Friday, 13th December 2024

ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ವಜಾ

ನವದೆಹಲಿ: ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ.

ಅಲೆಕ್ಸ್ ಆಂಬ್ರೋಸ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು.

” ಅಂಡರ್ 17 ಮಹಿಳಾ ತಂಡದ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ದುರ್ನಡತೆಗಾಗಿ ವಜಾಗೊಳಿಸಲಾಗಿದೆ. ಮುಂದಿನ ಕ್ರಮ ಪ್ರಕ್ರಿಯೆ ಯಲ್ಲಿದೆ” ಎಂದು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯ ಡಾ.ಎಸ್.ವೈ. ಖುರೇಶಿ ಖಚಿತಪಡಿಸಿದ್ದಾರೆ.

ಎಐಎಫ್‌ಎಫ್ ಜೂನ್ 30 ರಂದು ನೀಡಿದ ಹೇಳಿಕೆಯಲ್ಲಿ ಅಪರಾಧಿಯ ಹೆಸರನ್ನು ಉಲ್ಲೇಖಿಸದೆ ಅಥವಾ ಅಪರಾಧವನ್ನು ನಿರ್ದಿಷ್ಟ ಪಡಿಸದೆ ಘಟನೆಯ ಸುಳಿವು ನೀಡಿತ್ತು.

ಯುರೋಪ್ ಪ್ರವಾಸದಲ್ಲಿರುವ ಅಂಡರ್ 17 ಮಹಿಳಾ ತಂಡದಲ್ಲಿ ದುರ್ನಡತೆಯ ಘಟನೆ ವರದಿಯಾಗಿದೆ. ಎಐಎಫ್‌ಎಫ್ ಅಶಿಸ್ತಿನ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತದೆ.

ಭಾರತವು ಈ ವರ್ಷದ ಕೊನೆಯಲ್ಲಿ ಅಕ್ಟೋಬರ್‌ನಲ್ಲಿ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ಪಂದ್ಯಗಳು ಮೂರು ನಗರಗಳಲ್ಲಿ ನಡೆಯಲಿವೆ. ಭುವನೇಶ್ವರ್, ಗೋವಾ ಮತ್ತು ನವಿ ಮುಂಬೈನಲ್ಲಿ ಅಕ್ಟೋಬರ್ 11 ರಿಂದ 30 ರವರೆಗೆ ಕೂಟ ನಡೆಯಲಿದೆ.

ಭಾರತವು ಯುಎಸ್‌ಎ, ಮೊರಾಕೊ ಮತ್ತು ಬ್ರೆಜಿಲ್ ತಂಡಗಳಿರುವ ಕ್ಲಬ್ ನಲ್ಲಿದೆ.