Wednesday, 11th December 2024

ಮ್ಯಾಚ್ ಫಿಕ್ಸಿಂಗ್: ಇಬ್ಬರು ಯುಎಇ ಆಟಗಾರರಿಗೆ ಎಂಟು ವರ್ಷ ನಿಷೇಧ

ದುಬೈ: ಟಿ 20 ವಿಶ್ವಕಪ್(2019) ಅರ್ಹತಾ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಡಿ ಐಸಿಸಿ, ಯುಎಇ ಕ್ರಿಕೆಟಿಗರಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರಿಗೆ ಎಂಟು ವರ್ಷಗಳ ನಿಷೇಧ ಹೇರಿದೆ.

ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದ್ದ 2019 ರ ಅಕ್ಟೋಬರ್ 16ರಿಂದ ನಿಷೇಧವು ಪೂರ್ವಾನ್ವಯ ಆಗಿದೆ.

33 ವರ್ಷದ ಮಾಜಿ ನಾಯಕ ಮತ್ತು ಬಲಗೈ ವೇಗಿ ನವೀದ್ ದೇಶಕ್ಕಾಗಿ 39 ಏಕದಿನ ಮತ್ತು 31 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ, 42 ವರ್ಷದ ಬ್ಯಾಟ್ಸ್‌ಮನ್ ಬಟ್ 40 ಏಕದಿನ ಮತ್ತು 32 ಟಿ 20 ಪಂದ್ಯಗಳನ್ನು ಆಡಿದ್ದಾರೆ.

ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಯುಎಇ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು ಎಂದು ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

ಐಸಿಸಿ ಪ್ರಕಾರ, ಆರ್ಟಿಕಲ್ 2.1.1 ರ ಪ್ರಕಾರ ಇಬ್ಬರು ಕ್ರಿಕೆಟಿಗರು ತಪ್ಪಿತಸ್ಥರೆಂದು ಸಾಬೀತಾಗಿದೆ.

ಆರ್ಟಿಕಲ್ 2.4.4ರ ಪ್ರಕಾರ, 2019 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಗಳಡಿ ಭ್ರಷ್ಟ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಳಸಿದ ವಿಧಾನ ಅಥವಾ ಆಹ್ವಾನಗಳ ಸಂಪೂರ್ಣ ವಿವರಗಳನ್ನು ಎಸಿಯು ಬಹಿರಂಗಪಡಿಸಲು ವಿಫಲ ವಾಗಿದೆ ಎಂದು ಐಸಿಸಿ ಹೇಳಿದೆ.