Tuesday, 10th December 2024

ರವಿಚಂದ್ರನ್‌ ಅಶ್ವಿನ್ ಬತ್ತಳಿಕೆಯಿಂದ ಹೊಮ್ಮಿದ ಶತಕ: ಭಾರತ ಭಾರೀ ಮೊತ್ತ

ಚೆನ್ನೈ: ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗಳು ಆಕ್ರಮಣಕಾರಿ ಬೌಲಿಂಗ್ ದಾಳಿ ಭಾರತದ ಆಟಗಾರ ರವಿಚಂದ್ರನ್‌ ಅಶ್ವಿನ್‌ ಒಂದಿಂಚು ಮಿಸುಕದೆ ಲೀಲಾಜಾಲವಾಗಿ ಬ್ಯಾಟ್ ಬೀಸಿ, ತಮ್ಮ ಏಳನೇ ಟೆಸ್ಟ್ ಶತಕ ಸಿಡಿಸಿದರು.

ಸ್ಪಿನ್ನರ್ ಗಳಿಗೆ ಅನುಕೂಲಕರವಾದ ಪಿಚ್ ನಲ್ಲಿ ಒತ್ತಡದ ನಡುವೆಯೂ ಅದ್ಭುತ ಬ್ಯಾಟಿಂಗ್ ನಡೆಸಿದ ರವಿ ಅಶ್ವಿನ್ ನಾಯಕ ವಿರಾಟ್ ಕೊಹ್ಲಿ ಜೊತೆ 96 ರನ್ ಜೊತೆಯಾಟ ನಡೆಸಿ ನಂತರ ಬಾಲಂಗೋಚಿಗಳ ಸಹಾಯದಿಂದ ಇನ್ನಿಂಗ್ಸ್ ಕಟ್ಟಿದರು.