ರಿಕ ಮತ್ತು
ನೈಸರ್ಗಿಕ ಸಮಸ್ಯೆಗಳು ಎಂದು ಎರಡು ರೀತಿಯಲ್ಲಿ ವಿಂಗಡಿಸಬಹುದು. ತಾಂತ್ರಿಕ ಸಮಸ್ಯೆಗಳನ್ನು ನೋಡುವು ದಾದರೆ ನೂರಾರು ಹೆಕ್ಟರ್ ಜಾಗದಲ್ಲಿ ಪವನ ಅಥವಾ ಸೌರ ಶಕ್ತಿಯ ಮೂಲಕ ವಿದ್ಯುತ್ ಅನ್ನು ಉತ್ಪಾದಿಸಿದ ನಂತರ ಅದನ್ನು ನೇರವಾಗಿ ವಿದ್ಯುತ್ ತಂತಿಗೆ ಹರಿಸಲಾಗುವುದಿಲ್ಲ.

ಕಾರಣ ಪವನ ಮತ್ತು ಸೌರ ಶಕ್ತಿಯ ಮೂಲಕ ಇಂತಿಷ್ಟೇ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಹೇಳಲಾಗುವು ದಿಲ್ಲ. ಅದು ಸೌರ ಶಕ್ತಿ ಮತ್ತು ಗಾಳಿಯ ಚಲನೆಯ ಮೇಲೆ ಅವಲಂಭಿತವಾಗಿರುತ್ತದೆ. ಒಂದು ದಿನ ಯಥೇಚ್ಛ ವಿದ್ಯುತ್ ಉತ್ಪಾದನೆಯಾಗಬಹುದು ಮತ್ತು ಇನ್ನೊಂದು ದಿನ ಯಾವುದೇ ವಿದ್ಯುತ್ ಉತ್ಪಾದನೆಯಾಗದೆ ಇರಬ ಹುದು.

ಈ ಸಮಸ್ಯೆಯನ್ನು ಬಗೆಹರಿಸಲು ವಿದ್ಯುತ್ ಅನ್ನು ದೈತ್ಯ ಬ್ಯಾಟರಿಗಳಲ್ಲಿ ಸಂಗ್ರಹಿಸಿಟ್ಟು ನಂತರ ಅದನ್ನು ಹಂತ
ಹಂತವಾಗಿ ವಿದ್ಯುತ್ ತಂತಿಗೆ ವರ್ಗಾಯಿಸಬೇಕು. ಇಲ್ಲಿಯೂ ಮತ್ತೊಂದು ಸಮಸ್ಯೆಯಿದೆ. ಅಂದಾಜು ಮಾಡಿದ್ದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾದರೆ ಅದನ್ನು ಎಲ್ಲಿ ಶೇಖರಿಸಿಡುವುದು ? ಈ ಸಮಸ್ಯೆಗೆ ಕೆಲವು ಪರಿಹಾರಗಳಿವೆ. ಒಂದು ಆ ವಿದ್ಯುತ್ ನಿಂದ ಹೈಡ್ರೋಜನ್ ಅನ್ನು ಉತ್ಪಾದಿಸಿ ನಂತರ ಬೇಕಾದಾಗ ಹೈಡ್ರೋಜನ್‌ನಿಂದ ವಿದ್ಯುತ್ ಅನ್ನು ಉತ್ಪಾದಿಸಬಹುದು. ಇಲ್ಲವೇ ಈ ವಿದ್ಯುತ್ ಅನ್ನು ಬಳಸಿ ತಗ್ಗಿನ ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ನೀರನ್ನು ಹರಿಸಬಹುದು ಮತ್ತು ಅವಶ್ಯಕತೆ ಇದ್ದಾಗ ನೀರನ್ನು ಮೇಲಿಂದ ಕೆಳಗೆ ಹರಿಸಿ ವಿದ್ಯುತ್ ಉತ್ಪಾದಿಸಬಹುದು. ಆದರೆ ಈ ಪರಿಹಾರಗಳು ಸಾಕಷ್ಟು ದುಬಾರಿ. ಎಲ್ಲೆಡೆಯು ಇದನ್ನು ಬಳಸುವುದು ಸಾಧ್ಯವಿಲ್ಲ.

ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಸೌರ ಮತ್ತು ಪವನ ಶಕ್ತಿ ಸ್ಥಾವರಗಳನ್ನು ನರ್ಮಿಸಲು ಬಳಕೆಯಾಗುವ
ವಸ್ತುಗಳನ್ನು (ಉದಾ: ಸೌರ ಪ್ಯಾಾನೆಲ್, ದೈತ್ಯ ಪವನ ಟರ್ಬೈನ್)ಅವುಗಳ ಆಯಸ್ಸು ತೀರಿದ ನಂತರ ಅವುಗಳನ್ನು
ಮರುಬಳಕೆ ಮಾಡಲು ಸಾಧ್ಯವಿಲ್ಲ . ಸೌರ ಪ್ಯಾನಲ್ ಅಂತೂ ಬಹಳಷ್ಟು ವಿಷಕಾರಿ ಲೋಹಗಳನ್ನು ಹೊಂದಿರುವು ದರಿಂದ ಅವುಗಳ ವಿಲೇವಾರಿ ಅತ್ಯಂತ ಕ್ಲಿಷ್ಟ. ಮುಂದಿನ 25 ವರ್ಷಗಳ ನಂತರ ಸದ್ಯ ಬಳಕೆಯಲ್ಲಿರುವ ಎಲ್ಲ ಸೌರ ಪ್ಯಾನಲ್ ಗಳು ಬಡ ರಾಷ್ಟ್ರಗಳಲ್ಲಿ ಒಂದೆಡೆ ಜಮೆಯಾಗಿ ಅಲ್ಲಿಯ ವಾತಾವರಣವನ್ನು ಹಾಳುಮಾಡಲಿವೆ.

ಹಕ್ಕಿಗಳ ಸಾವು
ನೈಸರ್ಗಿಕ ಸಮಸ್ಯೆಗಳ ಕಡೆ ಬರುವುದಾದರೆ ಪವನ ಶಕ್ತಿ ಸ್ಥಾವರಗಳಿಂದ ಪ್ರತಿ ವರ್ಷ ಲಕ್ಷಾಂತರ ಹಕ್ಕಿಗಳು ಸಾಯು
ತ್ತಿವೆ. ಅಮೆರಿಕದ ಮರುಭೂಮಿಗಳಲ್ಲಿ ಯಥೇಚ್ಛವಾಗಿ ಸ್ಥಾಪನೆಯಾಗಿರುವ ಪವನ ಶಕ್ತಿ ಸ್ಥಾವರಗಳು ಸ್ಥಳಿಯವಾಗಿ
ಕಂಡು ಬರುವ ಹಳದಿ ಬಾವಲಿ, ಹದ್ದು ಮತ್ತಿತರ ಹಕ್ಕಿಗಳನ್ನು ಅಳಿವಿಂಚಿಗೆ ನೂಕಿವೆ.

ಸೌರ ಶಕ್ತಿ ಸ್ಥಾವರಗಳು ಇದಕ್ಕೆ ಹೊರತಲ್ಲ. ಕರ್ನಾಟಕದ ಪಾವಗಡದಲ್ಲಿರುವ ಸೌರ ಶಕ್ತಿ ಸ್ಥಾವರ ಭಾರತದಲ್ಲೇ ಅತೀ ದೊಡ್ಡ ಸೌರ ಶಕ್ತಿ ಸ್ಥಾವರವಾಗಿದ್ದು, ಅದನ್ನು ನಿರ್ಮಿಸುವಾಗ ಕೃಷಿ ಭೂಮಿಯನ್ನು ಸಿದ್ಧಪಡಿಸುವಂತೆ ನೂರಾರು ಹೆಕ್ಟರ್ ಜಾಗದಲ್ಲಿರುವ ಎಲ್ಲ ದೊಡ್ಡ ಮರಗಳನ್ನು ಕಡಿಯಲಾಯಿತು.

ಅಲ್ಲಿರುವ ಜೀವ ಸಂಕುಲಕ್ಕೆ ಕಷ್ಟ ಒದಗಿತು. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಮರುಭೂಮಿಗಳಲ್ಲಿ ಹೀಗೆ ಸೌರ ಶಕ್ತಿ ಸ್ಥಾವರಗಳನ್ನು ನಿರ್ಮಿಸುವಾಗ ಅಲ್ಲಿದ್ದ ಸಾವಿರಾರು ಮರೂಭೂಮಿ ಅಮೆಗಳನ್ನು ಅಲ್ಲಿಂದ ವರ್ಗಾಯಿಸ ಲಾಯಿತು. ಪರಿಣಾಮ, ಹೆಚ್ಚಿನ ಆಮೆಗಳು ಹೊಸ ಪ್ರದೇಶಕ್ಕೆ ಹೊಂದಿಕೊಳ್ಳಲಾರದೇ ಸತ್ತುಹೋದವು.

ಪವನ ಮತ್ತು ಸೌರ ಶಕ್ತಿ ಸ್ಥಾವರಗಳ ಸಂಖ್ಯೆ ಹೆಚ್ಚಾಗುತ್ತ ಸಾಗಿದಂತೆ ಅವು ಸ್ಥಳಿಯ ಜೀವಿ ಸಂಕುಲವನ್ನು ಕಡಿಮೆ ಮಾಡುತ್ತಾ ಸಾಗುತ್ತವೆ. ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ನೂರಾರು ಹೆಕ್ಟರ್ ಜಾಗದಲ್ಲಿ ಸೌರ ಅಥವಾ ಪವನ ಶಕ್ತಿ ಸ್ಥಾವರಗಳನ್ನು ಎಲ್ಲೆಡೆಯು ಸ್ಥಾಪಿಸಲು ಜಾಗದ ಲಭ್ಯತೆಯಿಲ್ಲ. ಅಮೇರಿಕ, ಆಸ್ಟ್ರೇಲಿಯಾ, ಕೆನಡಾ ದಂತಹ ಕೆಲವೇ ದೇಶಗಳು ಮಾತ್ರ ಈ ರೀತಿ ಮಾಡಬಹುದು. ನಮ್ಮ ದೇಶದಲ್ಲೂ ಜಾಗದ ಕೊರತೆ ಇದೆ.

ಪರಮಾಣು ವಿದ್ಯುತ್
ಹಾಗಾದರೆ ಇಂಧನದ ಅವಶ್ಯಕತೆ ಮತ್ತು ಪ್ರಕೃತಿಗೆ ಕಡಿಮೆ ಮಾರಕವಾಗಬಲ್ಲ ವಿಧಾನ ಯಾವುದು ? ಇದಕ್ಕೆ ಒಂದು ಉತ್ತರವೆಂದರೆ ಪರಮಾಣು ಶಕ್ತಿಯಿಂದ ಉತ್ಪಾದನೆಯಾಗುವ ವಿದ್ಯುತ್. ಇದು ನವೀಕರಿಸಬಹುದಾದಂತಹ ಮೂಲ ವಲ್ಲ. ಆದರೆ ಒಂದು ಸಾಮಾನ್ಯ ರೂಬಿಕ್ಸ್ ಕ್ಯೂಬ್ ಗಾತ್ರದ ಯುರೋನಿಯಮ್ ಒಬ್ಬ ವ್ಯಕ್ತಿ ತನ್ನ ಜೀವ ಪೂರ್ತಿ ಬಳಸುವ ವಿದ್ಯುತ್ ಅನ್ನು ನೀಡಲು ಸಾಧ್ಯ.

ಹಾಗಾಗಿ ಇವು ನವೀಕರಿಸಬಹುದಾದಂತಹ ವಿದ್ಯುತ್ ಮೂಲವಲ್ಲದಿದ್ದರೂ, ಇವುಗಳ ಸಾಮರ್ಥ್ಯ ಹೇರಳವಾಗಿರುವು ದರಿಂದ ಒಂದು ಪ್ಲಾಂಟ್ ಧೀರ್ಘಕಾಲದವರೆಗೆ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದೆ. ಹೆಚ್ಚಿನವರು ಈಗ ಪರಮಾಣು ಶಕ್ತಿ ಉತ್ಪಾದನೆಯಿಂದ ಹೊರಬರುವ ವಿಕಿರಣ ಹೊಂದಿರುವ ತ್ಯಾಜ್ಯ ವಸ್ತುವಿನ ಬಗ್ಗೆ ಯೋಚಿಸುತ್ತಿರ ಬಹುದು. ಅದೊಂದು ಸಮಸ್ಯೆ ಇದೆ. ಆದರೆ ಈಗ ಕಾಲ ಬದಲಾಗಿದೆ. ಆ ಅಪಾಯಕಾರಿ ತ್ಯಾಜ್ಯಗಳನ್ನು ವ್ಯವಸ್ಥಿತ ವಾಗಿ ಭೂಮಿಯಲ್ಲಿ ಶೇಖರಿಸಿಡುವ ವ್ಯವಸ್ಥೆ ಈಗ ಲಭ್ಯವಿದೆ.

ಮತ್ತು ಒಂದು ಪರಮಾಣು ಶಕ್ತಿ ಸ್ಥಾವರವನ್ನು ಸ್ಥಾಪಿಸಲು ಸೌರ ಅಥವಾ ಪವನ ಶಕ್ತಿ ಸ್ಥಾವರಗಳಷ್ಟು ಜಾಗದ
ಅವಶ್ಯಕತೆಯಿಲ್ಲ. ವಿಕಿರಣ ತ್ಯಾಜ್ಯ ಹೊರತುಪಡಿಸಿ ಇನ್ಯಾವುದೇ ತ್ಯಾಜ್ಯ ವಸ್ತುಗಳು ಪರಮಾಣು ಶಕ್ತಿ ಸ್ಥಾವರದಿಂದ ಹೊರ ಬರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾದುದೆಂದರೆ ಪರಮಾಣು ಶಕ್ತಿ ವಿಶ್ವಸಾರ್ಹವಾದುದು, ಸೌರ, ಪವನ ಅಥವಾ ಜಲ ಶಕ್ತಿ ಸ್ಥಾವರಗಳಂತೆ ಅವು ವಾತಾವರಣದ ಮೇಲೆ ಅವಲಂಬಿತವಾಗಿಲ್ಲ. ಆದ್ದರಿಂದ ಕೆಲವು ದೇಶಗಳು ಪರಮಾಣು ವಿದ್ಯುತ್ ಸ್ಥಾವರವನ್ನು ಹೆಚ್ಚು ಹೆಚ್ಚು ಸ್ಥಾಪಿಸುತ್ತಿವೆ.

ಅದರಲ್ಲಿರುವ ಅಪಾಯವೆಂದರೆ ಚೆರ್ನೊಬಿಲ್‌ನಂತಹ ದುರಂತ ಸಂಭಾವ್ಯತೆ. ಆ ಕುರಿತು ಯೋಚಿಸಿ, ಸುರಕ್ಷಾ ಕ್ರಮ ಗಳನ್ನು ಕೈಗೊಂಡು, ಅವುಗಳ ಸಾಧಕ ಭಾಧಕಗಳನ್ನು ಅರಿತು ಬಳಸಿದರೆ ಸುರಕ್ಷಿತ ವಿದ್ಯುತ್ ಪಡೆಯಲು ಸಾಧ್ಯ.

Leave a Reply

Your email address will not be published. Required fields are marked *