Tuesday, 27th July 2021

ಮೃತ ಮಂಜುನಾಥ ಗೌಡ ಹುಣಸೆಕೊಪ್ಪಾ ಕುಟುಂಬಸ್ಥರಿಗೆ ಸಭಾಧ್ಯಕ್ಷ ಕಾಗೇರಿ ಸಾಂತ್ವನ

ಶಿರಸಿ: ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಉಂಟಾದ ಧರೆ ಕುಸಿತದಿಂದ ಮೃತರಾದ ಮಂಜುನಾಥ ಗೌಡ ಹುಣಸೆ ಕೊಪ್ಪಾರವರ ಮನೆಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರ ದಿಂದ ಆರ್ಥಿಕ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹುಣಸೇಕೊಪ್ಪಾ ಪಂಚಾಯತ ಅಧ್ಯಕ್ಷ ಪ್ರಶಾಂತ ಗೌಡರ್  ಸದಸ್ಯರಾದ ಗಣೇಶ ಹೆಗಡೆ ಕಲ್ಮನೆ, ಗೋಪಾಲ ಗೌಡ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ ಮತ್ತು ಗ್ರಾಮ ಪಂಚಾಯತ ಕಾರ್ಯದರ್ಶಿ ಮತ್ತು ಶಿರಸಿ ಗ್ರಾಮೀಣ ಪೋಲಿಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *