ದೆಹಲಿ
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆತ್ರಿ ಈ ವಾರ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಪದಾರ್ಪಣೆ ಮಾಡಿ ಬರೋಬ್ಬರಿ 15 ವರ್ಷ ಪೂರೈಸಲು ಸಿದ್ದರಾಗಿದ್ದು, ಈಗಾಗಲೇ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಅವರಿಗೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಲಿದೆ.
ಭಾರತೀಯ ಫುಟ್ಬಾಲ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಛೆತ್ರಿ ಅವರ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಹ್ಯಾಸ್ ಟ್ಯಾಗ್ ನಲ್ಲಿ ಸುನಿಲ್ ಛೆತ್ರಿಗೆ (11 ಜರ್ಸಿ ನಂ.) 15 ವರ್ಷ ಎಂದು ಉಲ್ಲೇಖಿಸಿದೆ.
ಫುಟ್ಬಾಲ್ ತಂಡದ ಪೋಸ್ಟ್ ಹೀಗಿದೆ: ” ಕ್ಯಾಪ್ಟನ್ ಮಾರ್ವೆಲ್ @ ಸುನಿಲ್ ಛೆತ್ರಿ 11. ಈ ವಾರ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ 15 ಅದ್ಭುತ ವರ್ಷಗಳನ್ನು ಪೂರೈಸುತ್ತಿದ್ದೀರಿ. ಬ್ಲೂ ಟೈಗರ್ಸ್ ದಂತಕಥೆಯ ಕೆಲವು ಕಾಣದ ಕಥೆಗಳನ್ನು ಮತ್ತು ಮುಂಬರುವ ದಿನಗಳಲ್ಲಿ ನಾವು ನಿಮ್ಮ ಮುಂದೆ ತರುವಾಗ ನಮ್ಮೊಂದಿಗೆ ಸೇರಿ,” ಎಂದು ಬರೆಯಲಾಗಿದೆ.
2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಪದಾರ್ಪಣೆ ಮಾಡಿದ ಛೆತ್ರಿ, ಇದುವರೆಗೂ ದೇಶದ ಪರ 115 ಪಂದ್ಯಗಳನ್ನಾಡಿದ್ದು, 72 ಗೋಲ್ ಗಳನ್ನು ದಾಖಲಿಸಿದ್ದಾರೆ. ರಾಷ್ಟ್ರೀಯ ತಂಡದ ಪರ ಅತ್ಯಧಿಕ ಗೋಲ್ ಬಾರಿಸಿದ ಸಕ್ರಿಯ ಆಟಗಾರರಲ್ಲಿ ಪೋರ್ಚುಗೀಸ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನಂತರದ ಸ್ಥಾನದಲ್ಲಿರುವ ಏಕೈಕ ಆಟಗಾರ ಎಂದರೆ ಅದು ಭಾರತದ ಸ್ಟ್ರೈಕರ್ ಸುನಿಲ್ ಛೆತ್ರಿ.
ಇದಲ್ಲದೆ ಭೈಜುಂಗ್ ಭುಟಿಯಾ ನಂತರ ದೇಶದ ಪರ 100ಕ್ಕೂ ಅಧಿಕ ಪಂದ್ಯಗಳನ್ನಾಡಿದ ಎರಡನೇ ಆಟಗಾರ ಎಂಬ ಹಿರಿಮೆಗೂ ಬೆಂಗಳೂರು ಫುಟ್ಬಾಲ್ ಕ್ಲಬ್ ನಾಯಕ ಸುನಿಲ್ ಛೆತ್ರಿ ಪಾತ್ರರಾಗಿದ್ದಾರೆ.