Wednesday, 9th October 2024

ಕ್ರಿಕೆಟ್‌: ಏಷ್ಯಾ ಕಪ್ ರದ್ದು

ನವದೆಹಲಿ: ಕರೋನಾ ಭೀತಿಯಿಂದಾಗಿ ಜೂನ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ರದ್ದುಗೊಂಡಿದೆ.

ಕಳೆದ ವರ್ಷ, ಈ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸಬೇಕಿತ್ತು. ಆದ್ರೆ, ಆಗಲೂ ಅದನ್ನ ಮುಂದೂಡಲಾಗಿತ್ತು.

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಆಶ್ಲೇ ಡಿ ಸಿಲ್ವಾ, ‘ಕರೋನಾ ವೈರಸ್ ಪ್ರಕರಣಗಳನ್ನ ಗಮನಿಸಿದರೆ, ಏಷ್ಯಾ ಕಪ್ ಅನ್ನು ಆಯೋಜಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ತಂಡಗಳು ಈಗಾಗಲೇ ತಮ್ಮ ವೇಳಾಪಟ್ಟಿ ನಿಗದಿಪಡಿಸಿ ರುವುದರಿಂದ ಮುಂದಿನ ಎರಡು ವರ್ಷಗಳವರೆಗೆ ಈ ಪಂದ್ಯಾವಳಿಗಳನ್ನ ನಡೆಸಲಾಗುವುದಿಲ್ಲ ಎಂದು ಹೇಳಿದರು.

ಏಷ್ಯಾಕಪ್ 2023ರ ವಿಶ್ವಕಪ್ ನಂತ್ರವೇ ನಡೆಯಲಿದೆ ಎಂದು ತೋರುತ್ತದೆ. ಏಷ್ಯಾ ಕ್ರಿಕೆಟ್ ಅಸೋಸಿಯೇಷನ್ ​​ಶೀಘ್ರದಲ್ಲೇ ಔಪಚಾರಿಕ ಪ್ರಕಟಣೆ ನೀಡಲಿದೆ ಎಂದು ಡಿ’ಸಿಲ್ವಾ ಮಾಹಿತಿ ನೀಡಿದರು.

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಆಡುವುದು ಡೌಟು !
ಏಷ್ಯಾಕಪ್ ಅನ್ನು ರದ್ದುಗೊಳಿಸಲು ದೊಡ್ಡ ಕಾರಣವೆಂದರೆ, ಟೀಮ್ ಇಂಡಿಯಾದ ಕಾರ್ಯನಿರತ ವೇಳಾಪಟ್ಟಿ.ಭಾರತ ಏಷ್ಯಾಕಪ್‌ನಲ್ಲಿ ಆಡದಿದ್ದರೆ, ಸಂಘಟಕರು ಭಾರಿ ನಷ್ಟ ಅನುಭವಿಸಬೇಕಾಯಿತು.