Friday, 13th December 2024

ಭಾರತದ ಅನುಷ್’ಗೆ ಕುದುರೆ ಸವಾರಿಯಲ್ಲಿ ಕಂಚು

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಕುದುರೆ ಸವಾರಿ ವೈಯಕ್ತಿಕ ಸ್ಪರ್ಧೆಯಲ್ಲಿ ಅನುಷ್ ಅಗರ್‌ವಾಲಾ ಕಂಚಿನ ಪದಕ ಗೆದ್ದಿದ್ದಾರೆ.

ಅಗರ್‌ವಾಲಾ 73.030 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದರು. ಈ ಮೂಲಕ ಏಷ್ಯನ್ ಗೇಮ್ಸ್‌ನ ಎರಡನೇ ಪದಕಕ್ಕೆ ಅಗರ್ವಾಲ್​ ಮುತ್ತಿಟ್ಟರು.

ಮಲೇಷಿಯಾದ ಬಿನ್ ಮಹಮದ್ ಫಾತಿಲ್ ಮೊಹಮ್ಮದ್ ಕಬಿಲ್ ಅಂಬಾಕ್ ಅವರು 75.780 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮತ್ತೊಂದೆಡೆ, ಹಾಂಕಾಂಗ್‌ನ ಜಾಕ್ವೆಲಿನ್ ವಿಂಗ್ ಯಿಂಗ್ ಸಿಯು 73.450 ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದರು.

ಬುಧವಾರ ಅಗರ್‌ವಾಲಾ, ಹೃದಯ ವಿಪುಲ್​ ಚೆಡ್ಡಾ, ದಿವ್ಯಾಕೃತಿ ಸಿಂಗ್ ಮತ್ತು ಸುದೀಪ್ತಿ ಹಜೆಲಾ ಅವರನ್ನು ಒಳಗೊಂಡ ತಂಡ ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತು.