Friday, 13th December 2024

ಕೊಹ್ಲಿ ಬತ್ತಳಿಕೆಗೆ ಇನ್ನೊಂದು ದಾಖಲೆ, ಬೇಕು 85 ರನ್ !

ದುಬೈ: ವಿರಾಟ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೋಮವಾರ ಮುಖಾಮುಖಿಯಾಗಲಿದೆ.

ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಾ ದರೂ ತನ್ನ ಆಟ ತೋರಿಸಲಿ ಎಂದು ಆರ್ ಸಿಬಿ ಅಭಿಮಾನಿಗಳು ಆಶಿಸುತ್ತಿದ್ದಾರೆ. ಕಿಂಗ್ ಕೊಹ್ಲಿ ಹೊಸ ದಾಖಲೆ ಬರೆಯಲು ಇನ್ನು 85 ರನ್ ಬೇಕು. ಇನ್ನು 85 ರನ್ ಗಳಿಸಿದರೆ ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊಲದ ಭಾರತೀಯ ಎಂಬ ದಾಖಲೆ ಯನ್ನು ಕೊಹ್ಲಿ ಬರೆಯಲಿದ್ದಾರೆ. ಸದ್ತ ಕೊಹ್ಲಿ283 ಪಂದ್ಯಗಳಿಂದ 8915 ರನ್ ಗಳಿಸಿದ್ದಾರೆ.

ವಿಶ್ವಕ್ರಿಕೆಟ್ ನಲ್ಲಿ ಇದುವರೆಗೆ ಆರು ಮಂದಿ ಆಟಗಾರರು ಟಿ20 ಕ್ರಿಕೆಟ್ ನಲ್ಲಿ 9000 ರನ್ ಗಳಿಸಿದ್ದಾರೆ. ಅವರೆಂದರೆ ಕ್ರಿಸ್ ಗೇಲ್

(13,296), ಕೈರನ್ ಪೊಲಾರ್ಡ್ ( 10,238), ಬ್ರೆಂಡನ್ ಮೆಕಲಮ್ (9922), ಶೋಯೆಬ್ ಮಲಿಕ್ (9906), ಡೇವಿಡ್ ವಾರ್ನರ್ (9318) ಮತ್ತು ಆರೋನ್ ಫಿಂಚ್ (9008). ಆರ್’ಸಿಬಿ ತನ್ನ ಹಿಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 97 ರನ್ ಸೋಲನುಭವಿಸಿತ್ತು. ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ಧ 49 ರನ್ ಅಂತರದ ಗೆಲುವು ಸಾಧಿಸಿತ್ತು.