ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿಯಲ್ಲಿ ಭಾರತದ ಪಂದ್ಯ ಯಾವಾಗ?
Asia Cup Rising Stars 2025 Schedule: ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಗ್ರೂಪ್ 'ಬಿ' ಯಲ್ಲಿ ಸ್ಥಾನ ಪಡೆದಿರುವ ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ನವೆಂಬರ್ 16 ರಂದು ಪಂದ್ಯಾವಳಿಯ ಅತ್ಯಂತ ನಿರೀಕ್ಷಿತ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20ಯ ವೇಳಾಪಟ್ಟಿ -
ಕತಾರ್: ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್ ಎಂದು ಕರೆಯಲಾಗುತ್ತಿದ್ದ ಎಸಿಸಿ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಮೆಂಟ್(Asia Cup Rising Stars 2025 Schedule) ನವೆಂಬರ್ 14 ರಂದು ಕತಾರ್ ನ ದೋಹಾದಲ್ಲಿ ಆರಂಭವಾಗಲಿದೆ. ಎಂಟು ತಂಡಗಳ ಈ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ಒಳಗೊಂಡಿದ್ದು, ನವೆಂಬರ್ 14 ರಿಂದ 19 ರವರೆಗೆ ಪ್ರತಿದಿನ ಎರಡು ಪಂದ್ಯಗಳು ನಡೆಯಲಿವೆ. ಎರಡೂ ಸೆಮಿಫೈನಲ್ ಪಂದ್ಯಗಳು ನವೆಂಬರ್ 21 ರಂದು ನಡೆಯಲಿದ್ದು, ನಂತರ ನವೆಂಬರ್ 23 ರಂದು ಫೈನಲ್ ನಡೆಯಲಿದೆ.
ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಗ್ರೂಪ್ 'ಬಿ' ಯಲ್ಲಿ ಸ್ಥಾನ ಪಡೆದಿರುವ ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ನವೆಂಬರ್ 16 ರಂದು ಪಂದ್ಯಾವಳಿಯ ಅತ್ಯಂತ ನಿರೀಕ್ಷಿತ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಗುಂಪು 'ಎ': ಬಾಂಗ್ಲಾದೇಶ ‘ಎ’, ಶ್ರೀಲಂಕಾ ‘ಎ’, ಅಫ್ಘಾನಿಸ್ತಾನ ‘ಎ’, ಹಾಂಗ್ ಕಾಂಗ್.
ಗುಂಪು 'ಬಿ': ಭಾರತ ‘ಎ’, ಪಾಕಿಸ್ತಾನ ‘ಎ’, ಯುಎಇ, ಓಮನ್.
ವೇಳಾಪಟ್ಟಿ
ನವೆಂಬರ್ 14: ಪಾಕಿಸ್ತಾನ ‘ಎ’ vs ಒಮಾನ್
ನವೆಂಬರ್ 14: ಭಾರತ ‘ಎ’ vs ಯುಎಇ
ನವೆಂಬರ್ 15: ಬಾಂಗ್ಲಾದೇಶ ‘ಎ’ vs ಹಾಂಗ್ ಕಾಂಗ್
ನವೆಂಬರ್ 15: ಶ್ರೀಲಂಕಾ ‘ಎ’ vs ಅಫ್ಘಾನಿಸ್ತಾನ ‘ಎ’
ನವೆಂಬರ್ 16: ಯುಎಇ vs ಓಮನ್
ನವೆಂಬರ್ 16: ಭಾರತ ‘ಎ’ vs ಪಾಕಿಸ್ತಾನ ‘ಎ’
ನವೆಂಬರ್ 17: ಶ್ರೀಲಂಕಾ ‘ಎ’ vs ಹಾಂಗ್ ಕಾಂಗ್
ನವೆಂಬರ್ 17: ಬಾಂಗ್ಲಾದೇಶ ‘ಎ’ vs ಅಫ್ಘಾನಿಸ್ತಾನ ‘ಎ’
ನವೆಂಬರ್ 18: ಪಾಕಿಸ್ತಾನ ‘ಎ’ vs ಯುಎಇ
ನವೆಂಬರ್ 18: ಭಾರತ ‘ಎ’ vs ಒಮಾನ್
ನವೆಂಬರ್ 19: ಅಫ್ಘಾನಿಸ್ತಾನ ‘ಎ’ vs ಹಾಂಗ್ ಕಾಂಗ್
ನವೆಂಬರ್ 19: ಶ್ರೀಲಂಕಾ ‘ಎ’ vs ಬಾಂಗ್ಲಾದೇಶ ‘ಎ’
ನವೆಂಬರ್ 21: ಸೆಮಿಫೈನಲ್ 1 - A1 vs B2
ನವೆಂಬರ್ 21: ಸೆಮಿಫೈನಲ್ 2 - B1 vs A2
ನವೆಂಬರ್ 23: ಫೈನಲ್
ಇದನ್ನೂ ಓದಿ Rashid Khan: ಎರಡನೇ ಮದುವೆಯಾದ್ರಾ ರಶೀದ್ ಖಾನ್; ವೈರಲ್ ವಿಡಿಯೋದಲ್ಲಿ ಕಾಣಿಸಿದ ಆ ಮಹಿಳೆ ಯಾರು?
ಭಾರತ ತಂಡ
ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್, ಸೂರ್ಯಾಂಶ್ ಶೆಡ್ಜ್, ಜಿತೇಶ್ ಶರ್ಮಾ (ನಾಯಕ), ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಕ್, ಯುದ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ಸುಯಾಶ್ ಶರ್ಮಾ.
ಸ್ಟ್ಯಾಂಡ್-ಬೈ: ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ, ಶೇಕ್ ರಶೀದ್.