ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅರುಣ್‌ಲಾಲ್ ಎರಡನೇ ವಿವಾಹಕ್ಕೆ ಸಜ್ಜಾಗಿದ್ದಾರೆ. ಈ ಕುರಿತಂತೆ ‘ಹಲ್ಡಿ’ ಕಾರ್ಯಕ್ರಮದ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
ಮೇ ಎರಡರಂದು ಮದುವೆಗೆ ಮುಹೂರ್ತ ನಿಶ್ಚಯವಾಗಿದೆ. 38 ವರ್ಷದ ಬುಲ್‌ಬುಲ್ ಸಹಾ ಅವರಿಗೆ ತಾಳಿ ಕಟ್ಟಲಿರುವ ಅರುಣ್ ಅವರ ವಯಸ್ಸು ಈಗ 66.
ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕ್ರಿಕೆಟ್‌ನ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ಅರುಣ್ ಲಾಲ್ 2016ರಲ್ಲಿ ಕ್ಯಾನ್ಸರ್‌ಗೆ ಒಳಗಾ ಗಿದ್ದರು. ಬಳಿಕ ಬಂಗಾಳ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಮೊದಲ ಪತ್ನಿಯ ಸಮ್ಮತಿಯೊಂದಿಗೆ ಮದುವೆಗೆ ಸಿದ್ಧರಾಗಿದ್ದಾರೆ ಎಂದು ವರದಿ ಮಾಡಿವೆ.