Friday, 13th December 2024

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಪ್ರಕಟ

ನವದಹೆಲಿ

ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್‌ ಮತ್ತು ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳು ನಡೆಯುವ ಕುರಿತು ಚರ್ಚೆಗಳು ನಡೆಯುತ್ತಿರುವ ಮಧ್ಯೇ, ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಲಿರುವ ಸರಣಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕು ಪಂದ್ಯಗಳ ವೇಳಾಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದ್ದು, ಟೀಮ್‌ ಇಂಡಿಯಾ ಮೊತ್ತ ಮೊದಲ ಬಾರಿ ವಿದೇಶದಲ್ಲಿ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನಾಡುವುದು ಖಚಿತವಾಗಿದೆ.

ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧ ನವೆಂಬರ್‌ 21ರಂದು ಏಕಮಾತ್ರ ಟೆಸ್ಟ್‌ ಪಂದ್ಯವನ್ನು ಆಡಲಿದ್ದು, ಬಳಿಕ ಭಾರತ ವಿರುದ್ಧದ ಟೆಸ್ಟ್‌ ಸರಣಿ ಶುರುವಾಗಲಿದೆ. ಮೊದಲ ಪಂದ್ಯ ಡಿ.3ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ. ನಂತರ ಡಿ.11ರಿಂದ 15ರವರೆಗೆ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಭಾರತ vs ಆಸ್ಟ್ರೇಲಿಯಾ ನಡುವಣ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ನಡೆಯಲಿದೆ.

ಡಿ.26ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯಲಿದ್ದು, ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ 2021ರ ಜನವರಿ 21ರಿಂದ 7ರವರೆಗೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಭಾರತ ತಂಡದ ಇದೇ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನೂ ಆಡಲಿದ್ದು, ಅಕ್ಟೋಬರ್‌ 11, 14 ಮತ್ತು 17ರಂದು ಈ ಪಂದ್ಯಗಳು ಜರುಗಲಿವೆ. ಬಳಿಕ ಜನವರಿಯಲ್ಲಿ ಕನಿಷ್ಠ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯೂ ನಡೆಯಲಿದೆ.