Friday, 13th December 2024

ಮಹಿಳಾ ಗಾಲ್ಫ್: ಬೆಳ್ಳಿ ಗೆದ್ದ ಅದಿತಿ ಅಶೋಕ್

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ 2023 ರ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ಬೆಳ್ಳಿ ಪದಕದೊಂದಿಗೆ ಇತಿಹಾಸ ಬರೆದಿದ್ದಾರೆ.

ಅಶೋಕ್ ನಾಲ್ಕು ಸುತ್ತಿನ ಸ್ಪರ್ಧೆಯನ್ನು 17 ಅಂಡರ್ ಪಾರ್ ಸ್ಕೋರ್‌ನೊಂದಿಗೆ ಕೊನೆಗೊಳಿಸಿದರು. ಅವರು ನಾಲ್ಕು ಹೊಡೆತಗಳ ಸ್ಪಷ್ಟ ಮುನ್ನಡೆಯೊಂದಿಗೆ ದಿನವನ್ನು ಪ್ರಾರಂಭಿಸಿದರು.

ಈ ಪದಕದೊಂದಿಗೆ ಏಷ್ಯನ್ ಗಾಲ್ಫ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.

ಥಾಯ್ಲೆಂಡ್‌ನ ಅರ್ಪಿಚಯಾ ಯುಬೋಲ್ ಒಟ್ಟು 19 ಅಂಕಗಳೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾದ ಹ್ಯುಂಜೋ ಯೂ ಕಂಚು ಪಡೆದರು.