Friday, 1st December 2023

ಬಾಂಗ್ಲಾದೇಶ ಕ್ರಿಕೆಟಿಗ ಮಹ್ಮೂದುಲ್ಲಾ ರಿಯಾದ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ

Bangladesh Cricketer

ಢಾಕಾ: ಬಾಂಗ್ಲಾದೇಶದ ಟ್ವೆಂಟಿ-20 ತಂಡದ ನಾಯಕ ಮಹ್ಮೂದುಲ್ಲಾ ರಿಯಾದ್ ಬುಧವಾರ ತಮ್ಮ 35ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ, ರಾಷ್ಟ್ರೀಯ ತಂಡಕ್ಕಾಗಿ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳನ್ನು ಆಡುವುದನ್ನು ಮುಂದುವರಿಸಲಿದ್ದಾರೆ.

ಮಹ್ಮೂದುಲ್ಲಾ 50 ಟೆಸ್ಟ್‌ಗಳಲ್ಲಿ 5 ಶತಕ ಹಾಗೂ 16 ಅರ್ಧಶತಕ ಸೇರಿದಂತೆ 2,914 ರನ್ ಗಳಿಸಿದ್ದಾರೆ. ಅವರು 2009 ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ದರು. ಜುಲೈ 2021 ರಲ್ಲಿ ಬಾಂಗ್ಲಾದೇಶದ ಝಿಂಬಾಬ್ವೆ ಪ್ರವಾಸದ ಸಮಯದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.

ಮಹ್ಮೂದುಲ್ಲಾ ಅವರು 2021 ರಲ್ಲಿ ಹರಾರೆ ಟೆಸ್ಟ್‌ನಲ್ಲಿ ತಮ್ಮ ಅತ್ಯಧಿಕ ವೈಯಕ್ತಿಕ ಟೆಸ್ಟ್ ಸ್ಕೋರ್ ಔಟಾಗದೆ 150 ರನ್ ಗಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನ ರಾದರು. ಇದು ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.

error: Content is protected !!