ಜೋಹಾನ್ಸ್ ಬರ್ಗ್: ವೆಸ್ಟ್ ಇಂಡೀಸ್ ಕ್ರಿಕೆಟಿಗ ಫ್ಯಾಬಿಯನ್ ಅಲೆನ್ ಮೇಲೆ ಬಂದೂಕು ತೋರಿಸಿ ದಾಳಿ ನಡೆಸಿರುವ ಅಚ್ಚರಿಯ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ಪಾರ್ಲ್ ರಾಯಲ್ಸ್ ತಂಡದ ಹೋಟೆಲ್ ಹೊರಗೆ ದುಷ್ಕರ್ಮಿಗಳು ಗನ್ ತೋರಿಸಿ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಎಸ್‌ಎ20 ಪಂದ್ಯಾವಳಿ ನಡುವೆ ಈ ಘಟನೆ ನಡೆದಿದ್ದು, 28 ವರ್ಷದ ವಿಂಡೀಸ್ ಆಲ್‌ರೌಂಡರ್ ಬೆಚ್ಚಿಬಿದ್ದಿದ್ದಾರೆ.
ದರೋಡೆಕೋರರು ಸ್ಯಾಂಡ್ಟನ್ ಸನ್ ಹೋಟೆಲ್ ಬಳಿ ಅಲೆನ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಫೋನ್, ವೈಯಕ್ತಿಕ ವಸ್ತುಗಳು ಮತ್ತು ಬ್ಯಾಗ್ ಅನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್, ಕ್ರಿಕೆಟಿಗನಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ.
ಎಡಗೈ ಸ್ಪಿನ್ನರ್ ಅಲೆನ್, ವೆಸ್ಟ್ ಇಂಡೀಸ್ ಪರ 20 ಏಕದಿನ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ. ಕೆಳಕ್ರಮಾಂಕದಲಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಇವರು, ಮಧ್ಯಮ ಓವರ್‌ಗಳಲ್ಲಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲೂ ಸಮರ್ಥರು.