Tuesday, 10th December 2024

ಅಕ್ಷರ್‌ ಮ್ಯಾಜಿಕ್‌: ಭಾರೀ ಅಂತರದ ಗೆಲುವು ಕಂಡ ಭಾರತ

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 317 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 429 ರನ್‌ಗಳ ಗುರಿಯೊಂದಿಗೆ ಮಂಗಳವಾರ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡ ಆರಂಭಿಕ ಆಘಾತ ಎದುರಿಸಿತು. ಜೋ ರೂಟ್ 33, ಜ್ಯಾಕ್ ಲೀಚ್ 0, ಬೆನ್ ಸ್ಟೋಕ್ಸ್‌ 8, ಒಲಿ ಪೋಪ್ 12, ಬೆನ್ ಫೋಕ್ಸ್‌ 2, ಒಲಿ ಸ್ಟೋನ್ 0, ಮೋಯಿನ್ ಅಲಿ 43, ಸ್ಟುವರ್ಟ್ ಬ್ರಾಡ್ ಔಟಾಗದೆ 5 ರನ್‌ ಗಳಿಸಿದರು.

ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 116 ರನ್‌ ಗಳಿಸಿತ್ತು. ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ 54.2 ಓವರ್‌ಗಳಲ್ಲಿ 164 ರನ್‌ ಗಳಿಸಿ ಆಲೌಟ್‌ ಆಗಿದೆ. ಭಾರತದ ಪರ ಅಕ್ಷರ್‌ ಪಟೇಲ್ 5, ಆರ್.ಅಶ್ವಿನ್‌ 4, ಕುಲ ದೀಪ್‌ ಯಾದವ್‌ 2 ವಿಕೆಟ್‌ ಪಡೆದರು.

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 227 ರನ್‌ಗಳಿಂದ ಭಾರತ ತಂಡ ಸೋತಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು, ಉಭಯ ತಂಡಗಳು 1-1 ಅಂತರದಿಂದ ಸರಣಿ ಸಮಬಲ ಸಾಧಿಸಿವೆ. ಮೂರು ಪಂದ್ಯ ಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 227 ರನ್‌ಗಳಿಂದ ಭಾರತ ತಂಡ ಸೋತಿತ್ತು.