ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಎಸಿಸಿ ಸಭೆ ಬಹಿಷ್ಕರಿಸಿದ ಬಿಸಿಸಿಐ; ಅನಿಶ್ಚಿತತೆಯಲ್ಲಿ ಏಷ್ಯಾಕಪ್

BCCI boycotts ACC meeting: ಭಾರತ ಮಾತ್ರವಲ್ಲದೆ, ಶ್ರೀಲಂಕಾ, ಓಮನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳು ಸ್ಥಳದ ಬಗ್ಗೆ ಇದೇ ರೀತಿಯ ಆಕ್ಷೇಪಣೆಗಳನ್ನು ಉಲ್ಲೇಖಿಸಿ ಬಹಿಷ್ಕಾರಕ್ಕೆ ಸೇರಿಕೊಂಡಿವೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ವಿರೋಧದ ಹೊರತಾಗಿಯೂ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಢಾಕಾದಲ್ಲಿಯೇ ಸಭೆ ನಡೆಸುವುದಾಗಿ ತಿಳಿಸಿದಾರೆ.

ಎಸಿಸಿ ಸಭೆ ಬಹಿಷ್ಕರಿಸಿದ ಬಿಸಿಸಿಐ; ಅನಿಶ್ಚಿತತೆಯಲ್ಲಿ ಏಷ್ಯಾಕಪ್

Profile Abhilash BC Jul 19, 2025 11:11 AM

ನವದೆಹಲಿ: ಬಾಂಗ್ಲಾದೇಶದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಜುಲೈ 24 ರಂದು ಢಾಕಾದಲ್ಲಿ ನಡೆಯಲಿರುವ ಎಸಿಸಿ(ACC) ಸಭೆಯನ್ನು ಬಿಸಿಸಿಐ(BCCI) ಬಹಿಷ್ಕರಿಸಲು(BCCI boycotts ACC meeting) ಸಜ್ಜಾಗಿರುವುದರಿಂದ 2025 ರ ಏಷ್ಯಾ ಕಪ್‌ನ(Asia Cup 2025) ಭವಿಷ್ಯವು ಅನಿಶ್ಚಿತದಲ್ಲಿದೆ.

ಢಾಕಾದಲ್ಲಿ ನಡೆದರೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಅಧಿಕೃತವಾಗಿ ಎಸಿಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಇಬ್ಬರಿಗೂ ತಿಳಿಸಿದೆ ಎಂದು ಉನ್ನತ ಮೂಲವೊಂದು ಇಂಡಿಯಾ ಟುಡೇಗೆ ತಿಳಿಸಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ರಸ್ತುತ ಹದಗೆಟ್ಟ ರಾಜಕೀಯ ಸಂಬಂಧಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಭಾರತ ಮಾತ್ರವಲ್ಲದೆ, ಶ್ರೀಲಂಕಾ, ಓಮನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳು ಸ್ಥಳದ ಬಗ್ಗೆ ಇದೇ ರೀತಿಯ ಆಕ್ಷೇಪಣೆಗಳನ್ನು ಉಲ್ಲೇಖಿಸಿ ಬಹಿಷ್ಕಾರಕ್ಕೆ ಸೇರಿಕೊಂಡಿವೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ವಿರೋಧದ ಹೊರತಾಗಿಯೂ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಢಾಕಾದಲ್ಲಿಯೇ ಸಭೆ ನಡೆಸುವುದಾಗಿ ತಿಳಿಸಿದಾರೆ.

"ಬಿಸಿಸಿಐ ತನ್ನ ನಿಲುವನ್ನು ಎಸಿಸಿ ಮತ್ತು ಅಧ್ಯಕ್ಷ ನಖ್ವಿ ಇಬ್ಬರಿಗೂ ಸ್ಪಷ್ಟವಾಗಿ ತಿಳಿಸಿದೆ. ಅವರು ಸ್ಥಳ ಬದಲಾವಣೆಗೆ ವೈಯಕ್ತಿಕವಾಗಿ ವಿನಂತಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಎಸಿಸಿ ಸಂವಿಧಾನದ ಪ್ರಕಾರ, ಪ್ರಮುಖ ಸದಸ್ಯರ ಮಂಡಳಿಗಳ ಭಾಗವಹಿಸುವಿಕೆ ಇಲ್ಲದೆ ಢಾಕಾದಲ್ಲಿ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಅಮಾನ್ಯವೆಂದು ಪರಿಗಣಿಸಬಹುದು. ಇದು ಟೂರ್ನಿಯ ಸ್ಥಗಿತದ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.

Asia Cup 2025: ರಾಜತಾಂತ್ರಿಕ ಬಿಕ್ಕಟ್ಟು; ಹಾಲಿ ವರ್ಷದ ಏಷ್ಯಾಕಪ್​ ರದ್ದು ಸಾಧ್ಯತೆ