Wednesday, 11th December 2024

ಅರ್ಜೆಂಟೀನಾಗೆ 2023 ರ ಫಿಫಾ U-20 ವಿಶ್ವಕಪ್ ಆತಿಥ್ಯ

ಸ್ವಿಟ್ಜರ್ಲೆಂಡ್: ಇಂಡೋನೇಷ್ಯಾ ಬದಲಿಗೆ ಅರ್ಜೆಂಟೀನಾ ದೇಶವು 2023 ರ ಫಿಫಾ U-20 ವಿಶ್ವಕಪ್ ಆತಿಥ್ಯ ವಹಿಸಲಿದೆ.

ಇಂಡೋನೇಷ್ಯಾವನ್ನು ಫಿಫಾ ಆತಿಥ್ಯದಿಂದ ತೆಗೆದುಹಾಕಿದೆ. ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಈ ಕುರಿತು ಪ್ರಕಟಣೆ ಹೊರಡಿಸಿದೆ.

ಅರ್ಜೆಂಟೀನಾದ ಫುಟ್ಬಾಲ್ ಅಸೋಸಿಯೇಷನ್ ​​(AFA) ಮತ್ತು ಫಿಫಾ ನಿಯೋಗವು ಕಳೆದ ವಾರ ದಕ್ಷಿಣ ಅಮೆರಿಕಾದ ದೇಶವನ್ನು ಪರೀಕ್ಷಿಸಿದ ನಂತರ ಫಿಫಾ ಕೌನ್ಸಿಲ್ನ ಬ್ಯೂರೋ ತನ್ನ ನಿರ್ಧಾರವನ್ನು ದೃಢಪಡಿಸಿತು.

ಫಿಫಾ U-20 ವಿಶ್ವಕಪ್ ಮೇ 20 ರಿಂದ ಜೂನ್ 11 ರವರೆಗೆ ಪ್ರಾರಂಭವಾಗಲಿದೆ. 2001 ರ ನಂತರ ಅರ್ಜೆಂಟೀನಾ ಮೊದಲ ಬಾರಿಗೆ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ಫಿಫಾ U-20 ವಿಶ್ವಕಪ್‌ನ ಅಧಿಕೃತ ಡ್ರಾವು ಏ.21 ರಂದು ಜ್ಯೂರಿಚ್‌ನಲ್ಲಿರುವ ಫಿಫಾ ಪ್ರಧಾನ ಕಛೇರಿಯಲ್ಲಿ ನಡೆಯಲಿದೆ.