ಲಖನೌ:
ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿಿರುವ ಸೈಯದ್ ಮೋದಿ ಇಂಟರ್‌ನ್ಯಾಾಷನಲ್ ಬ್ಯಾಾಡ್ಮಿಿಂಟನ್ ಟೂರ್ನಿಯ ಮೊದಲ ಸುತ್ತಿಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ.
ಬುಧವಾರ ನಡೆದ ಪುರುಷರ ಸಿಂಗಲ್‌ಸ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಆಟಗಾರ ರಷ್ಯಾಾದ ವ್ಲಾಾಡಿಮಿರ್ ಮಾಲ್ಕೋೋವ್ ಅವರ ವಿರುದ್ಧ 21-12, 21-11 ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಗೆದ್ದು ಶುಭಾರಂಭ ಮಾಡಿದ್ದಾಾರೆ. ಮತ್ತೊೊಂದು ಪುರುಷರ ಸಿಂಗಲ್‌ಸ್ ಪಂದ್ಯದಲ್ಲಿ ಫ್ರೆೆಂಚ್‌ಮನ್ ಲುಕಾಸ್ ಕಾರ್ವೆ ಅವರ ವಿರುದ್ಧ ಭಾರತದ ಮತೊರ್ವ ಆಟಗಾರ ಪರುಪಳ್ಳಿಿ ಕಶ್ಯಪ್ ಅವರಿಗೆ ವಾಕ್ ಓವರ್ ಸಿಕ್ಕಿಿದೆ. ಹಾಗಾಗಿ, ಅವರು ಅಂಗಳಕ್ಕೆೆ ಇಳಿಯದೆ ಎರಡನೇ ಸುತ್ತಿಿಗೆ ಲಗ್ಗೆೆ ಇಟ್ಟರು.
ಕಳೆದ ವಾರ ಸ್ಕಾಾಟಿಷ್ ಓಪನ್ ಗೆದ್ದ 18ರ ಪ್ರಾಾಯದ ಲಕ್ಷ್ಯಸೇನ್ ಅವರು ಕೂಡ ಫ್ರೆೆಂಚ್ ಶಟ್ಲರ್ ಥಾಮಸ್ ರಾಕ್ಸೆೆಲ್ ಎದುರು ವಾಕ್ ಓವರ್ ಲಭಿಸಿತು. ಇನ್ನೂ ಮಹಿಳೆಯರ ವಿಭಾಗದಲ್ಲಿ ಅಶ್ಮಿಿತಾ ಚಲಿಯಾ ಅವರು ವೃಶಾಲಿ ಗುಮ್ಮಾಾಡಿ ಅವರ ವಿರುದ್ಧ 21-16, 21-16 ಅಂತರದಲ್ಲಿ ಗೆಲುವು ಪಡೆದರು. ಆ ಮೂಲಕ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ.
==