Wednesday, 11th December 2024

ಟಿ20 ವಿಶ್ವಕಪ್​​​ ಗೆದ್ದ ಆಸ್ಟ್ರೇಲಿಯಾ

ದುಬೈ: ಐಸಿಸಿ ಟಿ20 ವಿಶ್ವಕಪ್​​​ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​​ ತಂಡದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್​​ ನೀಡಿದ ಟಾರ್ಗೆಟ್​ ಬೆನ್ನತ್ತಿದ್ದ ಆಸ್ಟ್ರೇಲಿಯಾ 18.5 ಓವರ್​​ನಲ್ಲಿ 2 ವಿಕೆಟ್​​ ನಷ್ಟಕ್ಕೆ 173 ರನ್​​​​ ಸಿಡಿಸುವ ಮೂಲಕ ಗೆದ್ದು ಬೀಗಿದ್ದಾರೆ. ಡೇವಿಡ್​​ ವಾರ್ನರ್​​ ಮತ್ತು ಮಿಚೆಲ್ ಮಾರ್ಷ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಗೆಲ್ಲುವ ಮೂಲಕ ಟಿ20 ವಿಶ್ವಕಪ್​​​​​ ಟ್ರೋಫಿ ಮಡಿಲಿಗೇರಿಸಿಕೊಂಡಿದೆ.

ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ನ್ಯೂಜಿಲೆಂಡ್​​ ಪರ ನಾಯಕ ಕೇನ್​​ ವಿಲಿಯಮ್ಸನ್​ ಭರ್ಜರಿ​ ಅರ್ಧಶತಕ ಗಳಿಸಿದರು. ಇವರ ಅದ್ಭುತ ನೆರವಿನಿಂದಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್​​ನಲ್ಲಿ 4 ವಿಕೆಟ್​​ ನಷ್ಟಕ್ಕೆ 172 ​​ರನ್​​ ಪೇರಿಸಲು ಸಾಧ್ಯವಾಯ್ತು. ನ್ಯೂಜಿಲೆಂಡ್​ ಪರ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 28, ನಾಯಕ ಕೇನ್​​ ವಿಲಿಯಮ್ಸನ್​​ 85, ಗ್ಲೆನ್ ಫಿಲಿಪ್ಸ್ 18 ರನ್​ ಗಳಿಸಿದರು.

ಆಸ್ಟ್ರೇಲಿಯಾ ಪರ ಡೇವಿಡ್​​ ವಾರ್ನರ್​​ 53, ಮಿಚೆಲ್ ಮಾರ್ಷ್ 77, ಮ್ಯಾಕ್ಸ್​ವೆಲ್​​ 28 ರನ್​ ಗಳಿಸಿದರು.