ಮುಂಬಯಿ: ಶಿಖರ್ ಧವನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಬ್ಬ ಟೀಮ್ ಇಂಡಿಯಾದ ಎಡಗೈ(Left-arm fast bowler Barinder Sran) ವೇಗಿ ಬರೀಂದರ್ ಸ್ರಾನ್(Barinder Sran) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪದಾರ್ಪಣ ಟಿ20 ಪಂದ್ಯದಲ್ಲೇ ಕೇವಲ ಹತ್ತು ರನ್‌ಗೆ 4 ವಿಕೆಟ್ ಕಿತ್ತು ಸಂಚಲನ ಮೂಡಿಸಿದ್ದ ಸ್ರಾನ್(Barinder Sran)ಗೆ ಭಾರತ ಪರ ಆಡಲು ಅವಕಾಶ ಸಿಕ್ಕಿದ್ದು ಕೇವಲ 8 ಪಂದ್ಯಗಳು ಮಾತ್ರ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬರೀಂದರ್ ಸ್ರಾನ್ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು. 2016 ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಎಂಎಸ್ ಧೋನಿ ಅವರಿಂದ ಕ್ಯಾಪ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಬರೀಂದರ್ ಸ್ರಾನ್ ಈ ಪಂದ್ಯದಲ್ಲಿ 4 ವಿಕೆಟ್ ಕಿತ್ತು ಮಿಂಚಿದ್ದರು. ಒಟ್ಟು ಭಾರತ ಪರ ಆರು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನಾಡಿದ್ದಾರೆ.
“ನಾನು ಅಧಿಕೃತವಾಗಿ ನನ್ನ ಕ್ರಿಕೆಟ್ ಬೂಟುಗಳನ್ನು ನೇತು ಹಾಕುವ ಸಮಯ ಬಂದಿದೆ. ನನ್ನ ಕ್ರಿಕೆಟ್ ಜರ್ನಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. 2015 ರಲ್ಲಿ ಐಪಿಎಲ್ ಮೂಲಕ ಟ್ರಿಕೆಟ್ ಆರಂಭಿಸಿದ ನಾನು ಕನಸಾಗಿದ್ದ ಭಾರತ ತಂಡಕ್ಕೆ 2016 ರಲ್ಲಿ ಪದಾರ್ಪಣೆ ಮಾಡುವ ಸೌಭಾಗ್ಯ ಒದಗಿ ಬಂತು. ಭಾರತ ತಂಡವನ್ನು ಪ್ರತಿನಿಧಿಸುವ ಅತ್ಯುನ್ನತ ಗೌರವ ಸಿಕ್ಕಿದ್ದು ನನ್ನ ಪಾಲಿನ ಮರೆಯಲಾಗದ ನೆನಪುಗಳಲ್ಲಿಒಂದಾಗಿರಲಿದೆ” ಎಂದು ಬರೀಂದರ್ ಸ್ರಾನ್ ಭಾವನಾತ್ಮವಾಗಿ ಬರೆದುಕೊಂಡಿದ್ದಾರೆ.
https://x.com/InsideSportIND/status/1829177232696455419
ಬಾಕ್ಸರ್ ಆಗಿದ್ದ ಸ್ರಾನ್
ಬರೀಂದರ್ ಸ್ರಾನ್ ಅವರು ತಮ್ಮ ವೃತ್ತಿ ಜೀನವನ್ನು ಆರಂಭಿಸಿದ್ದು ಬಾಕ್ಸರ್ ಆಗಿ. 2008ರ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರನ್ನು ಪರಿಚಯಿಸಿದ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ಸ್ರಾನ್ ಬಾಕ್ಸರ್ ಆಗಿದ್ದರು. ಕ್ರಿಕೆಟ್ ಕಡೆ ಮರಳಲು ಕಾರಣವಾದದ್ದು ಐಪಿಎಲ್ ತಂಡವಾದ ಪಂಜಾಬ್ ಕಿಂಗ್ಸ್ ನೀಡಿದ ಒಂದು ಜಾಹಿರಾತು. ಯುವ ಆಟಗಾರ ಆಯ್ಕೆ ಟ್ರಯಲ್ಸ್ಗೆ ಕರೆ ನೀಡಿದ್ದ ಜಾಹೀರಾತು ಕಂಡ ಸ್ರಾನ್, ಕ್ರಿಕೆಟ್ನತ್ತ ಮುಖ ಮಾಡುವಂತೆ ಮಾಡಿತು. 2015ರಲ್ಲಿ ಪಂಜಾಬ್ ತಂಡದ ಪರವೇ ಆಡುವ ಮೂಲಕ ಅವರು ಐಪಿಎಲ್ ಪದಾರ್ಪಣೆ ಮಾಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ರಾನ್ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ (2019 ರ ಆವೃತ್ತಿ ವಿಜೇತ ತಂಡದ ಸದಸ್ಯ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಒಟ್ಟಾರೆ 24 ಐಪಿಎಲ್ ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತ ಪರ ಒಟ್ಟು 13 ವಿಕೆಟ್ ಕಡೆವಿದ ಸಾಧನೆ ಮಾಡಿದ್ದಾರೆ.