Sunday, 6th October 2024

ಆಫ್ಘಾನ್ ಅಲ್ಪಮೊತ್ತ: ಬಾಂಗ್ಲಾಕ್ಕೆ ಸುಲಭ ಗೆಲುವು

ಧರ್ಮಶಾಲಾ:  ವಿಶ್ವಕಪ್ ​ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ ಆರು ವಿಕೆಟ್’ನಿಂದ ಸೋಲಿಸಿದೆ.

37.2 ಓವರ್​ಗಳಲ್ಲಿ ಕೇವಲ 156 ರನ್​​ಗಳಿಗೆ ಅಫ್ಘನ್ನರು​ ಸರ್ವಪತನ ಕಂಡರು.  ಪ್ರತಿಯಾಗಿ ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಆಟಗಾರರಾದ ಮೆಹಿದಿ ಹಸನ್ ಮತ್ತು ನಜ್ಮುಲ್ ಹೊಸೇನ್ ಅವರ ಅರ್ಧಶತಕಗಳ ನೆರವಿನಿಂದ ತಂಡದ ಗೆಲುವನ್ನು ಸುಲಭವಾಗಿಸಿದರು. ಇನ್ನು ೧೫ ಓವರು ಬಾಕಿ ಇರುವಾಗಲೇ ಬಾಂಗ್ಲಾದೇಶ ಆರು ವಿಕೆಟ್‌ ನಿಂದ ಗೆಲುವನ್ನು ಸಾಧಿಸಿತು.

ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾದವು. ಟಾಸ್​ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಮೊದಲು ಬೌಲಿಂಗ್​ ಆಯ್ದು ಕೊಂಡರು. ಹಶ್ಮತುಲ್ಲಾ ಶಾಹಿದಿ ಬಳಗ ಬ್ಯಾಟ್​ ಮಾಡಲು ಕ್ರೀಸ್​ಗೆ ಇಳಿದು ಉತ್ತಮ ಆರಂಭ ಪಡೆಯಿತು. ಶಕೀಬ್ ಅಲ್ ಹಸನ್​ ಹಾಗೂ ಮೆಹಿದಿ ಹಸನ್ ಮಿರಾಜ್ ಬೌಲಿಂಗ್​ ದಾಳಿಗೆ ಆಫ್ಘನ್ನರು​ ಪ್ರತ್ಯುತ್ತರ ನೀಡಲು ವಿಫಲರಾದರು.