ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yuzvendra Chahal: ಲಂಡನ್‌ನಲ್ಲಿ ಮಹ್ವಾಶ್ ಜತೆ ಚಹಲ್‌ ಡೇಟಿಂಗ್‌; ವಿಡಿಯೊ ವೈರಲ್‌

ಆರ್‌ಜೆ ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ. ರೇಡಿಯೋ ಜಾಕಿಯಾಗಿರುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದಾರೆ. ಅವರು ತಮ್ಮ ಉತ್ತಮ ಧ್ವನಿ ಮತ್ತು ಮನರಂಜನಾ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಫಾಲೋವರ್ಸ್‌ ಹೊಂದಿದ್ದಾರೆ.

ಲಂಡನ್‌: ಕ್ರಿಕೆಟಿಗ ಯಜುವೇಂದ್ರ ಚಾಹಲ್(Yuzvendra Chahal) ಅವರು ತಮ್ಮ ಗೆಳತಿ ಆರ್‌.ಜೆ.ಮಹ್ವಾಶ್‌(RJ Mahvash) ಜತೆ ಲಂಡನ್‌ನಲ್ಲಿ ಡೇಟಿಂಗ್‌ ನಡೆಸುತ್ತಿದು ಸ್ಟ್ರೀಟ್‌ ಒಂದರಲ್ಲಿ ಸುತ್ತಾಟ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಮಹ್ವಾಶ್ ಕೂಡ ಚಹಲ್‌ ಜತೆಗಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಚಹಲ್‌ ಜತೆಗಿನ ಸಂಬಂಧದ ಬಗ್ಗೆ ಯಾವುದೇ ಕ್ಲ್ಯಾರಿಟಿ ನೀಡದಿದ್ದರೂ ಕೂಡ ಚಹಲ್‌ ಜತೆ ಡೇಟಿಂಗ್‌ ಮಾಡುತ್ತಿರುವುದಂತು ನಿಜ. ಇಲ್ಲವಾದಲ್ಲಿ ಚಹಲ್‌ ಎಲ್ಲೇ ಹೋದರೂ ಅವರ ಜತೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯ.

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಆರ್‌ಜೆ ಮಹ್ವಾಶ್ ಅವರು ಯುಜುವೇಂದ್ರ ಚಹಲ್ ಜತೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ದುಬೈನಲ್ಲೂ ಈ ಜೋಡಿ ಸುತ್ತಾಟ ನಡೆಸಿತ್ತು. ಇದಾದ ಬಳಿಕ ಇವರಿಬ್ಬರು ಆಗಾಗ ಜತೆಯಾಗಿ ಕಾಣಿಸಿಕೊಳ್ಳುವುದರ ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿಯೂ ಹೆಲವು ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ವರ್ಷದ ಆರಂಭದಲ್ಲಿ ಚಹಲ್‌ ಅವರು ಪತ್ನಿ ಧನಶ್ರೀಗೆ ವಿಚ್ಛೇದ ನೀಡಿದ್ದರು.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದ ಮಹ್ವಾಶ್, ನನ್ನ ಬದುಕಿನಲ್ಲಿ ಒಬ್ಬ ಹುಡುಗನಿಗೆ ಮಾತ್ರ ಜಾಗ. ಅವನೇ ನನ್ನ ಸ್ನೇಹಿತ, ಬೆಸ್ಟ್‌ ಫ್ರೆಂಡ್‌, ಬಾಯ್‌ ಫ್ರೆಂಡ್‌ ಮತ್ತು ಪತಿ' ಎಂದು ಹೇಳಿಕೊಂಡಿದ್ದರು. ಚಹಲ್‌ ಕೂಡ ಈ ಪೋಸ್ಟ್‌ಗೆ ಲೈಕ್‌ ಮಾಡಿದ್ದರು.

ಆರ್‌ಜೆ ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ. ರೇಡಿಯೋ ಜಾಕಿಯಾಗಿರುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದಾರೆ. ಅವರು ತಮ್ಮ ಉತ್ತಮ ಧ್ವನಿ ಮತ್ತು ಮನರಂಜನಾ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಫಾಲೋವರ್ಸ್‌ ಹೊಂದಿದ್ದಾರೆ.

ಇದನ್ನೂ ಓದಿ 3 ಮೂಳೆ ಮುರಿತಗೊಂಡಿದ್ದರೂ ಐಪಿಎಲ್‌ ಆಡಿದ್ದ ಚಹಲ್‌; ವಿಚಾರ ಬಹಿರಂಗಪಡಿಸಿದ ಪ್ರೇಯಸಿ